ರಾಷ್ಟ್ರೀಯ

ಬಿಹಾರ ವಿಧಾನಸಭೆ ಚುನಾವಣೆ: ಶೇ. 58ರಷ್ಟು ಶಾಸಕರಿಗೆ ಕ್ರಿಮಿನಲ್ ಹಿನ್ನೆಲೆ

Pinterest LinkedIn Tumblr

biharಪಾಟ್ನಾ: ಬಿಹಾರದಲ್ಲಿ ಮಹಾಮೈತ್ರಿಕೂಟ ಜಯಗಳಿಸಿ ಅಧಿಕಾರದ ಗದ್ದುಗೆಗೆ ಏರಿದೆ. ಆದರೆ ಆರ್‌ಜೆಡಿ ಸದಸ್ಯರೂ ಸೇರಿರುವ ಮಹಾಮೈತ್ರಿಕೂಟವು ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದೇ ಪ್ರಶ್ನೆಯಾಗಿದೆ. ಏಕೆಂದರೆ ನೂತನವಾಗಿ ಆಯ್ಕೆಯಾದ ಬಿಹಾರದ 243 ಶಾಸಕರ ಪೈಕಿ ಶೇ. 58ರಷ್ಟು ಅಂದರೆ 142 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಧ್ಯಯನವೊಂದು ಹೇಳಿದೆ.

ಕ್ರಿಮಿನಲ್ ಹಿನ್ನೆಲೆಯಿರುವ 70 ಸದಸ್ಯರ ವಿರುದ್ಧ ಆರೋಪಪಟ್ಟಿ ರೂಪಿಸಲಾಗಿದೆ ಎಂದು ವರದಿ ತಿಳಿಸಿದೆ. ಕ್ರಿಮಿನಲ್ ಕೇಸ್ ಇದೆಯೆಂದು ಘೋಷಣೆ ಮಾಡಿರುವ 142 ಶಾಸಕರ ಪೈಕಿ ಶೇ.49ರಷ್ಟು ಅಂದರೆ 70 ಶಾಸಕರು ತಮ್ಮ ವಿರುದ್ಧ ಕೋರ್ಟ್ ಆರೋಪ ರೂಪಿಸಿದೆ ಎಂದು ಘೋಷಿಸಿರುವುದಾಗಿ ಅದು ತಿಳಿಸಿದೆ.

11 ಮಂದಿ ಶಾಸಕರ ಮೇಲೆ ಹತ್ಯೆ ಮತ್ತು ಹತ್ಯೆಯತ್ನದ ಪ್ರಕರಣಗಳಿವೆ.ಅವರ ಪೈಕಿ ನಾಲ್ವರು ಶಾಸಕರು ಆರ್‌ಜೆಡಿಗೆ ಸೇರಿದ್ದಾರೆ. ಇಷ್ಟೊಂದು ಜನ ಕ್ರಿಮಿನಲ್ ಹಿನ್ನಲೆಯ ಜನರನ್ನು ಹೊಂದಿರುವ ವಿಧಾನಸಭೆಯಲ್ಲಿ ಶಾಸಕರು ಸನ್ನಡತೆಯಿಂದ ಇರುತ್ತಾರೋ ಅಥವಾ ತಮ್ಮ ಹಳೆಯ ಚಾಳಿಯನ್ನು ಬಿಚ್ಚುತ್ತಾರೋ ಎನ್ನುವ ಪ್ರಶ್ನೆ ಮೂಡಿದೆ.

Write A Comment