ರಾಷ್ಟ್ರೀಯ

ಸಂಗಾತಿಗಿಂತ ಸ್ಮಾರ್ಟ್ ಫೋನೇ ಮುಖ್ಯ ಅಂತಾರಂತೆ ಭಾರತೀಯರು !

Pinterest LinkedIn Tumblr

スマートフォンを持ったまま寝る女性ಖಾಸಗಿ ಸಂಸ್ಥೆಯೊಂದು ಜಗತ್ತಿನ ಏಳು ರಾಷ್ಟ್ರಗಳ ಸುಮಾರು 7 ಸಾವಿರ ಮಂದಿ ಸ್ಮಾರ್ಟ್ ಫೋನ್ ಬಳಕೆದಾರರ ಆನ್ ಲೈನ್ ಸರ್ವೇ ಮಾಡಿದ್ದು, ಈ ಪೈಕಿ ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರು ತಮಗೆ ಸಂಗಾತಿಗಿಂತ ಸ್ಮಾರ್ಟ್ ಫೋನೇ ಮುಖ್ಯವೆಂದಿದ್ದಾರೆ.

ಈ ಪೈಕಿ ಶೇ.74 ಮಂದಿ ಭಾರತೀಯರು ಹಾಗೂ ಶೇ. 70 ಮಂದಿ ಚೀನಿಯರು ರಾತ್ರಿ ಮಲಗುವ ವೇಳೆ ಸ್ಮಾರ್ಟ್ ಫೋನ್ ಅನ್ನು ತಮ್ಮ ಮಗ್ಗುಲಲ್ಲಿ ಅಥವಾ ಕೈಗೆ ಸಿಗುವಂತೆ ಇರಿಸಿಕೊಂಡಿರುತ್ತಾರೆಂಬ ಅಂಶವೂ ತಿಳಿದುಬಂದಿದೆ. ಅಲ್ಲದೇ ಶೇ.57 ಮಂದಿ ಟಾಯ್ಲೆಟ್ ಗೆ ಹೋಗುವಾಗಲೂ ಸ್ಮಾರ್ಟ್ ಫೋನ್ ಹಿಡಿದುಕೊಂಡೇ ಹೋಗುತ್ತಾರೆನ್ನಲಾಗಿದ್ದು, ಇದರಲ್ಲಿ ಚೀನಾ ಹಾಗೂ ಬ್ರೆಜಿಲ್ ನವರು ಮುಂಚೂಣಿಯಲ್ಲಿದ್ದಾರೆ.

ಪ್ರತಿ 6 ರಲ್ಲಿ ಒಬ್ಬರು ಸ್ನಾನದ ಮನೆಯಲ್ಲೂ ಮೊಬೈಲ್ ಬಳಸುವುದಾಗಿ ಹೇಳಿದ್ದಾರೆ. ಅಮೆರಿಕಾ, ಭಾರತ, ಬ್ರಿಟನ್, ಬ್ರೆಜಿಲ್, ಚೀನಾ, ಸ್ಪೇನ್ ಹಾಗೂ ಮೆಕ್ಸಿಕೋದ  7,112 ಸ್ಮಾರ್ಟ್ ಫೋನ್ ಬಳಕೆದಾರರನ್ನು ಈ ಆನ್ ಲೈನ್ ಸರ್ವೇಯಲ್ಲಿ ತೊಡಗಿಸಿಕೊಂಡಿದ್ದು, ಶೇ. 69 ಮಂದಿ ಸ್ಮಾರ್ಟ್ ಫೋನ್ ಕುರಿತು ಅಸಂತೃಪ್ತಿ ವ್ಯಕ್ತಪಡಿಸಿದ್ದರೆ, ಶೇ.31 ಮಂದಿ ಸ್ಮಾರ್ಟ್ ಫೋನ್ ಬಳಕೆ ತಮಗೆ ಸಂತಸ ತಂದಿದೆ ಎಂದಿದ್ದಾರೆ.

Write A Comment