ಮನೋರಂಜನೆ

ಓಟದಲ್ಲಿ ಗಿನ್ನೆಸ್‌ ದಾಖಲೆ ಬರೆದ ಆಮೆಗಳ ‘ಉಸೇನ್‌ ಬೋಲ್ಟ್’

Pinterest LinkedIn Tumblr

usanಆಮೆಯ ನಡಿಗೆಯೇ ನಿಧಾನ. ಆದರೆ, ಇಲ್ಲೊಂದು ಆಮೆ ವೇಗದಲ್ಲಿ ಉಸೇನ್‌ ಬೋಲ್ಟ್ಗೆ ಸರಿಸಾಟಿ ಎನಿಸಿಕೊಂಡಿದೆ. ಅರೆ, ಅದಾವುದಪ್ಪಾ ಉಸೇನ್‌ ಬೋಲ್ಟ್ನನ್ನೇ ಹಿಂದಿಕ್ಕಿದ ಆಮೆ ಎಂದು ಗಾಬರಿ ಆಗಬೇಡಿ. ಬ್ರಿಟನ್‌ನ ಡರ್ಹಾಮ್‌ ಪ್ರಾಂತ್ಯದ ಎಡ್ವೆಂಚರ್‌ ವ್ಯಾಲಿಯ ಬೆರ್ಟೈ ಎಂಬ ಹೆಸರಿನ ಗಂಡು ಆಮೆಯೊಂದು 5.48 ಮೀಟರ್‌ ದೂರವನ್ನು ಕೇವಲ 19.59 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ನೂತನ ಗಿನ್ನೆಸ್‌ ದಾಖಲೆಗೆ ಪಾತ್ರವಾಗಿದೆ. ಈ ಮೂಲಕ 1977ರಲ್ಲಿ ನ್ಯಾಷನಲ್‌ ಟಾರ್ಟೊಯ್ಸ ಚಾಂಪಿಯನ್‌ ಶಿಪ್‌ನಲ್ಲಿ ನಿರ್ಮಾಣವಾಗಿದ್ದ 43.7 ಸೆಕೆಂಡ್‌ಗಳ ಓಟದ ದಾಖಲೆಯನ್ನು ಪುಡಿಗಟ್ಟಿದೆ.

ಗಂಟೆಗೆ 0.6 ಮೈಲಿ ವೇಗದಲ್ಲಿ ಓಡುವ ಮೂಲಕ ರೇಸ್‌ನಲ್ಲಿ ಮೊದಲ ಸ್ಥಾನವನ್ನು ಬೆರ್ಟೈ ಗಳಿಸಿಕೊಂಡಿದೆ. ಅದೇ ವೇಗದಲ್ಲಿ ಓಡಿದ್ದರೆ 100 ಮೀಟರ್‌ ದೂರವನ್ನು 6 ನಿಮಿಷದಲ್ಲಿ ಪೂರ್ಣಗೊಳಿಸುತ್ತಿತ್ತು. ಬೆಟೈìಗೆ ಈಗಷ್ಟೇ 10 ವರ್ಷದ ಪ್ರಾಯ. ಬೆರ್ಟೈ ಕಳೆದ ವರ್ಷ ಜುಲೈನಲ್ಲಿ ಆಯೋಜಿಸಿದ್ದ ಸ್ಪರ್ಧೆಯ ವೇಳೆ ಆಮೆ ಜಗತ್ತಿನ ಅತಿವೇಗದ ಸರದಾರ ಎನಿಸಿಕೊಂಡಿತ್ತು. ಅದರ ಸಾಹಸ ಗಿನ್ನೆಸ್‌ ದಾಖಲೆ ಪುಸ್ತಕದ 2016ರ ಆವೃತ್ತಿಯಲ್ಲಿ ಸೇರ್ಪಡೆಗೊಳ್ಳಲಿದೆ. ಆದರೆ, ಅಂದು ಆಮೆ ಹೇಗೆ ರೇಸ್‌ಅನ್ನು ಗೆದ್ದುಕೊಂಡಿತ್ತು. ಅದು ಹೇಗೆ ಓಡುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಬೆರ್ಟೈನ ಓಟದ ಪರಿಯನ್ನು ಟೀವಿಯಲ್ಲಿ ತೋರಿಸುವ ಸಲುವಾಗಿ ಮತ್ತೂಂಮ್ಮೆ ರೇಸ್‌ಅನ್ನು ಆಯೋಜಿಸಲು ಅದರ ಒಡತಿ ಉದ್ದೇಶಿದ್ದಾಳಂತೆ.
-ಉದಯವಾಣಿ

Write A Comment