ರಾಷ್ಟ್ರೀಯ

ಹೂಡಿಕೆ ಇಳಿಕೆ: ಕೇಂದ್ರಕ್ಕೆ ‘ಮೂಡೀಸ್‌’ ಎಚ್ಚರಿಕೆ

Pinterest LinkedIn Tumblr

21moneywebನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಭೂಸ್ವಾಧೀನ ತಿದ್ದುಪಡಿ ಮಸೂದೆಯಂತಹ ಮಹತ್ವದ ಆರ್ಥಿಕ ಸುಧಾರಣಾ ಕ್ರಮಗಳು  ನೆನೆಗುದಿಗೆ ಬಿದ್ದಿರುವುದರಿಂದ  ಭಾರತದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಗಣನೀಯವಾಗಿ ತಗ್ಗಲಿದೆ ಎಂದು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ‘ಮೂಡೀಸ್‌’ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಮೋದಿ ಸರ್ಕಾರಕ್ಕೆ ಈ ವರ್ಷದಲ್ಲಿ ಇದುವರೆಗೆ ಯಾವುದೇ ಮಹತ್ವದ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. 2016ರ ಏಪ್ರಿಲ್‌ 1ರಿಂದ ಜಿಎಸ್‌ಟಿ ಜಾರಿಗೆ ತರುವುದಾಗಿ ಹೇಳುತ್ತಿದೆ. ಇದು ಅನಿವಾರ್ಯ ಕೂಡ. ಇಲ್ಲದಿದ್ದರೆ ಬಂಡವಾಳ ಹೂಡಿಕೆ ಭಾರಿ ಪ್ರಮಾಣದಲ್ಲಿ ಇಳಿಯಲಿದೆ ಎಂದು ಮೂಡೀಸ್‌ನ  ಉಪಾಧ್ಯಕ್ಷ ವಿಕಾಸ್‌ ಹಾಲನ್‌ ವಿಶ್ಲೇಷಿಸಿದ್ದಾರೆ.

ಡಾಲರ್‌ ವಿರುದ್ಧ ರೂಪಾಯಿ ಅಪಮೌಲ್ಯ, ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ನ ಬಡ್ಡಿ ದರ ನೀತಿ ಸೇರಿದಂತೆ ಬಾಹ್ಯ ಸಂಗತಿಗಳು ಕೂಡ ಭಾರತದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ.  ಆದರೆ,  ದೇಶದ ಆರ್ಥಿಕ ಮೂಲಾಂಶಗಳು ಸದೃಢವಾಗಿದ್ದರೆ ಹೂಡಿಕೆ ಹೆಚ್ಚುತ್ತದೆ. ಆದರೆ, ಭಾರತದಲ್ಲಿನ ಸದ್ಯದ ವಾತಾವರಣ ಉದ್ಯಮಿಗಳಿಗೆ ನಿರಾಸೆ ಮೂಡಿಸುವಂತಿದೆ ಎಂದು ಅವರು ಹೇಳಿದ್ದಾರೆ.

Write A Comment