ರಾಷ್ಟ್ರೀಯ

ಭಯೋತ್ಪಾದಕರಿಂದ ಮೇಡ್ ಇನ್ ಚೀನಾ ಗ್ರೆನೇಡ್ ವಶ: ಪಂಜಾಬ್ ಉಗ್ರರ ದಾಳಿ: ಫೋರೆನ್ಸಿಕ್ ತಂಡ ಭೇಟಿ, ಪರಿಶೀಲನೆ

Pinterest LinkedIn Tumblr

Forensic-teamನವದೆಹಲಿ: ನಿನ್ನೆ ಪಂಜಾಬ್ ನ ಗುರುದಾಸ್ ಪುರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ಪ್ರದೇಶಕ್ಕೆ ಇಂದು ಫೋರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಭಯೋತ್ಪಾದಕರಿಂದ ಮೇಡ್ ಇನ್ ಚೀನಾದ ಗ್ರೆನೇಡ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಡಿಜಿಪಿ ಹೇಳಿದ್ದಾರೆ.

ಎಂಟು ವರ್ಷಗಳ ಬಳಿಕ ಪಂಜಾಬ್ ನಲ್ಲಿ ಉಗ್ರರಿಂದ ರಕ್ತದೋಕುಳಿ ಹರಿದಿದೆ. ಸೋಮವಾರ ಬೆಳಗ್ಗೆ 5 ಗಂಟೆಗೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಎಸ್ ಪಿ ಸೇರಿದಂತೆ ಐವರು ಪೊಲೀಸರು, ಮೂವರು ನಾಗರಿಕರು ಮತ್ತು ಶಂಕಿತ ಲಷ್ಕರ ಎ ತೊಯ್ಬಾ ಉಗ್ರರ ಸಂಘಟನೆಯ ಮೂವರು ಉಗ್ರರು ಸೇರಿ 11 ಮಂದಿ ಅಸುನೀಗಿದ್ದರು. ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಫೋರನ್ಸಿಕ್ ತಂಡ ಉಗ್ರರಿಂದ ಮೇಡ್ ಇನ್ ಚೀನಾದ ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಸುಮೇದ್ ಸಿಂಗ್ ಸೈನಿ ಹೇಳಿದ್ದಾರೆ.

ಭಯೋತ್ಪಾದಕರ ದಾಳಿಯಿಂದ ಪಂಜಾಬ್ ಹಾಗೂ ಜಮ್ಮು ವ್ಯಾಪ್ತಿಯಲ್ಲಿರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಎಚ್ಚರಿಕೆಯಿಂದಿರುವಂತೆ ಸೇನೆಗೆ ಸೂಚನೆ ನೀಡಲಾಗಿದೆ.

Write A Comment