ರಾಷ್ಟ್ರೀಯ

ಅತ್ಯಾಚಾರಕ್ಕೆ ಕಡಿವಾಣ ಹಾಕಲಿದೆ ಈ ಆ್ಯಪ್ !

Pinterest LinkedIn Tumblr

aapಇನ್ನು ಮುಂದೆ ಮಹಿಳೆಯರು ಒಂಟಿಯಾಗಿ ಓಡಾಡಲು ಅಂಜಬೇಕಿಲ್ಲ. ಏಕೆಂದರೆ ಮಹಿಳೆಯರಿಗೆ ಕಾಮುಕರಿಂದ ರಕ್ಷಣೆಗಾಗಿ ಸಿನರ್ಜಿಯಾ ಫೌಂಡೇಶನ್ ಸಂಸ್ಥೆಯು ‘ಎಸ್-ಗಾರ್ಡ್’ ಎಂಬ ಆ್ಯಪ್ ಬಿಡುಗಡೆ ಮಾಡಿದೆ.

ಈಗಾಗಲೇ ಆಫ್ರಿಕಾ, ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳ ಮಹಿಳೆಯರ ಸುರಕ್ಷತೆಗಾಗಿ ಹಲವಾರು ಆ್ಯಪ್‌ಗಳನ್ನು ಬಳಸುತ್ತಿದ್ದು, ಬಹುಮಟ್ಟಿಗೆ ಯಶಸ್ವಿಯಾಗಿವೆ. ಹಾಗಾಗಿ ಭಾರತದಲ್ಲಿಯೂ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಆ್ಯಪ್ ಕೆಲಸ ಮಾಡುವುದು ಹೇಗೆ ?

ಮಹಿಳೆಯರು ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಆ್ಯಪ್ ಅನ್ನು ಚಾಲನೆಯಲ್ಲಿ ಇಟ್ಟುಕೊಂಡಿರಬೇಕು. ಅಪಾಯ ಎದುರಾದಾಗ ಮೂರ್ನಾಲ್ಕು ಸೆಕೆಂಡ್ ಕಾಲ ಮೊಬೈಲ್ ಅನ್ನು ಅಲುಗಾಡಿಸಿದರೆ ಪೊಲೀಸ್ ನಿಯಂತ್ರಣ ಕೊಠಡಿ, ಲಾಗ್ ಇನ್ ಆದಾಗ ದಾಖಲು ಮಾಡಿದ ಕುಟುಂಬ ಸದಸ್ಯರು, ಸ್ನೇಹಿತರ ಮೊಬೈಲ್ ಸಂಖ್ಯೆಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ.

ಅಲ್ಲದೇ ಸ್ವಯಂಚಾಲಿತವಾಗಿ ವಿಡಿಯೊ ರೆಕಾರ್ಡರ್ ಚಾಲನೆಗೊಂಡು ಘಟನಾ ಸ್ಥಳದ ಆಡಿಯೊ ಮತ್ತು ವೀಡಿಯೋ ದೃಶ್ಯಾವಳಿಯು ನಿಯಂತ್ರಣ ಕೊಠಡಿ ಹಾಗೂ ಕುಟುಂಬ ಸದಸ್ಯರಿಗೆ ತಲುಪುತ್ತದೆ. ಬಳಕೆದಾರರು ಎಲ್ಲಿದ್ದಾರೆಂಬುದು ಜಿಪಿಎಸ್ ವ್ಯವಸ್ಥೆ ಮೂಲಕ ತಿಳಿಯುವುದರಿಂದ ಪೊಲೀಸರು ಸ್ಥಳಕ್ಕೆ ತೆರಳಿ, ಆಪತ್ತಿನಲ್ಲಿರುವವರ ರಕ್ಷಣೆ ಮಾಡಲು ಅನುಕೂಲವಾಗಲಿದೆ.

Write A Comment