ರಾಷ್ಟ್ರೀಯ

ತಾಜ್ ಮಹಲ್ ಮೂಲತಃ ಶಿವನ ದೇವಾಲಯವಾಗಿತ್ತು: ಆಗ್ರಾ ವಕೀಲರ ಸಂಘ

Pinterest LinkedIn Tumblr

taj-mahalನವದೆಹಲಿ: ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ವಿಶ್ವ ಪ್ರಸಿದ್ದ ತಾಜ್ ಮಹಲ್ ಇರುವ ಜಾಗದಲ್ಲಿ ಶಿವನ ದೇವಾಲಯವಿತ್ತು. ಹೀಗಾಗಿ ಜಾಗದ ಒಡೆತನ ಹಿಂದೂಗಳಿಗೆ ಸೇರಬೇಕೆಂದು ಎಂದು ಆಗ್ರಾ ವಕೀಲರ ಸಂಘ ಆಗ್ರಹಿಸಿದೆ.

17ನೇ ಶತಮಾನದಲ್ಲಿ ಮೊಗರಲ ಕಾಲದಲ್ಲಿ ಸ್ಥಾಪನೆಯಾಗಿರುವ ತಾಜ್ ಮಹಲ್ ಸ್ಮಾರಕದ ಜಾಗ ಒಡೆತನ ಹಿಂದೂಗಳಿಗೆ ಸೇರಬೇಕು ಎಂದು ಆರು ವಕೀಲರು ದೆಹಲಿಯ 14 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಲು ಆಗಸ್ಟ್ ವರೆಗೆ ಸಮಯ ನೀಡುವಂತೆ ಸಂಸ್ಕೃತಿ ಇಲಾಖೆ ಮನವಿ ಮಾಡಿದೆ.

ಇದಕ್ಕೂ ಮುಂಚೆ ಪ್ರಾಚ್ಯ ಸಂಶೋಧನಾ ಇಲಾಖೆ ತಾಜ್ ಮಹಲ್ ಜಾಗದಲ್ಲಿ ಈ ಹಿಂದೆ ಶಿವನ ದೇವಾಲಯವಿತ್ತು ಎಂಬ ಅಭಿಪ್ರಾಯವನ್ನು ತಳ್ಳಿ ಹಾಕಿದೆ. ಆದರೆ ಈ ಜಾಗದಲ್ಲಿ ಶಿವನ ದೇವಾಲಯವಿತ್ತು ಎಂಬುದಕ್ಕೆ ತಮ್ಮ ಬಳಿ ಸೂಕ್ತ ದಾಖಲೆಗಳಿವೆ ಎಂದು ಹೇಳಿರುವ ವಕೀಲರ ಸಂಘ ಇದು ಅಗ್ರೇಶ್ವರ್ ಮಹಾದೇವ್ ಎಂಬ ದೇವಸ್ಥಾನವಿತ್ತು. ಹೀಗಾಗಿ ಇದರ ಒಡೆತನದ ಹಕ್ಕು ಹಿಂದೂಗಳಿಗೆ ಸೇರಬೇಕು ಎಂದು ಒತ್ತಾಯಿಸಿದೆ.

ಇನ್ನು ಇದಕ್ಕೆಪೂರಕ ಎನ್ನುವಂತೆ ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಲಕ್ಷ್ಮಿಕಾಂತ್ ಬಾಜ್ಬಯಿ ತಾಜ್ ಮಹಲ್ ಪುರಾತನ ಹಿಂದೂ ದೇವಾಲಯದ ಒಂದು ಭಾಗವಾಗಿತ್ತು. ಮೊಗಲ್ ದೊರೆ ಷಹಜಹಾನ್ ರಾಜಾ ಜೈ ಸಿಂಗ್ ಎಂಬಾತನಿಂದ ತೇಜೋ ಮಹಾಲಯ ದೇವಾಲಯದ ಒಂದು ಭಾಗವನ್ನು ಖರೀದಿಸಿದ್ದ ಎಂದು ಹೇಳಿದ್ದರು.

Write A Comment