ಕರ್ನಾಟಕ

ಮುಖ್ಯಮಂತ್ರಿಗಳ ಸಭೆ ಕರೆಯಲು ಪ್ರಧಾನಿಗೆ ಎಂ.ಬಿ.ಪಾಟೀಲ್ ಆಗ್ರಹ

Pinterest LinkedIn Tumblr

mbಬೆಂಗಳೂರು, ಸೆ.26-ಮಹದಾಯಿ-ಮಲಪ್ರಭ ನದಿ ಜೋಡಣೆ ಮತ್ತು ಕಳಸಾ ಬಂಡೂರಿ ನಾಲಾ ಯೋಜನೆ ವಿಷಯವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂಗಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳಸಾ ಬಂಡೂರಿ ನಾಲಾ ವಿಷಯದಲ್ಲಿ ರೈತರ ಹಿತರಕ್ಷಣೆಗೆ ಬದ್ಧವಾಗಿದೆ. ಗೋವಾ ಸರ್ಕಾರದ ಅರ್ಜಿಯ ಮೇಲೆ ರಚನೆಯಾಗಿರುವ ನ್ಯಾಯಾಧೀಕರಣದಲ್ಲಿ ರಾಜ್ಯ ಸರ್ಕಾರ ಸಮರ್ಥವಾದ ಮಂಡಿಸಲಿದೆ. ನಮ್ಮ ರೈತರ ಹಕ್ಕಿನ ನೀರನ್ನು ಪಡೆದುಕೊಳ್ಳಲು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೊದಲು ಕಾಂಗ್ರೆಸ್ ನಾಯಕರು ಕಳಸಾ ಬಂಡೂರಿಗೆ ಗೋವಾ ರಾಜ್ಯದ ಕಾಂಗ್ರೆಸ್ ನಾಯಕರ ಮನವೊಲಿಸಲಿ ಎಂದು ಬಿಜೆಪಿ ನಾಯಕರು ತಿರುಗೇಟು ನಿಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಪ್ರಧಾನ ಮಂತ್ರಿಯವರು ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ನಮ್ಮ ಒತ್ತಾಯ. ಕಾಂಗ್ರೆಸ್ ನಾಯಕರ ಮಧ್ಯ ಪ್ರವೇಶಕ್ಕೆ ಆಗ್ರಹಿಸುತ್ತಿರುವ ಯಡಿಯೂರಪ್ಪನವರು ಪ್ರಧಾನಮಂತ್ರಿಯಾಗಿಲ್ಲ. ಅನಗತ್ಯವಾಗಿ ಎಲ್ಲವನ್ನೂ ಟೀಕೆ ಮಾಡಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಮೊದಲು ಸಭೆ ಕರೆಯಲಿ ಆನಂತರ ಸಮಸ್ಯೆ ಪರಿಹರಿಸಲು ಚರ್ಚೆ ನಡೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

Write A Comment