ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದೀರಾ..? ಪದೇ ಪದೇ ಇಂಟರ್ ನೆಟ್ ಪ್ಯಾಕ್ ಗೆ ಹಣ ಕೇಳ್ತಾರಾ, ಎಷ್ಟೊತ್ತಿಗೂ ಇಂಟರ್ ನೆಟ್ ನಲ್ಲಿಯೇ ಇರ್ತಾರೆ ಅಂತೀರಾ..? ‘ಆ’ ಚಿತ್ರ ನೋಡ್ತಾರೆ ಅನ್ನೋ ಭಯ ನಿಮಗಿದ್ಯಾ..? ಆದರೆ ಇದಕ್ಕಿಂತ ಆಘಾತಕಾರಿಯಾದ ವಿಷಯವೊಂದು ಸಂಶೋಧನೆಯಿಂದ ಹೊರಬಿದ್ದಿದೆ.
ಹೌದು. ದೇಶದ ಮಹಾನಗರಗಳು ಸೇರಿದಂತೆ ಹಲವು ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಲೈಂಗಿಕ ಕ್ರಿಯೆ ನಡೆಸುತ್ತಿದ್ದು ಅದರಲ್ಲಿಯೂ ಹುಡುಗರು ಹಾಗೂ ಹುಡುಗಿಯರು ಸರಾಸರಿ 14 ವರ್ಷದಲ್ಲಿ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬ ಆಘಾತಕಾರಿ ಅಂಶ ಸಮೀಕ್ಷೆಯಿಂದ ತಿಳಿದುಬಂದಿದೆ.
ಮೆಟ್ರೊ ನಗರಗಳೂ ಸೇರಿ ದೇಶದ 20 ನಗರಗಳ 13ರಿಂದ 19 ವರ್ಷದೊಳಗಿನ ಸುಮಾರು 15,000ಕ್ಕೂ ಹೆಚ್ಚು ಮಕ್ಕಳ ಸಂದರ್ಶನವನ್ನು ಆಧರಿಸಿ ಈ ಹೊಸ ಸಮೀಕ್ಷೆ ವರದಿ ತಯಾರಿಸಲಾಗಿದ್ದು ಇದರಲ್ಲಿ ಬಹುಪಾಲು ಮಕ್ಕಳು ಲೈಂಗಿಕ ಕ್ರಿಯೆ ನಡೆಸಿದ್ದು ಲೈಂಗಿಕವಾಗಿ ಹರಡುವ ಸೋಂಕಿನ ಲಕ್ಷಣದಿಂದ ಶೇ.8.9 ಮಂದಿ ಕನಿಷ್ಠ ಒಂದು ಬಾರಿಯಾದರೂ ಬಳಲಿದ್ದಾರೆ ಎಂಬ ಆತಂಕಕಾರಿ ವಿಷಯವೂ ಬಹಿರಂಗವಾಗಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.6.3 ಹುಡುಗರು ಹಾಗೂ 1.3ಕ್ಕೂ ಹೆಚ್ಚು ಹುಡುಗಿಯರು ಕನಿಷ್ಠ ಒಂದು ಬಾರಿಯಾದರೂ ‘ಆ’ ಕ್ರಿಯೆಯಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದು ಈ ಮೊದಲ ಅನುಭವ ಹುಡುಗರಿಗೆ 14 ವರ್ಷದಲ್ಲಾದರೆ, ಹುಡುಗಿಯರಿಗೆ 16 ವರ್ಷದಲ್ಲಿ ಆಗಿರುವ ಸಂಖ್ಯೆ ಹೆಚ್ಚಿದೆ.