ಏಡ್ಸ್ ರೋಗಕ್ಕೆ ಮದ್ದಿಲ್ಲವೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಗೌಹಾತಿ ಮೂಲದ ವೈದ್ಯರೊಬ್ಬರು ಏಡ್ಸ್ ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನನ್ನು ತಾವು ಸಂಪೂರ್ಣವಾಗಿ ಗುಣಪಡಿಸಿರುವುದಾಗಿ ತಿಳಿಸಿದ್ದಾರೆ.
ವೈದ್ಯ ಧನಿರಾಮ್ ಬರುವಾ ಎಂಬವರು ಈ ಹಿಂದೆ ಏಡ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಹರಿಯಾಣದ ವಿಜೇಂದರ್ ಸಿಂಗ್ ಜೊತೆ ಪತ್ರಿಕಾಗೋಷ್ಟಿ ನಡೆಸಿದ್ದು, ಸತತ ಸಂಶೋಧನೆ ಬಳಿಕ ತಾವು ಏಡ್ಸ್ ಗೆ ಔಷಧಿ ಕಂಡು ಹಿಡಿದಿದ್ದು, ಇದನ್ನು ವಿಜೇಂದರ್ ಸಿಂಗ್ ಚಿಕಿತ್ಸೆ ವೇಳೆ ಬಳಸಿದಾಗ ಆತ ಸಂಪೂರ್ಣವಾಗಿ ಗುಣಮುಖನಾಗಿರುವುದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ರಿಕ್ಷಾ ಚಾಲಕ ವಿಜೇಂದರ್ ಸಿಂಗ್, ತಾನು ಏಳು ವರ್ಷಗಳ ಹಿಂದೆ ಏಡ್ಸ್ ಕಾಯಿಲೆಗೊಳಗಾಗಿದ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಡಾ. ಧನಿರಾಮ್ ಬರುವಾ ಅವರ ಕುರಿತ ವಿಷಯ ತಿಳಿದ ಬಳಿಕ ಇಲ್ಲಿಗೆ ಬಂದು ದಾಖಲಾಗಿದ್ದು, ಈಗ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಹೇಳಿದ್ದಾರೆ.