ರಾಷ್ಟ್ರೀಯ

ಬಣ್ಣ ಹಚ್ಚುತ್ತಿದ್ದವ ಮಕ್ಕಳಿಗೆ ನೀಲಿ ಚಿತ್ರ ತೋರಿಸಿ ಜೈಲು ಸೇರಿದ !

Pinterest LinkedIn Tumblr

2963article-1334329-0C4A08BA000005DC-684_468x286ನೀಲಿ ಚಿತ್ರಗಳನ್ನು ತೋರಿಸಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದ ಸಿನಿಮಾದ ಮೇಕಪ್ ಸಹಾಯಕನೊಬ್ಬ ಜೈಲು ಪಾಲಾದ ಘಟನೆ ಚೆನ್ನೈನಲ್ಲಿ ನಡೆದಿದೆ.

ಇಲ್ಲಿನ ಕೊಡಂಬಕ್ಕಮ್ ಎಂಬಲ್ಲಿ ವಾಸವಿರುವ ಜಹೀರ್ ಹುಸೇನ್ ಎಂಬ ಸಿನಿಮಾಗಳಲ್ಲಿ ಮೇಕಪ್ ಮಾಡುತ್ತಿದ್ದ  ಕಾಮುಕ ತನ್ನ ಊರಿನ ಮಕ್ಕಳನ್ನು ಕರೆದು ಅವರಿಗೆ ತನ್ನ ಮೊಬೈಲ್ ನಲ್ಲಿದ್ದ ನೀಲಿ ಚಿತ್ರಗಳನ್ನು ತೋರಿಸುವುದರ ಜತೆಗೆ ನಿಮ್ಮ ಮನೆಯಲ್ಲಿಯೂಇದನ್ನು ಡಿವಿಡಿ ಹಾಕಿ ನೋಡಿ ಎಂದು ಉಚಿತ ಸಲಹೆ ನೀಡುತ್ತಿದ್ದ. ಅಷ್ಟೇ ಅಲ್ಲ, ಈ ಅಶ್ಲೀಲ ಚಿತ್ರಗಳನ್ನು ತೋರಿಸಿ ಮಕ್ಕಳನ್ನು ಪ್ರಚೋಧಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ಈ ವಿಷಯ ಎನ್ ಜಿಒ ಒಂದರ ಗಮನಕ್ಕೆ ಬಂದಿದ್ದು ಈ ಸಂಘಟನೆಯ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಜಹೀರ್ ಹುಸೇನ್ ನೀಲಿ ಚಿತ್ರ ತೋರಿಸಿ ತನ್ನ ಜತೆಗೆ ಇದೇ ರೀತಿ ಮಾಡಿ ಎಂದು ಹಿಂಸಿಸುತ್ತಿದ್ದ ಎಂದು ಮಕ್ಕಳು ಪೊಲೀಸರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

2 Comments

  1. Dr. E. Mahabala Bhatta

    It is the most unfortunate thing to be pondered over. I think no law of the land can protect our young children. Only God if he comes to the earth can save the mankind.

Write A Comment