ರಾಷ್ಟ್ರೀಯ

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು: ನರೇಂದ್ರ ಮೋದಿ

Pinterest LinkedIn Tumblr

modi-baatನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್ ‘ ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಅವರ ಇಂದಿನ ಭಾಷಣದ ಮುಖ್ಯಾಂಶಗಳು:

ನನ್ನ ಮನ್ ಕಿ ಬಾತ್ ಕಾರ್ಯಕ್ರಮದ 12ನೇ ಅವತರಣಿಕೆ ಇಂದು. ಈ ಕಾರ್ಯಕ್ರಮ ಆರಂಭಿಸಿ ಒಂದು ವರ್ಷವಾಗುತ್ತಾ ಬಂತು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಕಾರ್ಯಕ್ರಮ ಆರಂಭಿಸಿದೆ.
ಒಂದು ವರ್ಷದಲ್ಲಿ ಅನೇಕ ವಿಷಯಗಳನ್ನು ನಿಮ್ಮಿಂದ ನಾನು ಕಲಿತೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ ಶಕ್ತಿಯೇ ಇಲ್ಲಿ ಮುಖ್ಯವಾಗುತ್ತದೆ. ಜನರು ನೀಡುವ  ಸಲಹೆಗಳನ್ನು ಸರ್ಕಾರದ ವಿವಿಧ ಇಲಾಖೆಗಳು ವಿಶ್ಲೇಷಿಸುತ್ತವೆ.
ನಾನು ದೇಶದ ಪ್ರಜೆಗಳಿಂದ ಅಭಿಪ್ರಾಯ, ಸಲಹೆಗಳನ್ನು ಕೇಳಿದೆ. ಇದಕ್ಕೆ ಜನರು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಅನೇಕ ವಿಷಯಗಳನ್ನು ದೇಶದ ಜನತೆಯಿಂದ ನಾನು ಕಲಿತುಕೊಂಡೆ.

ತಳಮಟ್ಟದಿಂದ ಮೇಲ್ಮಟ್ಟದವರೆಗೆ ಮಾಹಿತಿಗಳನ್ನು ಅನುಸರಿಸುವುದು ಮತ್ತು ಮಾರ್ಗದರ್ಶನವನ್ನು ಕೂಡ ಬುಡದಿಂದ ಮೇಲಿನವರೆಗೆ ಅನುಸರಿಸಬೇಕಾಗಿರುವುದು ಆಡಳಿತದ ಮೂಲಭೂತ ತತ್ವಗಳಾಗಿವೆ. ಸಬ್ಸಿಡಿ ಸಿಲಿಂಡರ್ ನ್ನು ಬಡಜನತೆಗೆ ಬಿಟ್ಚುಕೊಡುವ ‘ಗಿವ್ ಇಟ್ ಅಪ್’ ಯೋಜನೆಗೆ ಇದುವರೆಗೆ ದೇಶದ ಸುಮಾರು 30 ಲಕ್ಷ ಮಂದಿ ಸ್ಪಂದಿಸಿದ್ದು, ತಮಗೆ ಖುಷಿಯನ್ನು ತಂದಿದೆ. ಇದೊಂದು ಮೌನ ಕ್ರಾಂತಿ.
ಸಬ್ಸಿಡಿ ಸಿಲಿಂಡರನ್ನು ಬಿಟ್ಟುಕೊಟ್ಟವರಲ್ಲಿ ಎಲ್ಲರೂ ಶ್ರೀಮಂತರಲ್ಲ. ಇದೊಂದು ಉತ್ತಮ ಬೆಳವಣಿಗೆ. ದೇಶದ ನಾಗರಿಕರು ಸರ್ಕಾರದ ಆಡಳಿತದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು MyGov.in ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಬಹುದು.
ದೇಶದ ಜನತೆಯಲ್ಲಿ ಖಾದಿ ಉತ್ಪನ್ನಗಳನ್ನು ಖರೀದಿಸುವಂತೆ ನೀಡಿದ ಕರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ಖಾದಿ ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
ದೂರವಾಣಿ ಮೂಲಕ ನಿಮ್ಮ ಅನಿಸಿಕೆ, ಸಂದೇಹಗಳನ್ನು ಹಂಚಿಕೊಳ್ಳಿ ಎಂದು ಕೇಳಿಕೊಂಡದ್ದಕ್ಕೆ 55 ಸಾವಿರ ಕರೆಗಳು ನನಗೆ ಬಂದಿವೆ.
ಸ್ವಚ್ಛತೆ ಬಗ್ಗೆ ದೇಶದ ಜನತೆಗೆ ಕರೆ ನೀಡಿದೆವು. ಕೆಲವರು ಇದನ್ನು ಟೀಕಿಸಿದರು. ಆದರೆ ಇದೊಂದು ಕೆಟ್ಟ ಅಥವಾ ನಿಷ್ರಯೋಜಕ ವಿಷಯವಲ್ಲ.

ಇನ್ನೊಂದು ಮುಖ್ಯವಾದ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ ಮೇ ತಿಂಗಳಲ್ಲಿ ಕೋಲ್ಕತ್ತಾ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದವರನ್ನು ಭೇಟಿ ಮಾಡಿದೆ.

ಮಾಜಿ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 50 ಕ್ಕೂ ಹೆಚ್ಚು ಮಂದಿ ಕುಟುಂಬಸ್ಥರು ಮತ್ತು ಸಂಬಂಧಿಕರು ತಮ್ಮ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅವರು ವಿವಿಧ ದೇಶಗಳಿಂದ ಆಗಮಿಸುತ್ತಾರೆ.
ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 130 ದಾಖಲೆಗಳು ಕೇಂದ್ರ ಸರ್ಕಾರದ ಬಳಿ ಇದ್ದು, ಮೊನ್ನೆ ಪಶ್ಚಿಮ ಬಂಗಾಲ ಸರ್ಕಾರ ನೇತಾಜಿ ಕಡತಗಳನ್ನು ಬಿಡುಗಡೆ ಮಾಡಿರುವ ಸಂದರ್ಭದಲ್ಲಿ ಪ್ರಧಾನಿಯವರ ಹೇಳಿಕೆ ಮುಖ್ಯ.
ಚುನಾವಣಾ ಆಯೋಗ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಮತದಾರ ಸ್ನೇಹಿಯಾಗಿದೆ.ಬಿಹಾರ ಚುನಾವಣೆ ಸಂದರ್ಭವಾಗಿರುವುದರಿಂದ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರಸಾರ ಮಾಡುವುದಕ್ಕೆ ತಡೆಹಿಡಿಯಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ನೀಡಿದ್ದ ಮನವಿಯನ್ನು ಆಯೋಗ ತಿರಸ್ಕರಿಸಿತ್ತು.

ಕಳೆದ ಒಂದು ವರ್ಷದಿಂದ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಾರ್ಯಕ್ರಮಗಳ ಪ್ರಸ್ತಾಪ.

Write A Comment