ರಾಷ್ಟ್ರೀಯ

ದೀಪಾವಳಿಯಿಂದ ಅತಿ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿವೆ ಔಷಧಗಳು.!

Pinterest LinkedIn Tumblr

drನವದೆಹಲಿ, ನ.2- ಸಕ್ಕರೆ ಕಾಯಿಲೆ (ಶುಗರ್, ಡಯಾಬಿಟಿಸ್), ಅಧಿಕ ರಕ್ತದೊತ್ತಡ (ಹೈಪರ್ ಟೆನ್ಷನ್) ಹಾಗೂ ರಕ್ತಹೀನತೆ (ನ್ಯುಮೋನಿಯಾ)ಯಿಂದ ಬಳಲುತ್ತಿರುವವರಿಗೊಂದು ಸಂತಸದ ಸುದ್ದಿ ಕಾದಿದೆ.
ನಾಳೆ ದೀಪಾವಳಿ ಹಬ್ಬದಿಂದ ಈ ಕಾಯಿಲೆಗಳಿಗಾಗಿ ಬಳಸುವ ಔಷಧ ಸಾಮಗ್ರಿಗಳು ಅತಿ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ಹೇಳಿದೆ.
ಈ ಮೂರೂ ಕಾಯಿಲೆಗಳಿಂದ ನರಳುವ ರೋಗಿಗಳಿಗೆ ಅಗತ್ಯವಿರುವ 18ಕ್ಕೂ ಹೆಚ್ಚಿನ ಹೊಸ ಬ್ರ್ಯಾಂಡ್ ಔಷಧಗಳು ಇನ್ನು ಕೇವಲ 15 ದಿನಗಳೊಳಗಾಗಿ ಅಗ್ಗದ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
2013ರ ಡ್ರಗ್ಸ್ ಪ್ರೈಸ್ ಕಂಟ್ರೋಲ್ ಆರ್ಡರ್ (ಡಿವಿಸಿಒ) ಕಾಯ್ದೆಯ ಅಧಿನಿಯಮದ ಪ್ರಕಾರ  ಈ ಎಲ್ಲ ಬ್ರಾಂಡ್‌ನ ಔಷಧಗಳನ್ನೂ ನಿಗದಿತ ಚಿಲ್ಲರೆ ಮಾರಾಟ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದು ಔಷಧ ಉತ್ಪಾದನಾ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಹಾಗಾಗಿ ಮಧುಮೇಹ (ಸಕ್ಕರೆ ಕಾಯಿಲೆ), ಅಧಿಕ ರಕ್ತದೊತ್ತಡ (ಬಿಪಿ) ಹಾಗೂ ರಕ್ತಹೀನತೆಯ ಕಾಯಿಲೆಗಳಿಗೆ ಎನ್‌ಪಿಪಿಎ ದರ ನಿಗದಿ ಮಾಡಿ ಆದೇಶ ನೀಡಿದೆ. ಯಾವುದೇ ಉತ್ಪಾದನಾ ಕಂಪೆನಿಗಳು ಅಥವಾ ಮಾರಾಟಗಾರರು ಈ ಆದೇಶ ಉಲ್ಲಂಘಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ, ದಂಡ ವಿಧಿಸುವ ಅವಕಾಶವನ್ನೂ 2013ರ ಕಾಯ್ದೆ ಒದಗಿಸುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

Write A Comment