ಮನೋರಂಜನೆ

ಶರ್ಮಾ ವಿರುದ್ಧ ಸನ್ನಿ ಕೇಸು

Pinterest LinkedIn Tumblr

sannuyನೀಲಿರಾಣಿ ಎಂದೇ ಖ್ಯಾತಳಾಗಿದ್ದರೂ ತನ್ನ ಅಮೋಘ ಅಭಿನಯ, ಪ್ರತಿಭೆಗಳಿಂದ ಪ್ರಸಕ್ತ ಬಾಲಿವುಡ್‌ನಲ್ಲಿ ಒಳ್ಳೆಯ ಕಲಾವಿದೆಯಾಗಿ ಮೂಡಿ ಬಂದಿರುವ ಬೆಡಗಿ ಸನ್ನಿ ಲಿಯೋನ್ ಶೀಘ್ರದಲ್ಲೇ ಬಿಟೌನ್‌ನ ಚಿತ್ರ ತಯಾರಕನೊಬ್ಬನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಿದ್ದಾಳಂತೆ.

ಹೌದು, ನಿರ್ದೇಶಕ ಕಾಂತಿಶರ್ಮ ವಿರುದ್ಧ ಸನ್ನಿ ಮತ್ತವಳ ಪತಿ ಡೇನಿಯಲ್ ಇಬ್ಬರೂ ಕೂಡಿ ಈ ಮೊಕದ್ದಮೆ ದಾಖಲಿಸುವುದು ಖಚಿತವಂತೆ. ಅಂದಹಾಗೆ ಯಾಕೆ ಈ ಮೊಕದ್ದಮೆ ಅಂತೀರಾ…

ಕಾಂತಿ ಶರ್ಮಾ ಈಗ ಸನ್ನಿ ಕುರಿತಾದ ಸಿನಿಮಾ ಒಂದನ್ನು ತಯಾರಿಸಲು ಸಿದ್ಧತೆ ನಡೆಸಿದ್ದಾರೆ. ಆ ಚಿತ್ರದ ಹೆಸರು ‘ಮೈನ್ ಸನ್ನಿ ಲಿಯೋನ್ ಬನ್ನ ಚಹಿ ಹೂ’ ಅಂತ. ಈ ಚಿತ್ರದಲ್ಲಿ ಈ ಹಿಂದೆ ಅವಳು ನೀಲಿ ಚಿತ್ರಗಳಲ್ಲಿ ವಿಜೃಂಭಿಸಿದ್ದು ಸೇರಿದಂತೆ ಇನ್ನೂ ಕೆಲವು ಕ್ಷುಲ್ಲಕ ವಿಷಯಗಳನ್ನು ಶರ್ಮಾ ಪ್ರಸ್ತಾಪಿಸಿದ್ದಾನಂತೆ.

ತಾನು ಆ ವ್ಯವಸ್ಥೆ ಬಿಟ್ಟು ಬಾಲಿವುಡ್‌ನಲ್ಲಿ ಉತ್ತಮ ನಟಿಯಾಗಿದ್ದರೂ ಈಗ ಅನಗತ್ಯವಾಗಿ ಅವನ್ನೆಲ್ಲ ಕದಡುವುದು ಸರಿಯೇ… ಹೋಗಲಿ, ಚಿತ್ರಕ್ಕೆ ಮುನ್ನ ನನ್ನ ಒಂದು ಮಾತು ಕೇಳಬೇಕಲ್ಲವೇ… ಯಾವುದೂ ಇಲ್ಲ. ಅದಕ್ಕೇ ಈ ಮೊಕದ್ದಮೆಯಂತೆ.

Write A Comment