ರಾಷ್ಟ್ರೀಯ

ದೆಹಲಿಗೆ ಹೋಗುವಾಗ ಮಕ್ಕಳ ಬಗೆಗೆ ಎಚ್ಚರವಿರಲಿ !

Pinterest LinkedIn Tumblr

1676kidnapping-11ದೇಶದ ರಾಜಧಾನಿ ನವದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಮಾತ್ರವಲ್ಲ, ಮಕ್ಕಳ ಕಳ್ಳತನವೂ ಹೆಚ್ಚುತ್ತಿದೆ ಎಂಬ ಆಘಾತಕಾರಿ ಅಂಶ ಹೊರಗೆ ಬಂದಿದೆ.

ಗೃಹ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ ದೆಹಲಿಯಲ್ಲಿ ಪ್ರತಿ ಗಂಟೆಗೊಮ್ಮೆ ಒಬ್ಬ ಮಗು ಕಾಣೆಯಾಗುತ್ತಿದ್ದು, ಈ ಮಕ್ಕಳನ್ನು ಹೊರಗಡೆ ರವಾನಿಸಿ ಭಿಕ್ಷಾಟನೆ ಅಥವಾ ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.

2015ರ ಜನವರಿ 1ರಿಂದ ಮಾ.10ರವರೆಗೆ ದೆಹಲಿಯಾದ್ಯಂತ 1120 ಮಕ್ಕಳು ಕಣ್ಮರೆಯಾಗಿದ್ದು , ಇದರಲ್ಲಿ ಸರಿಸುಮಾರು ಅರ್ಧದಷ್ಟು ಮಕ್ಕಳು ಪತ್ತೆಯಾಗಿದ್ದರೆ ಇನ್ನುಳಿದ ಮಕ್ಕಳ ಸ್ಥಿತಿಗತಿಯೇ ಗೊತ್ತಾಗಿಲ್ಲ.ಅಲ್ಲದೇ 2014ರಲ್ಲಿ ದೆಹಲಿಯಲ್ಲಿ 7,572 ಮಕ್ಕಳು ನಾಪತ್ತೆಯಾಗಿದ್ದರೆ 2013ರಲ್ಲಿ 5809, 2012ರಲ್ಲಿ 3686 ಮಕ್ಕಳು ನಾಪತ್ತೆಯಾಗುವ ಮೂಲಕ ಆತಂಕ ಮೂಡಿಸಿದೆ.

ಇಲಾಖೆಯ ಪ್ರಕಾರ ದೆಹಲಿಯಲ್ಲಿ ಮಕ್ಕಳನ್ನು ಅಪಹರಿಸುವ ಜಾಲವಿದ್ದು, ಸಣ್ಣಪುಟ್ಟ ಮಕ್ಕಳನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವವರು ಒಂದು ತಂಡವಾದರೆ, ಉಳಿದವರು ಇಂತಹ ಮಕ್ಕಳನ್ನು ಬಿಕ್ಷಾಟನೆ ಇಲ್ಲ ಲೈಂಗಿಕ ದುರ್ಬಳಕೆಗೆ ಬಳಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.

Write A Comment