ಅಂತರಾಷ್ಟ್ರೀಯ

ಹಾಲುಗಲ್ಲದ ಇಸಿಸ್ ಉಗ್ರ ಬಾಲಕರಿಂದ ಬೆಚ್ಚಿ ಬೀಳಿಸುವ ಕೃತ್ಯ !!

Pinterest LinkedIn Tumblr

9474isis-boy-killer-child-executionerವಿಶ್ವಕ್ಕೇ ಕಂಟಕಪ್ರಾಯರಾಗಿರುವ ಇಸಿಸ್ ಉಗ್ರರು ಚಿಕ್ಕ ಮಕ್ಕಳಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡುವುದರ ಕುರಿತು ಕೇಳಿದ್ದೀರಿ. ಆದರೆ ಇದೀಗ ಈ ಬಾಲಕರೇ ಹತ್ಯೆ ಮಾಡುವ ಮೂಲಕ ತಮ್ಮ ಕ್ರೌರ್ಯ ಪ್ರದರ್ಶಿಸಿದ ಆಘಾತಕಾರಿ ಘಟನೆ ವರದಿಯಾಗಿದೆ.

ಹೌದು. ಇಸಿಸ್ ಉಗ್ರರ ಗರಡಿಯಲ್ಲಿ ಪಳಗಿದ ಈ ಎಳೆಯ ಬಾಲಕರು ಟೈಗ್ರಿಸ್ ನದಿ ದಂಡೆಯಲ್ಲಿ ಕೈದಿಗಳನ್ನು ಹತ್ಯೆ ಮಾಡುವ ಭಯಾನಕ ಚಿತ್ರಗಳನ್ನು ಇಸಿಸ್ ಬಿಡುಗಡೆ ಮಾಡಿದ್ದು ಅವರ ಭಯಾನಕ ಜಗತ್ತಿನ ಭೀಕರತೆಯನ್ನು ತೆರೆದಿಟ್ಟಿದೆ. ಈ ವಿಡಿಯೋದಲ್ಲಿ ಕೈದಿಗಳು ತಮ್ಮನ್ನು ಕಾಪಾಡುವಂತೆ ಮೊರೆಯಿಡುತ್ತಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ, ಯಾವುದೇ ಅಂಜಿಕೆಯೂ ಇಲ್ಲದೇ ಕೈದಿಗಳ ತಲೆಗೆ ಗುರಿಯಿಟ್ಟು ಗುಂಡು ಹಾರಿಸುವ ದೃಶ್ಯಗಳು ಇದರಲ್ಲಿದ್ದು ಭಯ ಹುಟ್ಟಿಸುತ್ತದೆ.

ಕಳೆದ ವರ್ಷ ಟಿಕ್ರಿತ್​ನಲ್ಲಿ ಈ ಕೃತ್ಯವನ್ನು ಬಾಲಕರಿಂದ ಉಗ್ರರು ಮಾಡಿಸಿದ್ದಾರೆ ಎನ್ನಲಾಗುತ್ತಿದ್ದು ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಬಾಲಕ ತನ್ನ ಮುಂದಕ್ಕೆ ಎಳೆದು ತರಲಾದ ಕನಿಷ್ಠ ಇಬ್ಬರು ಪುರುಷರ ತಲೆಗೆ ಗುಂಡಿಟ್ಟು ಹತ್ಯೆ ಮಾಡಿರುವುದು ಬೆಚ್ಚಿ ಬೀಳುವಂತೆ ಮಾಡಿದೆ.

Write A Comment