ಮನೋರಂಜನೆ

ಈ ಸ್ಯಾಂಡಲ್ ವುಡ್ ನಟಿ ಯಾರೆಂದು ಗೆಸ್ ಮಾಡಬಲ್ಲಿರಾ..?

Pinterest LinkedIn Tumblr

9956Erica-Fernandesಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವ ನಟ- ನಟಿಯರು ಈ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಈ ಸ್ಯಾಂಡಲ್ ವುಡ್ ನಟಿ ತಮ್ಮ ಬಾಲ್ಯದ ಚಿತ್ರವೊಂದನ್ನು ಹಾಕುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಬುಗುರಿ’ ಚಿತ್ರದಲ್ಲಿ ಅಭಿನಯಿಸಿರುವ ಎರಿಕಾ ಫರ್ನಾಂಡೀಸ್ 2002 ರಲ್ಲಿ ತಾವು ಡ್ಯಾನ್ಸ್ ಆಕಾಡೆಮಿಗೆ ಸೇರಿದ್ದಾಗ ನೀಡಲಾಗಿದ್ದ ಐಡೆಂಟಿಟಿ ಕಾರ್ಡ್ ಚಿತ್ರವನ್ನು ಅಪ್ ಲೋಡ್ ಮಾಡಿದ್ದು, ಇತ್ತೀಚೆಗೆ ತಮ್ಮ ಕ್ಯಾಬಿನೆಟ್ ಖಾಲಿ ಮಾಡುತ್ತಿರುವ ವೇಳೆ ಇದು ಸಿಕ್ಕಿತ್ತೆಂದು ಹೇಳಿಕೊಂಡಿದ್ದಾರೆ.

ನಟ- ನಟಿಯರ ಹಳೆಯ ಚಿತ್ರಗಳ ಮೂಲಕ ಅವರನ್ನು ಈಗ ಗುರುತಿಸುವುದು ಕಷ್ಟವಾದರೂ ಹಳೆಯ ನೆನಪುಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವುದಕ್ಕೆ ಅವರಿಗೂ ಸಂತಸವಾಗುತ್ತದೆ. ಎರಿಕಾ ಫರ್ನಾಂಡೀಸ್ ರವರ ಹಿಂದಿನ ಫೋಟೋ ನೋಡಿ ಅವರ ಇತ್ತೀಚಿನ ಸಿನಿಮಾದಲ್ಲಿನ ಭಾವಚಿತ್ರಕ್ಕೆ ಹೋಲಿಕೆ ಏನಾದರೂ ಕಾಣುತ್ತದೆಯೇ ಎಂಬುದನ್ನು ನೀವೂ ನೋಡಿ.

Write A Comment