ಮನೋರಂಜನೆ

ರಾಣಿ ಮುಖಜಿಱಗೆ ‘ಆಂಟಿ’ ಅಂದ ಶೃತಿ ಕಮಲಹಾಸನ್

Pinterest LinkedIn Tumblr

ರ಻ನಿಅದೊಂದು ಅಪರೂಪದ ಕ್ಷಣ. ಇಂಗ್ಲೆಂಡಿನ ಮಹಾರಾಣಿ ಎಲಿಜಬೆತ್ ಅವರನ್ನು ನನ್ನ ಮಗಳು ಶೃತಿ (ಶೃತಿ ಹಾಸನ್) ‘ಆಂಟೀ’ ಅಂತ ಕರೆದಿದ್ಲು… ಹೀಗೊಂದು ಫ್ಲಾಷ್‌ಬ್ಯಾಕ್‌ಗೆ ಜಾರಿದ್ದು ಖ್ಯಾತ ನಟ ಕಮಲ್‌ಹಾಸನ್.
1997ರಲ್ಲಿ ಕಮಲ್ ಹಾಸನ್ ಚೆನ್ನೈನಲ್ಲಿ (ಆಗ ಮದ್ರಾಸ್) 20 ಕೋಟಿ ರೂ. ವೆಚ್ಚದ ‘ಮರುದನಾಯಗಂ’ ಸಿನಿಮಾ ಚಿತ್ರೀಕರಣ ಆರಂಭಕ್ಕೆ ರಾಣಿ ಎಲಿಜಬೆತ್ ಬಂದಿದ್ದರಂತೆ. ಶೃತಿ ಆಗಿನ್ನೂ ಪುಟ್ಟ ಕಂದ. ಸುಮಾರು 20 ನಿಮಿಷ ಮಹಾರಾಣಿ ಜತೆಗಿದ್ದ ಈ ಮುದ್ದು ಕೂಸು, ‘ಡ್ಯಾಡ್ ಐ ಲೈಕ್ ದಿಸ್ ಆಂಟಿ ವೆರಿಮಚ್..’ ಅಂದಿದ್ದಳಂತೆ.

ಅಂದರೆ ರಾಣಿ ಆ ಮಗುವಿನ ಮೇಲೆ ಅಷ್ಟು ಗಾಢ ಪರಿಣಾಮ ಬೀರಿದ್ದಳಂತೆ. ಹಾಗೆ ಮಕ್ಕಳ ಮೇಲೆ ಪ್ರಭಾವ ಬೀರುವ ವ್ಯಕ್ತಿಯ ವ್ಯಕ್ತಿತ್ವ ವಿಶೇಷವಾಗಿರಲೇಬೇಕು ಅಂತಾರೆ  ಕಮಲ್. ಭಾರತ ಬ್ರಿಟಿಷ್ ಆಡಳಿತದಿಂದ ಮುಕ್ತವಾದ ನಂತರದ 50 ವರ್ಷಗಳ ನಂತರ ರಾಣಿ ಭಾರತಕ್ಕೆ ಬಂದಿದ್ದ ಪ್ರಸಂಗವದು ಎಂದು ಸ್ಮರಿಸಿದ್ದಾರೆ ಕಮಲ್.

Write A Comment