ರಾಷ್ಟ್ರೀಯ

15 ವರ್ಷಗಳ ಬಳಿಕ ದೀಪಾವಳಿ ಆಚರಿಸಿದ ಗೀತಾ

Pinterest LinkedIn Tumblr

geetaಇಂದೋರ್: ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ಸಾದ ಕಿವುಡ, ಮೂಕ ಯುವತಿ ಗೀತಾ 15 ವರ್ಷಗಳ ಬಳಿಕ ಪ್ರಥಮ ಬಾರಿಗೆ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿದರು. ಪಟಾಕಿ ಸಿಡಿಸುವ ಮೂಲಕ, ದೀಪ ಹಚ್ಚುವ ಮೂಲಕ ಗೀತಾ ದೀಪಗಳ ಹಬ್ಬವನ್ನು ಖುಷಿ ಖುಷಿಯಾಗಿ ಆಚರಿಸಿದರು.

ಪಾಕಿಸ್ತಾನದಿಂದ ಹಿಂತಿರುಗಿರುವ ಗೀತಾ ಪೋಷಕರು ಯಾರೆಂದು ಇನ್ನೂ ಪತ್ತೆಯಾಗದ ಕಾರಣಕ್ಕೆ 23ರ ಹರೆಯದ ಗೀತಾ ಇಂದೋರ್‌ನಲ್ಲಿರುವ ಶ್ರವಣದೋಷವುಳ್ಳವರಿಗಾಗಿ ಇರುವ ಸ್ವಯಂ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ.

ಇಂದೋರ್‌ನಲ್ಲಿ ಗೀತಾ ಸಂತಷವಾಗಿದ್ದಾಳೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರಾದ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ

8 ವರ್ಷದವಳಾಗಿದ್ದಾಗ ಆಕಸ್ಮಿಕವಾಗಿ ಸಂಝೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಅನಾಥವಾಗಿ ಪಾಕಿಸ್ತಾನ ತಲುಪಿದ್ದ ಹುಡುಗಿಯನ್ನು, ಪಾಕ್‌ನ ಈಧಿ ಫೌಂಡೇಶನ್‌ನ ಬಿಲ್ಕ್ವೀಸ್ ಈಧಿ ದತ್ತು ತೆಗೆದುಕೊಂಡಿದ್ದರು. ಹೆಸರು ಹೇಳಲಾಗದ ಮೂಕ ಹುಡುಗಿಗೆ ಅವರೇ ‘ಗೀತಾ’ ಎಂಬ ಹೆಸರನ್ನೂ ಇಟ್ಟಿದ್ದರು.

Write A Comment