ರಾಷ್ಟ್ರೀಯ

ನಾಸಿಕ್‌ನಲ್ಲಿ ಪವಿತ್ರ ಶಾಹಿ ಸ್ನಾನಕ್ಕೆ ಚಾಲನೆ

Pinterest LinkedIn Tumblr

nasikನಾಸಿಕ್, ಸೆ.13- ಕುಂಭಮೇಳ ಪ್ರಯುಕ್ತ ಇಲ್ಲಿನ ಪವಿತ್ರ ಗೋದಾವರಿ ನದಿ ತೀರದಲ್ಲಿ ಎರಡನೆ ಶಾಹಿ ಸ್ನಾನ್ (ಪವಿತ್ರ ಸ್ನಾನ)ಗೆ ಇಂದು ಚಾಲನೆ ದೊರಕಿತು. ನಾಸಿಕ್ ಮತ್ತು ತ್ರಿಂಬಕೇಶ್ವರದಲ್ಲಿ ನಡೆಯುತ್ತಿರುವ ಶಾಹಿ ಸ್ನಾನಕ್ಕೆ ದೇಶದ ವಿವಿಧ ಭಾಗಗಳಿಂದ ಮಠಾಧೀಶರು, ಸಾಧು-ಸಂತರು ಆಗಮಿಸಿ ನಿರ್ಮೋಹಿ , ನಿರ್ವಾಣಿ, ದಿಗಂಬರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ಬೆಳಗಿನಿಂದಲೇ ಆಗಮಿಸಿದ್ದ ಭಕ್ತರಿಗಾಗಿ ಮೂರು ಕಡೆ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಿರ್ಮೋಹಿ , ನಿರ್ವಾಣಿ, ದಿಗಂಬರ್, ತಪೋವನದಿಂದ ರಾಮ ಕುಂಡದವರೆಗೂ ಭಕ್ತಾದಿಗಳು ಸ್ನಾನದಲ್ಲಿ ಮಿಂದಿದ್ದು , ಪುನೀತರಾದರು. ತ್ರಿಂಬೇಶ್ವರ, ಮಹಂತ ಮತ್ತು ಮಠಾಧಿಪತಿಗಳು ಶಿವನ ಭಕ್ತರಾಗಿದ್ದು , ತಪೋವನದಲ್ಲಿ ಪವಿತ್ರ ಸ್ನಾನ ಮಾಡಿದರೆ ಕೆಲವರು ರಾಮಕುಂಡದಲ್ಲಿ ಶಾಹಿ ಸ್ನಾನ ಮಾಡಿದರು.

ದೇಶದ ನಾನಾ ಭಾಗಗಳಿಂದ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಸಿಐಎಸ್‌ಎಫ್, ಸಿಆರ್‌ಪಿಎಫ್, ಬಿಎಸ್‌ಎಫ್ , ಕ್ಷಿಪ್ರ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆಯಬಹುದೆಂಬ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿತ್ತು. ಮೂರನೆ ಮತ್ತು ನಾಲ್ಕನೆ ಶಾಹಿ ಸ್ನಾನ ಇದೇ 18 ಮತ್ತು 25ರಂದು ನಡೆಯಲಿದೆ.

Write A Comment