ರಾಷ್ಟ್ರೀಯ

ಕುಡಿದ ಮತ್ತಿನಲ್ಲಿ ಕೆಲಸದಾಕೆಯನ್ನೇ ಮಂಚ ಹತ್ತಿಸಿದ ಎಎಸ್ಐ !

Pinterest LinkedIn Tumblr

9099ASI_B_09052013ದೇಶದ ರಾಜಧಾನಿ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಗೆಳೆಯನ ಮನೆಗೆ ಕುಡಿದ ಮತ್ತಿನಲ್ಲಿ ತೆರಳಿದ್ದ ಸಹಾಯಕ ಸಬ್ ಇನ್ಸಪೆಕ್ಟರ್ ಒಬ್ಬ ಕೆಲಸದಾಕೆಯನ್ನು ಅತ್ಯಾಚಾರ ಮಾಡಿದ ಹೇಯ ಘಟನೆ ನಡೆದಿದೆ.

ರಾಣಿಭಾಗ್ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿರುವ ಜಯವೀರ್ ಸಿಂಗ್ ಎಂಬಾತ ಜುಲೈ 5 ರಂದು ಗೆಳೆಯನೊಬ್ಬನ ಮನೆಗೆ ಹೋಗಿದ್ದು ಮದ್ಯದ ಅಮಲಿನಲ್ಲಿ 23 ವರ್ಷದ ಮನೆಗೆಲಸದಾಕೆಗೆ ಗ್ಯಾನ್ ತೋರಿಸಿ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ಈ ಪೋಲಿ ಪೊಲೀಸನ ರಾಸ ಲೀಲೆಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು ಈ ನಡುವೆ ಸಂತ್ರಸ್ತ ಯುವತಿ ಪಂಜಾಬಿಭಾಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ನಂತರ ಹಿರಿಯ ಅಧಿಕಾರಿಗಳು ಕಾಮುಕ ಪೊಲೀಸ್ ನನ್ನು ಅಮಾನತ್ತಿನಲ್ಲಿಟ್ಟು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment