ರಾಷ್ಟ್ರೀಯ

ಸೋಮನಾಥ್ ಭಾರ್ತಿ ಪತ್ತೆಗಾಗಿ ಅವರ ನಾಯಿಯನ್ನು ಎತ್ತಿ ಹಾಕಿಕೊಂಡು ಬಂದ್ ದೆಹಲಿ ಪೊಲೀಸರು

Pinterest LinkedIn Tumblr

somaನವದೆಹಲಿ, ಸೆ.26-ದೆಹಲಿ ಸರ್ಕಾರದ ಕಾನೂನು ಖಾತೆ ಮಾಜಿ ಸಚಿವ ಸೋಮನಾಥ್ ಭಾರ್ತಿ ಹಾಗೂ ಪೊಲೀಸರ ನಡುವಿನ ಕಳ್ಳ-ಪೊಲೀಸ್ ಆಟ ಮುಂದುವರೆದಿರುವಂತೆಯೇ ತಲೆಮರೆಸಿಕೊಂಡಿದ್ದ ಮಾಜಿ ಸಚಿವನ ಅಡಗುದಾಣವನ್ನು ಪತ್ತೆ ಹಚ್ಚಿರುವುದಾಗಿ ಹೇಳಿರುವ ದೆಹಲಿ ಪೊಲೀಸರು, ಭಾರ್ತಿ ಅವರ ನಾಯಿಯನ್ನು ಎತ್ತಿ ಹಾಕಿಕೊಂಡು ಬಂದಿದ್ದಾರೆ.

ಕೌಟುಂಬಿಕ ದೌರ್ಜನ್ಯದಡಿ ಪತ್ನಿ ದೂರು ಸಲ್ಲಿಸಿದ ದಿನದಿಂದ ತನ್ನ ನಾಯಿಯೊಂದಿಗೆ ತಲೆಮರೆಸಿಕೊಂಡಿದ್ದ ಆಮ್ ಆದ್ಮಿ ಪಾರ್ಟಿ ಶಾಸಕನನ್ನು ಪತ್ತೆ ಹಚ್ಚಲು ಪೊಲೀಸರು ತಿಣುಕಾಡುತ್ತಿದ್ದರು. ಸೋಮನಾಥ್ ಭಾರ್ತಿ ಅವರು ಹರ್ಯಾಣ ಹಾಗೂ ಉತ್ತರ ಪ್ರದೇಶದ ದಕ್ಷಿಣ ಭಾಗದಲ್ಲೆಲ್ಲೊ ಅಡಗಿದ್ದಾರೆ ಎಂಬುದನ್ನು ತಾವು ಕಂಡುಹಿಡಿದಿರುವುದಾಗಿ ಹೇಳಿರುವ ಪೊಲೀಸರು,

ಆಪ್ ಶಾಸಕನ ದಕ್ಷಿಣ ದೆಹಲಿಯ ಮಾಲವೀಯನಗರದಲ್ಲಿರುವ ಅವರ ನಿವಾಸದಿಂದ ಭಾರ್ತಿ ಪ್ರೀತಿಪಾತ್ರವಾದ ಡಾನ್ ಎಂಬ ಲ್ಯಾಬ್ರಡಾರ್ ನಾಯಿಯನ್ನು ಹಿಡಿದು ತಂದಿದ್ದಾರೆ.  ಪದೇ ಪದೇ ಸ್ಥಳ ಹಾಗೂ ಮೊಬೈಲ್ ಸಂಖ್ಯೆಗಳನ್ನು ಬದಲಿಸುತ್ತಿದ್ದ ಭಾರ್ತಿ ಪತ್ತೆ ಪೊಲೀಸರಿಗೆ ಸವಾಲಾಗಿತ್ತು.

Write A Comment