ರಾಷ್ಟ್ರೀಯ

ಚಂಡೀಗಢದಲ್ಲಿನ್ನು ನಾಯಿ ನೋಂದಣಿ ಕಡ್ಡಾಯ !!

Pinterest LinkedIn Tumblr

dogffನಗರಗಳಲ್ಲಿ ನಾಯಿ ಸಾಕಿ ಬೀದಿಗೆ ಬಿಡುವ ಮೂಲಕ ಹಲವರ ಪ್ರಾಣಕ್ಕೆ ಕುತ್ತು ತರುತ್ತಿರುವುದು ಮಾಮೂಲಿಯಾಗಿದೆ. ಆದರೆ ಚಂಡೀಗಢ ನಗರದಲ್ಲಿ ಇನ್ನು ಮುಂದೆ ನಾಯಿ ಮಾಲಿಕರ ಈ ನಿರ್ಲಕ್ಷ್ಯಕ್ಕೆ ಬ್ರೇಕ್ ಬೀಳಲಿದೆ.

ಹೌದು. ಇನ್ನು ಮುಂದೆ ನಾಯಿಗಳನ್ನು ಸಾಕಿದವರು, ಅವುಗಳನ್ನು ನೋಂದಣಿ ಮಾಡಿಸದೇ ಹೋದಲ್ಲಿ ನಾಯಿಯ ಮಾಲೀಕರು 500 ರೂಪಾಯಿಗಳ ದಂಡ ತೆರುವುದು ಮಾತ್ರವಲ್ಲ ನಾಯಿಯನ್ನೂ ಕಳೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ.

ಚಂಡೀಗಢದಲ್ಲಿ ಕೆಲ ದಿನಗಳಿಂದ ನಾಯಿ ಕಡಿತ, ಎಲ್ಲೆಂದರಲ್ಲಿ ಸಾಕು ನಾಯಿಗಳ ಓಡಾಟ, ಅವುಗಳು ಮಾಡುತ್ತಿರುವ ಗಲೀಜಿನ ಬಗ್ಗೆ ಪಾಲಿಕೆಗೆ ಭಾರೀ ಪ್ರಮಾಣದಲ್ಲಿ ದೂರು ದಾಖಲಾಗುತ್ತಿದ್ದು  ಈ ಹಿನ್ನೆಲೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಪಾಲಿಕೆ, ನಾಯಿಗಳ ನೋಂದಣಿ ಕಡ್ಡಾಯ ಮಾಡಲು ಆದೇಶ ಹೊರಡಿಸಿದ್ದು ಒಂದೊಮ್ಮೆ  ನೋಂದಣಿ ಮಾಡಿಸದೇ ಇರುವ ನಾಯಿಗಳ ವಿರುದ್ಧ ಮಾಲೀಕರಿಗೆ 500 ರೂ. ದಂಡ ವಿಧಿಸುವ ಜತೆಗೆ ನಾಯಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.

ಅಲ್ಲದೇ ಈ ‘ನಾಯಿ ನೋಂದಣಿ’ ಮಾಡುವಾಗ ನಾಯಿಯ ಬಣ್ಣ, ತಳಿ ಮತ್ತು ಅದರ ವಯಸ್ಸನ್ನು ದಾಖಲು ಮಾಡುವುದು ಕಡ್ಡಾಯವಾಗಿದ್ದು ನಗರದ ಪಾರ್ಕ್‌ಗಳು, ಕೆರೆ ಬಳಿ ಸಾಕು ನಾಯಿಗಳನ್ನು ಕೊಂಡೊಯ್ಯುವಂತಿಲ್ಲ ಹಾಗೂ ಒಂದು ಕುಟುಂಬ ಎರಡಕ್ಕಿಂತ ಹೆಚ್ಚಿನ ನಾಯಿಗಳನ್ನು ಸಾಕುವಂತಿಲ್ಲ ಎಂಬ ಸೂಚನೆಯನ್ನೂ ನೀಡಿದೆ.

Write A Comment