ನಾಲ್ಕು ಮಂದಿ ಒಟ್ಟಾಗಿ ಅತ್ಯಾಚಾರ ನಡೆಸಲು ಸಾಧ್ಯವೇ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ಅತ್ಯಾಚಾರ ನಡೆಸಿದ ಅನುಭವವಿದೆಯೇ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶ್ನಿಸಿ ವಿವಾದಕ್ಕೆ ಕಾರಣರಾಗಿದ್ದಾರೆ.
ನವಾಡಾದ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡಿದ ಗಿರಿರಾಜ್ ಸಿಂಗ್ ಸಾಮೂಹಿಕ ಅತ್ಯಾಚಾರ ಸಾಧ್ಯವಿಲ್ಲ ಎಂಬುದು ಮುಲಾಯಂ ಸಿಂಗ್ ಅವರ ಬಲವಾದ ನಂಬಿಕೆ. ಅವರು ದೊಡ್ಡವರು, ಆದರೂ ಕೇಳುತ್ತೇನೆ, ನಿಮಗೇನಾದರೂ ಅತ್ಯಾಚಾರ ಎಸಗಿದ ಯಾವುದಾದರೂ ಅನುಭವ ಇದೆಯೇ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಮುಲಾಯಂ ಸಿಂಗ್ ಯಾದವ್, ಪ್ರಾಯೋಗಿಕವಾಗಿ ನಾಲ್ವರಿಂದ ಅತ್ಯಾಚಾರ ಅಸಾಧ್ಯ. ಒಬ್ಬ ವ್ಯಕ್ತಿ ರೇಪ್ ಮಾಡಿದರೆ, ದೂರಿನಲ್ಲಿ ನಾಲ್ವರ ಹೆಸರನ್ನು ನಮೂದಿಸುತ್ತಾರೆ ಇದು ಸರಿಯಲ್ಲ ಎನ್ನುವ ಮೂಲಕ ವಿವಾದಕ್ಕೆ ಕಾರಣರಾಗಿದ್ದನ್ನಿಲ್ಲಿ ಸ್ಮರಿಸಬಹುದು.