ರಾಷ್ಟ್ರೀಯ

ಇಂದಿರಾ ಗಾಂಧಿಗೆ ಸವಾಲಾಗಿದ್ದ ಜೆಪಿ

Pinterest LinkedIn Tumblr

indira

ತುರ್ತು ಪರಿಸ್ಥಿತಿ ಉಚ್ಛ್ರಾಯವಾಗಿದ್ದ ಕಾಲಘಟ್ಟದಲ್ಲಿನ ಕೆಲವು ಅನಿರೀಕ್ಷಿತ ಪ್ರಸಂಗಗಳಲ್ಲಿ ಬಿಷನ್ ನಾರಾಯಣ್ ಟಂಡನ್ ತಪ್ಪಿಸಿಕೊಂಡ ನೋವಿನ ನೆನಪುಗಳ ಬಗ್ಗೆ ನಾನು ಈ ಹಿಂದೆ ಹಂಚಿಕೊಂಡಿದ್ದೇನೆ, ಮತ್ತೂ ಹಂಚಿಕೊಳ್ಳಲು ಬಯಸುತ್ತೇನೆ. ಕಾನೂನಿನ ನಿಯಮದಂತೆ ಅಂದು ಎಲ್ಲರನ್ನೂ ದಂಡನೆಗೆ ಗುರಿಪಡಿಸುತ್ತಿದ್ದರು, ಅಂದಿನ ಅವಘಡಗಳು ಏಕಮುಖವಾಗಿದ್ದವು ಎಂದು ನನಗೆ ಇವತ್ತಿಗೂ ಅನಿಸುವುದಿಲ್ಲ. ವಿರೋಧ ಪಕ್ಷದವರ ಆಕ್ಷೇಪಣೆಗಳನ್ನು ತಪ್ಪು ಎನ್ನಲು ಸಾಧ್ಯವಿರಲಿಲ್ಲ. ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಬಗೆಹರಿಯದ ಸಂಗತಿಯೊಂದು ಪ್ರಜಾಸತ್ತಾತ್ಮಕವಾದ ಸಂಸತ್ತಿನಲ್ಲಿ ಒಂದು ತೊಡಕಾಗಿತ್ತು.

ಸರ್ಕಾರಗಳ-ಅವು ವಸಾಹತುವೋ ಅಥವಾ ಸ್ವಾಯತ್ತವೋ, ಅಸ್ತಿತ್ವದ ಬಗ್ಗೆ ಪ್ರಶ್ನಿಸಿದಾಗ ಅವುಗಳ ಪ್ರತಿಕ್ರಿಯೆ ಒಂದೇ ತೆರನಾಗಿರುತ್ತಿತ್ತು. ವಸಾಹತುವ್ಯವಸ್ಥೆಯಲ್ಲಿ ಗಾಂಧಿ ಮತ್ತು ನೆಹರೂ ಅವರನ್ನು ಬ್ರಿಟಿಷರು ಬಂಧಿಸಿದರು. ಇದಕ್ಕೆ ಪ್ರತಿಯಾಗಿ ನೆಹರೂ ಮಗಳು, ಗಾಂಧಿ ಮತ್ತು ನೆಹರು ಜೊತೆ ಗುರುತಿಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿದರು.

ಇದೇ ವೇಳೆ ಜೆಎಂಎಲ್ ಸಿನ್ಹಾ ಅವರು ನೀಡಿದ ತೀರ್ಪು ಸೂಕ್ತವಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಇಂದಿರಾ ಗಾಂಧಿ ಅವರ ಎಲೆಕ್ಷನ್ ಏಜೆಂಟ್ ಆಗಿದ್ದ ಯಶ್‍ಪಾಲ್ ಕಪೂರ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಸರ್ಕಾರದಿಂದ ಪದಚ್ಯುತರಾಗಲಿಲ್ಲ ಎನ್ನುವ ಕಾರಣಕ್ಕೆ ಇಂದಿರಾ ಗಾಂಧಿಯವರು ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಭ್ರಷ್ಟರಾಗಿದ್ದರು ಎನ್ನುವುದು ಸರಿಯೇ? ಇಂದಿರಾ ಗಾಂಧಿ ಸ್ಪರ್ಧಿಸಿ ಸ್ವತಃ ಗೆಲುವು ಪಡೆಯಲು ಸಾಧ್ಯವಿರಲಿಲ್ಲವೇ? ಇಂದಿರಾ ಗಾಂಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಿಂತ ಆಕೆ ಪದಚ್ಯುತರಾದದ್ದು ಅಪರಾಧ ಎಂದು ಹೊರಗಿನ ಕೆಲವರಿಗೆ ಅನಿಸಿತ್ತು.

ಘಟನೆಗಳು ವೇಗ ಪಡೆದುಕೊಂಡವು. ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಇಂದಿರಾಗಾಂಧಿ ತಮ್ಮ ಪ್ರಧಾನಮಂತ್ರಿಗಿರಿಯ ವಿರುದ್ಧವೇ ದಂಗೆ ಎದ್ದಿದ್ದಾರೆ ಎಂದು ಅದನ್ನು ವಿಶ್ಲೇಷಿಸಬಹುದಿತ್ತು. ಇಂದಿರಾ ಗಾಂಧಿ ಅವರ ಕಾರ್ಯದರ್ಶಿ, ಗೃಹ ಖಾತೆ, ಕ್ಯಾಬಿನೆಟ್ ಮತ್ತು ಒಟ್ಟಾರೆಯಾಗಿ ಒಟ್ಟು ಆಕೆಯ ಸರ್ಕಾರವೇ ಅಧಿಕಾರದಿಂದ ವಂಚಿತವಾಗಿತ್ತು ಮತ್ತು ಖುದ್ದು ಪ್ರಧಾನಮಂತ್ರಿಯವರೇ ಬಂಧಿಯಂತಾಗಿ ಒಂದು ರೀತಿಯಲ್ಲಿ `ಅರಮನೆಯ ಕಾವಲುಗಾರ್ತಿ’ ಎಂಬಂತಾಗಿದ್ದರು.

ತಪ್ಪು ತೀರ್ಪು ಹೊರಬಿದ್ದ ನಂತರದ ಘಟನಾವಳಿಗಳ ಮೇಲೆ ಟಂಡನ್ ಅವರ ಡೈರಿಯ ಪುಟಗಳು ಬೆಳಕು ಚೆಲ್ಲುತ್ತವೆ. ಆದರೆ ಅಷ್ಟೆಲ್ಲ ತಿಳಿದಿದ್ದ ವ್ಯಕ್ತಿಗೆ ಇಷ್ಟು ಮಾತ್ರ ಹೊರಗೆಡವಲು ಸಾಧ್ಯವಾಯಿತೇ ಎನ್ನುವುದು ಆಶ್ಚರ್ಯ. ಯಾರು, ಯಾರನ್ನು ಬಂಧಿಸಬೇಕು ಎನ್ನುವ ಒಂದು ಪಟ್ಟಿಯನ್ನು ಯಾರು ತೆಗೆದದ್ದು? ಈ ಆದೇಶಗಳನ್ನು ತಲುಪಿಸಿದ್ದು ಯಾರು? ಕ್ಯಾಬಿನೆಟ್ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಗಾಂಧಿಯವರ ಕಚೇರಿಯ ಎಲ್ಲ ರಾಜಕೀಯ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಸಹ ಕಾರ್ಯದರ್ಶಿಯಾಗಿದ್ದ ಸ್ವತಃ ಟಂಡನ್ ಅವರನ್ನು ಕತ್ತಲೆಯಲ್ಲಿ ಇಡಲಾಗಿತ್ತು.

ಇಂದಿರಾ ಗಾಂಧಿ ಮತ್ತೆ ತುರ್ತು ಪರಿಸ್ಥಿತಿಯನ್ನು ಹೇರಲಿಕ್ಕೆ ಸಾಧ್ಯವಿಲ್ಲ ಎನ್ನುವುದು ತುರ್ತು ಪರಿಸ್ಥಿತಿಯ ಒಂದು ಗಣನೀಯ ಅಂಶವಾಗಿತ್ತು. ಇದು ಅದರಿಂದ ಆದ ಲಾಭ ಎನ್ನಬಹುದು. ಆದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ತುರ್ತು ಪರಿಸ್ಥಿತಿಯ ಬಗ್ಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಇದೇ ತೆರನಾದವು ಎಂದು ಹೇಳಲು ಸಾಧ್ಯವಿಲ್ಲ. ಒಂದು ವಿಚಾರ ನನ್ನನ್ನುಆಲೋಚಿಸುವಂತೆ ಮಾಡುತ್ತದೆ: ರಾಜೀವ್ ಗಾಂಧಿ ಅವರ ನಂತರದ ಕಾಲಘಟ್ಟದ ಮತದಾರರು ಯಾಕೆ ಯಾವ ಒಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಕೊಡಲಿಲ್ಲ? ಬದಲಾಗಿ ಸಮ್ಮಿಶ್ರ ಸರ್ಕಾರಗಳಿಗೆ ಮಾನ್ಯತೆ ನೀಡುತ್ತಿದ್ದಾರೆ?

ಬಹುಶಃ ಅವರೆಲ್ಲ ತುರ್ತು ಪರಿಸ್ಥಿತಿಯನ್ನು ತಪ್ಪಿಸಲು ಈ ಮಾರ್ಗ ಅನುಸಿರಬಹುದು ಎಂದು ನನಗೆ ಅನಿಸುತ್ತದೆ.” (ಎಚ್ ವೈ ಶಾರದಾ ಪ್ರಸಾದ್, ಫೆಬ್ರವರಿ 20, 2006, ಪ್ರಕಟಣೆ: ರಿಯಲ್ ಪೊಲಿಟಿಕ್ ಮ್ಯಾಗಜಿನ್, ಮಾರ್ಚ್ 2006).

ಇಂದಿರಾ ಗಾಂಧಿ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಮುಖಾಮುಖಿಯ ಸಂದರ್ಭ ನಮ್ಮ ಕುಟುಂಬದಲ್ಲಿ ತುಂಬಾ ಆತಂಕಗಳನ್ನು ಸೃಷ್ಟಿಸಿದ್ದ ಕಾಲ. ಯಾಕೆಂದರೆ, ನನ್ನ ಸೋದರಮಾವ ಕೆ ಎಸ್ ರಾಧಾಕೃಷ್ಣ ಗಾಂಧಿ ಶಾಂತಿ- ಫೌಂಡೇಶನ್‍ನ ಮುಖ್ಯಸ್ಥರಾಗಿದ್ದರು ಹಾಗೂ ಜಯಪ್ರಕಾಶ್ ನಾರಾಯಣ್(ಜೆಪಿ)ಗೆ ಸಲಹೆಗಾರರಾಗಿದ್ದರು.

ಪಿ ಎನ್ ಧರ್ ಹಾಗೂ ನನ್ನ ತಂದೆ ಇಂದಿರಾ ಗಾಂಧಿಯವರ ಪರವಾಗಿ ಹಾಗೂ ನನ್ನ ಸೋದರಮಾವ ಕೆ ಎಸ್ ರಾಧಾಕೃಷ್ಣ ಜೆಪಿಯ ಪರವಾಗಿ ಇದ್ದು, ಇಬ್ಬರ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೆಪಿಯವರು ಇಂದಿರಾ ಗಾಂಧಿಯವರ ಸಿಬ್ಬಂದಿಯಾಗುವ ದಶಕಗಳಿಗೆ ಮುಂಚಿನಿಂದಲೇ ಪಿ ಎನ್ ಧರ್ ಅವರಿಗೆ ಜೆಪಿ ಅವರ ಪರಿಚಯವಿತ್ತು. ಜೊತೆಗೆ ಅವರ ಸಂಪೂರ್ಣ ವಿಶ್ವಾಸವನ್ನು ಅವರು ಗಳಿಸಿದ್ದರು. ಕೆಲವು ಸಂಧಾನ ಸಭೆಗಳು ನಮ್ಮ ಮನೆಯಲ್ಲೇ ನಡೆದವು. ಆ ಸಮಯದಲ್ಲಿ ನನ್ನ ಕಿರಿಯ ತಮ್ಮ ಹಾಗೂ ನನ್ನನ್ನು ಹೊರಗೆ ಆಟ ಆಡಿಕೊಳ್ಳಲು ಹೋಗುವಂತೆ ತಿಳಿಸಲಾಗುತ್ತಿತ್ತು.

ಜೆಪಿ ಹಾಗೂ ಇಂದಿರಾ ಗಾಂಧಿ ಅವರ ನಡುವಿನ ಭಿನ್ನಾಭಿಪ್ರಾಯಗಳು ತುಂ ಬಾ ಕ್ಷುಲ್ಲಕವಾಗಿ ದ್ದವು. ಅಂತಹ ಮಹತ್ವ ಅವುಗಳಿಗೆ ಇರಲಿಲ್ಲ. ಜೆಪಿ ಅವರಲ್ಲಿ ಅಹಂ ಎನ್ನುವುದು ತುಂಬಾ ದೊಡ್ಡ ಪ್ರಮಾಣ ದಲ್ಲಿತ್ತು. ಮಹಾತ್ಮ ಗಾಂಧಿಯವರ ನಂತರದ ಅರ್ಹ ಉತ್ತರಾ ಣಿಕಾರಿ ಎಂದೂ, ತಾವೊಬ್ಬ ಬುದ್ಧಿವಂತ ಸಂತ ಎಂದೂ ಅವರು ಭಾವಿಸಿದ್ದರು.

ಧಾರ್ಮಿಕ ಮತ್ತು ನೈತಿಕ ಸಂಗತಿಗಳ ಕುರಿತಂತೆ ಸಲಹೆಗಳನ್ನು ಪಡೆಯಲು ಇಂದಿರಾ ಗಾಂಧಿ ಸದಾ ತಮ್ಮ ಬಳಿಗೆ ಓಡಿಬರುತ್ತಿರಬೇಕು ಎನ್ನುವುದು ಅವರ ಇಂಗಿತವಾಗಿತ್ತು.

ಅದು ನಡೆಯದಿದ್ದಾಗಲೆಲ್ಲಾ ಅವರು ಮುನಿಸಿಕೊಳ್ಳುತ್ತಿದ್ದರು. ಜೆಪಿ ಕೆಲವೊಮ್ಮೆ ತಮ್ಮ ಸಹಾಯಕರಿಗೆ ಹೀಗೆ ಗುಡುಗುತ್ತಿದ್ದರು: “ಅಲ್ಲ, ಇಂದು ತನ್ನನ್ನು ಏನೆಂ ದುಕೊಂಡಿದ್ದಾಳೆ? ನನ ಹೆಂಡತಿ ಆಕೆಯ ಡೈಪರ್ ಗಳನ್ನು ಬದಲಾಯಿಸಿದ್ದಾಳೆ.”

ಇನ್ನೊಂದೆಡೆ, ಜೆಪಿ ತಮ್ಮ ತಂದೆಯನ್ನು ಹಿಂದಿಕ್ಕುತ್ತಿದ್ದಾರೆ ಎಂದು ಇಂದಿರಾ ಗಾಂಧಿ ಅಂದುಕೊಂಡಿದ್ದರು. ಸ್ವಾತಂತ್ರ್ಯ ದೊರೆತ ಹಲವು ವರ್ಷಗಳ ನಂತರವೂ ನೆಹರು ತಮ್ಮ ನಂತರದ ಪ್ರಧಾನಿ ಜೆಪಿ ಎಂದೇ ಭಾವಿಸಿದ್ದರು.

ಉಪಪ್ರಧಾನಿಯಾಗಿ ಕ್ಯಾಬಿನೆಟ್ ಸೇರಲು ಜೆಪಿಗೆ ನೆಹರು ಆಗಿಂದಾಗ್ಗೆ ಹೇಳುತ್ತಲೇ ಇದ್ದರು. ವಾಸ್ತವದಲ್ಲಿ, ಜೆಪಿ ನೈತಿಕ ದಿಕ್ಸೂಚಿಯಾಗಿ, ತನ್ನ ಅಂತರಂಗದ ವಿಪ್ಲವಗಳಿಗೆ ಕಿವಿಯಾಗುವ, ತಮ್ಮೊಳಗೆ ಭುಗಿಲೇಳುವ ಸರ್ವಾಧಿಕಾರಿ ನಡೆಗಳನ್ನು ನಿದರ್ಯವಾಗಿ ವಿರ್ಮಶಿಸಲು ತನ್ನ

ಜೊತೆಗಿರಬೇಕೆಂದು ಬಯಸಿದ್ದರು. ಆ ಮೂಲಕ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬಹುದೆಂದು ನೆಹರು ಬಯಸಿದ್ದರು.

ಆದರೆ ಜೆಪಿ, ನೆಹರು ಅವರ ಆಹ್ವಾನಗಳನ್ನು ಸದಾ ತಿರಸ್ಕರಿಸುತ್ತಲೇ ಇದ್ದರು. ಯಾಕೆಂದರೆ ಜೆಪಿ ತಮ್ಮ ಗಾಂಧಿ ಎರಕದಲ್ಲಿ ಎದ್ದು ಬಂದ ಸಂತನೆಂದು ನಂಬಿದ್ದರು. ಪಕ್ಷ ರಾಜಕಾರಣ ಮತ್ತು ಆಡಳಿತ ವ್ಯವಹಾರಗಳ ಸರ್ಕಾರಿ ವ್ಯವಸ್ಥಿಗಿಂತ ತಾವು ಮೇಲೆಂದು ಭಾವಿಸಿದ್ದರು. ಹಾಗಾಗಿ ತಮ್ಮ ಉತ್ತರಾಧಿಕಾರಿಯನ್ನಾಗಿ ರೂಪಿಸಬೇಕೆಂದು ಬಯಸಿದ ನೆಹರೂ ಅವರ ಆಹ್ವಾನಗಳನ್ನು ತಿರಸ್ಕರಿಸುತ್ತಲೇ ಬಂದರು.

ಜೆಪಿಯವರು ತಮ್ಮ ರಾಜಕೀಯ ನಿಲುವುಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಇಂದಿರಾ ಗಾಂಧಿಗೆ ಅನ್ನಿಸಲು ಆರಂಭವಾಗಿತ್ತು. ಎಡಪಂಥದಿಂದ ಬಲಪಂಥಕ್ಕೆ

ಬದಲಾಯಿಸಿ, ರಾಜಕೀಯದ ಆಕಾಂಕ್ಷಿಗಳು ತಮ್ಮನ್ನು ಶೋಷಿಸಲು ಅವಕಾಶ ಕೊಡುತ್ತಿದ್ದಾರೆ. ಜೊತೆಗೆ ಅನುದಾನ ಯಾವ ಮೂಲದಿಂದ ಬರುತ್ತಿದೆ ಎಂಬುದನ್ನು ತಿಳಿದಿರಲಿಲ್ಲ ಎನ್ನುವುದು ಇಂದಿರಾ ಗಾಂಧಿ ಅವರ ಆಕ್ಷೇಪಣೆಯಾಗಿತ್ತು.

ಹಲವು ಮೂಲಗಳಿಂದ ಬರುತ್ತಿದ್ದ ಅನುದಾನವನ್ನು ಜೆಪಿ ಸ್ವೀಕರಿಸುತ್ತಿದ್ದದ್ದು ನಿಜವೂ ಆಗಿತ್ತಾದ್ದರಿಂದ ಇಂದಿರಾ ಗಾಂಧಿ ಇದನ್ನು ಆಕ್ಷೇಪಿಸಿದರು. (ಜೆಪಿ ವೈಯಕ್ತಿಕವಾಗಿ ಭ್ರಷ್ಟಾಚಾರಿಯಲ್ಲದಿದ್ದರೂ, ತನಗೆ ಎಂದು ಒಂದು ಪೈಸೆ

ಇರಿಸಿಕೊಳ್ಳದಿದ್ದರೂ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಎಲ್ಲ ಮೂಲಗಳಿಂದ ಬರುತ್ತಿದ್ದ ಅನುದಾನವನ್ನು ಸ್ವೀಕರಿಸುತ್ತಿದ್ದರು.) ಆದರೆ ಜೆಪಿ ಹಾಗೂ ಇಂದಿರಾ ಗಾಂಧಿಯವರ ನಡುವೆ ಏರ್ಪಟ್ಟ ಸಂಧಾನಗಳು ಉತ್ಕರ್ಷ ತಲುಪಿದರೂ ಅವಕ್ಕೆ ಒಂದು ಮಾನವೀಯ ನೆಲೆ ಎಂಬುದೊಂದಿತ್ತು. ಜೆಪಿ ಅವರ ಪತ್ನಿ, ಇಂದಿರಾ ಗಾಂಧಿ ಅವರ ತಾಯಿಗೆ ತುಂಬಾ ಆತ್ಮೀಯ

ಗೆಳತಿಯಾಗಿದ್ದರು ಮತ್ತು ಅವರ ವಿಶ್ವಾಸ ಗಳಿಸಿದ್ದರು.

ಸಂಧಾನದ ಮಾತುಕತೆಗಳು ಮುರಿದುಬೀಳುವ ಸಂದರ್ಭದಲ್ಲಿ ಜೆಪಿ, ಇಂದಿರಾ ಗಾಂಧಿ ಅವರ ಕೈಗೆ ಕೆಲವು ಸೀಲ್ ಮಾಡಿದ ಕೆಲವು ದೊಡ್ಡ ಪ್ಯಾಕೆಟ್‍ಗಳನ್ನು ಕೊಟ್ಟು, ಅದನ್ನು ಸ್ವತಃ ಇಂದಿರಾ ಗಾಂಧಿ ಅವರೇ ಖುದ್ದು ತೆರೆದು ನೋಡುವಂತೆಯೂ, ಹಾಗೆ ನೋಡುವಾಗ ಯಾರೂ ಅದನ್ನು ನೋಡಬಾರದು ಎಂದೂ ತಾಕೀತು ಮಾಡಿದರು. ಆ ಪ್ಯಾಕೆಟ್‍ಗಳಲ್ಲಿ ತಮ್ಮ ಪತ್ನಿ ಹಾಗೂ ಇಂದಿರಾ ಗಾಂಧಿ ಅವರ ಅಮ್ಮ ಕಮಲಾ ನೆಹರೂ ಅವರು ನಡೆಸಿದ ಪತ್ರ ವ್ಯವಹಾರವಿತ್ತು. ಅದರಲ್ಲಿ ತಮ್ಮ ಪತಿ ಜವಹರಲಾಲ್ ನೆಹರು ಅವರ ಸಂಬಂಧಗಳು ಹೇಗೆ ಕೆಟ್ಟದಾಗಿ ವರ್ತಿಸುತ್ತಿದ್ದರು ಎಂಬುದನ್ನೆಲ್ಲ ಕಮಲಾ ನೆಹರು ಹಂಚಿಕೊಂಡಿದ್ದರು. ಅದರ ಬಗೆಗಿನ ಆಕ್ರೋಶವನ್ನು ಹೊರಗೆಡವಿದ್ದರು. ನೆಹರು ಕುಟುಂಬದ ಸಂಗತಿಗಳು ಹೀಗೆ ವೈಯಕ್ತಿಕ ನೆಲೆಯಲ್ಲಿ ಪತ್ರಗಳ ಮೂಲಕ ವ್ಯಕ್ತವಾಗಿರುವಾಗ ಅವು ಇಂದಿರಾ ಗಾಂಧಿ ಅವರ ವಿರೋಗಗಳ ಕೈ ತಲುಪುವುದು ಜೆಪಿಗೆ ಬೇಡವಾಗಿತ್ತು.

ತುರ್ತು ಪರಿಸ್ಥಿತಿ ಘೋಷಣೆಯಾದಾಗ ಹಾಜರಿದ್ದ ಸರ್ಕಾರಿ ಅಧಿಕಾರಿಗಳೆಂದರೆ, ಬಿ ಡಿ ಪಾಂಡೆ (ಆಗಿನ ಕ್ಯಾಬಿನೆಟ್ ಕಾರ್ಯದರ್ಶಿ), ಪಿ ಎನ್ ಧರ್ ಹಾಗೂ ನನ್ನ ತಂದೆ. ಪಿ ಎನ್ ಧರ್ ಹಾಗೂ ನನ್ನ ತಂದೆ ಮೆಲ್ಲಗೆ ಕಿವಿಯಲ್ಲಿ ತಾವು ಸಾಕ್ಷಿಯಾದ ಒಂದು ದುಷ್ಕೃತ್ಯದ ಬಗ್ಗೆ ಪಿಸುಗುಟ್ಟಿಕೊಂಡರು.

ಉಳಿದ ಕ್ಯಾಬಿನೆಟ್ ಮಂತ್ರಿಗಳಾದ ಜಗಜೀವನ್ ರಾಮ್, ವೈ ಬಿ ಚೌಹಾಣ್, ಸರ್ದಾರ್ ಸ್ವರಣ್ ಸಿಂಗ್, ಕೆ ಬ್ರಹ್ಮಾನಂದ ರೆಡ್ಡಿ, ಯಾರೂ ತುರ್ತು ಪರಿಸ್ಥಿತಿಯ ವಿರುದ್ಧವಾಗಿ ತಮ್ಮ ದನಿ ಎತ್ತಲಿಲ್ಲ. ಕಳೆದ ರಾತ್ರಿ ವಿರೋಧ ಪಕ್ಷದ ನಾಯಕರು ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ಸೂಚನೆಯೂ ಅವರಲ್ಲಿ ಇರಲಿಲ್ಲ.

ಹಿಂದಿನ ರಾತ್ರಿ ನನ್ನ ತಂದೆ ಎರಡು ಗಂಟೆಗೆ ಬಂದು, ಕೆಲ ಹೊತ್ತು ಮಲಗಿ ಮತ್ತೆ ಬೆಳಗಿನ ಜಾವ 4.30ಕ್ಕೆ ಹೊರಟದ್ದು ನೆನಪಾಗುತ್ತಿದೆ. ಅವರು ತುಂಬಾ ಆತಂಕದಲ್ಲಿದ್ದರು ಮತ್ತು ದಣಿದಿದ್ದರು. ಆದರೂ ಈ ಬಗ್ಗೆ ಒಂದು ಮಾತೂ ಆಡಲಿಲ್ಲ. ಮರುದಿನ ಬೆಳಗ್ಗೆ ಎಂಟರ ಹೊತ್ತಿಗೆ ನನ್ನ ಅಮ್ಮನಿಗೆ ಆಫೀಸಿನಿಂದ ಕರೆ ಮಾಡಿ, ರೇಡಿಯೋ ಆನ್ ಮಾಡಲು ಹೇಳಿದರು.

ಆಗ ನಾವು ಇಂದಿರಾ ಗಾಂ„ ಅವರು ಘೋಷಿಸಿದ ತುರ್ತು ಪರಿಸ್ಥಿತಿ ಬಗ್ಗೆ ಕೇಳಿದೆವು. ಬಹುತೇಕ ದಿನಪತ್ರಿಕೆಗಳು ಅಂದು ಬೆಳಗ್ಗೆ ಬರಲಿಲ್ಲ. ಕೇವಲ ಜನಸಂಘದ ` ಮದರ್‍ಲ್ಯಾಂಡ್’, `ದಿ ಹಿಂದೂಸ್ಥಾನ್ ಟೈಮ್ಸ್’, `ದಿ ಸ್ಟೇಟ್ಸ್‍ಮನ್’ ಮಾತ್ರ ನಮ್ಮ ಮನೆಗೆ ಬಂದವು. ಜನಸಂಘದ ` ಮದರ್‍ಲ್ಯಾಂಡ್’ ಪತ್ರಿಕೆ ದೇಶದ ಎಲ್ಲ ವಿರೋಧ ಪಕ್ಷದ ನಾಯಕರ ಬಂಧನದ ವಿವರಗಳನ್ನು ತುಂಬಾ ವಿಸ್ತೃತವಾಗಿ ಪ್ರಕಟಿಸಿತ್ತು. ಇದು ನಿಜವಾದ ಪತ್ರಿಕೋದ್ಯಮವನ್ನು, ವರದಿಗಾರಿಕೆಯನ್ನು ಪ್ರತಿಬಿಂಬಿಸಿತ್ತು. ಆದರೆ ಅದೇ ಆ ಪತ್ರಿಕೆಯ ಕೊನೆಯ ಸಂಚಿಕೆಯೂ ಆಗಿತ್ತು. ಈ ಬೆಳವಣಿಗೆಗಳಲ್ಲಿ ನನ್ನ ತಂದೆಯ ಪಾತ್ರವೇನು ಎಂಬ ಬಗ್ಗೆ ಬಿಷನ್  ರಾಯಣ ಟಂಡನ್ ಪುಸ್ತಕದಲ್ಲಿ ಉತ್ತಮ ವಿವರಣೆಯನ್ನು ನೀಡಲಾಗಿದೆ. ಈ ಪುಸ್ತಕದ ಆಯ್ದು ಸಾಲುಗಳು ಹೀಗಿವೆ:

26 ಜೂನ್ 1975 ನಾನು ಕಚೇರಿಗೆ ಹೊರಡಲು ಸಿದ್ಧನಾಗುತ್ತಿದ್ದಾಗ, ಶಾರದಾ ಪ್ರಸಾದ್ -ಫೋನ್ ಮಾಡಿ, “ಇಷ್ಟೊತ್ತಿಗೆ ನಿಮಗಾಗಲೇ ಗೊತ್ತಾಗಿರಬೇಕು. ಎಲ್ಲ ಮುಗೀತು. ನೀವು ಕಚೇರಿಗೆ ಬಂದಾಗ ಮಾತಾಡೋಣವಂತೆ,” ಎಂದರು. ಅವರ ಧ್ವನಿ ನಿರಾಶಾದಾಯಕವಾಗಿತ್ತು. ಕಚೇರಿ ತಲುಪಿದಾಗ ನಾನು ಸೀದಾ ಶಾರದಾ ಪ್ರಸಾದ್ ಕೊಠಡಿಗೆ ಹೋದೆ. ತಮಗೆ ಗೊತ್ತಿರುವುದನ್ನೆಲ್ಲ ಅವರು ವಿವರವಾಗಿ ಹೇಳಿದರು. ಕಳೆದ ರಾತ್ರಿ ಪ್ರಧಾನಿ ಅವರನ್ನು ಮತ್ತು ಪ್ರೋ. ಧರ್ ಅವರನ್ನು ತಮ್ಮ ಮನೆಗೆ ರಾತ್ರಿ 10 ಗಂಟೆಗೆ ಕರೆಸಿದ್ದರು. ಅಲ್ಲಿ ಆಗಲೇ (ಕಾಂಗ್ರೆಸ್ ನಾಯಕ ದೇವಕಾಂತ್) ಬರೂಹ್ ಮತ್ತು (ಸಿದ್ಧಾರ್ಥ ಶಂಕರ್)ರೇ ಇದ್ದರು. ಫ್ರೋ.ಧರ್ ಮತ್ತು ಶಾರದಾ ತಲುಪುತ್ತಲೇ, “ನಾನು ತುರ್ತು ಪರಿಸ್ಥಿತಿ ಹೇರಲು

ನಿರ್ಧರಿಸಿದ್ದೇನೆ. ರಾಷ್ಟ್ರಪತಿಯವರೂ ಸಮ್ಮತಿಸಿದ್ದಾರೆ. ಸಚಿವ ಸಂಪುಟಕ್ಕೆ ನಾಳೆ ತಿಳಿಸುತ್ತೇನೆ,” ಎಂದರು ಪ್ರಧಾನಿ. ಇಷ್ಟು ಹೇಳುತ್ತಲೇ ಅವರು ತುರ್ತು ಪರಿಸ್ಥಿತಿ ಘೋಷಣೆಯುಳ್ಳ ಲಕೋಟೆಯೊಂದನ್ನು ಫ್ರೋ.ಧರ್ ಕೈಗಿತ್ತರು. ಅವರು ಮತ್ತು ಶಾರದಾ ದಿಗ್ಭ್ರಾಂತರಾಗಿ ನಿಂತಿದ್ದರು. ಅವರನ್ನು ಕರೆಸಿದ ಉದ್ದೇಶ, ತುರ್ತು ಪರಿಸ್ಥಿತಿ ಘೋಷಣೆ ಬೆನ್ನ ಹಿಂದೆಯೇ ಕೈಗೊಳ್ಳಬೇಕಾಗಿದ್ದ ಪ್ರಚಾರದ ಕುರಿತು ಸಲಹೆ ಪಡೆಯುವುದಾಗಿತ್ತು. ಜೊತೆಗೆ, ದೇಶವನ್ನು ಉದ್ದೇಶಿಸಿ ಮಾಡಬೇಕಾದ ಪ್ರಸಾರ ಭಾಷಣ ಸಿದ್ಧಪಡಿಸಲು ಪ್ರಧಾನಿಯು ಅವರಿಗೆ ಸೂಚಿಸಿದರು. ಇಬ್ಬರೂ ರಾತ್ರಿ ಒಂದು ಗಂಟೆಯವರೆಗೂ ಪ್ರಧಾನಿ ನಿವಾಸದಲ್ಲಿದ್ದರು. ಸಚಿವ ಸಂಪುಟ ಬೆಳಗ್ಗೆ ಆರು ಗಂಟೆಗೆ ಸಭೆ ಸೇರಲಿತ್ತು.

ದೆಹಲಿಯಲ್ಲಿದ್ದ ಎಲ್ಲ ಕೇಂದ್ರ ಸಚಿವರೂ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ತಾನೇನು ಮಾಡಬೇಕೆಂದಿದ್ದೇನೆ ಎಂಬುದನ್ನು ಪ್ರಧಾನಿ ಅವರಿಗೆ ಹೇಳಿದಾಗ, ಅಲ್ಲಿದ್ದ ಒಬ್ಬರೂ ಅದಕ್ಕೆ, ತೀರಾ ದುರ್ಬಲವಾಗಿಯಾದರೂ ಪ್ರತಿರೋಧ ವ್ಯಕ್ತಪಡಿಸಲಿಲ್ಲ. ಕೇವಲ ಸ್ವರಣ್ ಸಿಂಗ್ ಮಾತ್ರ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಸ್ವಲ್ಪ ವಿರೋಧ ವ್ಯಕ್ತಪಡಿಸಿದರು. ಬಂಧನಗಳ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ. ಒಬ್ಬ ಸಚಿವರು, ಕೆಲ ಬಂಧನಗಳು ನಡೆದಿರುವ ಕುರಿತು ತಾವು ಕೇಳಲ್ಪಟ್ಟಿರುವುದಾಗಿ ಹೇಳಿದರೂ, ಆ ವಿಷಯವನ್ನು ತಕ್ಷಣ ಪಕ್ಕಕ್ಕೆ ಸರಿಸಲಾಯಿತು. ಫ್ರೋ.ಧಾರ್ ಅವರಿಗೂ ಬಂಧನಗಳ ಕುರಿತು ಏನೊಂದೂ ಗೊತ್ತಿದ್ದಿಲ್ಲ. ಜೆಪಿ (ಜಯಪ್ರಕಾಶ್ ನಾರಾಯಣ), ಮೊರಾರ್ಜಿ, ಚರಣ್ ಸಿಂಗ್ ಸೇರಿದಂತೆ ಪ್ರತಿಪಕ್ಷಗಳ ಪ್ರಮುಖ ನಾಯಕರೆಲ್ಲ ಬಂಧಿಸಲ್ಪಟ್ಟಿದ್ದಾರೆಂದು ಶಾರದಾ ಹೇಳಿದರು.

ಸಂಜಯ್ ಈಗ ಪ್ರಧಾನಿ ನಿವಾಸದ ಪೂರ್ತಿ ಹತೋಟಿಯಲ್ಲಿದ್ದಾರೆಂದೂ ಶಾರದಾ ನನಗೆ ತಿಳಿಸಿದರು. ಸಂಪುಟ ಸಭೆಯ ನಂತರ, ಗುಜರಾಲ್ ಅವರನ್ನು ಪಕ್ಕಕ್ಕೆ ಕರೆದ ಆತ, ಪ್ರಚಾರ ನಿರ್ವಹಣೆಯನ್ನು ತೀರಾ ದುರ್ಬಲವಾಗಿ ನಡೆಸಿದ್ದಾಗಿ ಬೈದರು. ಇನ್ನು ಮುಂದೆ, ಪ್ರಧಾನಿ ಕಚೇರಿಯ ಪ್ರತಿಯೊಂದು ಹೊಸ ಘೋಷಣೆಗಳನ್ನೂ ತನಗೆ ಕಳಿಸುವಂತೆ ತಾಕೀತು ಮಾಡಿದರು. ಅದಕ್ಕೆ ಉತ್ತರವಾಗಿ ಗುಜ್ರಾಲ್, “ಕೆಲಸ ಸರಿಯಾಗಿ ಆಗಬೇಕೆಂದರೆ ಕೆಲ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ. ಅಂಥ ವ್ಯಕ್ತಿ ಆಕಾಶವಾಣಿಯಲ್ಲಿದ್ದರೆ, ಅಲ್ಲಿಂದ ಪ್ರಸಾರವಾಗುವ ಸುದ್ದಿಗಳನ್ನು ಆತನಿಗೆ ತೋರಿಸಲು ಸಾಧ್ಯವಾಗುತ್ತದೆ,” ಎಂದರು. ಈ ಕೆಲಸಕ್ಕೆ ಶಾರದಾ ಪ್ರಸಾದ್ ಸೂಕ್ತ ವ್ಯಕ್ತಿ ಎಂದು ಗುಜ್ರಾಲ್ ಸೂಚಿಸಿದರಾದರೂ, ಬೆಹ್ಲ್ ನ್ನು ಆ ಕೆಲಸಕ್ಕೆ ನಿಯೋಜಿಸಿದರು ಸಂಜಯ್.

ವಿ ಆರ್ ಕೂಡ ನಮ್ಮೊಂದಿಗೆ ಸೇರ್ಪಡೆಯಾದರು. ಶಾರದಾ ಹೇಳಿದ್ದನ್ನು ಕೇಳಿಸಿಕೊಂಡ ನಂತರ, “ಇನ್ಮುಂದೆ ಭಾರತ ಕೂಡ ನಿರ್ದೇಶಿತ ಪ್ರಜಾಪ್ರಭುತ್ವ ಹೊಂದುತ್ತದೆ,” ಎಂಬುದು ಅವರ ಪ್ರತಿಕ್ರಿಯೆಯಾಗಿತ್ತು. ಅದಕ್ಕುತ್ತರವಾಗಿ ಶಾರದಾ ಹೇಳಿದ್ದು, ತೀರಾ ಕೆಳದನಿಯ “ಹೌದು,” ಮಾತ್ರ. ಅವರು ತೀರಾ ದಣಿದಿದ್ದರು. ಜೂನ್12ರಿಂದ ಅವರು ಪ್ರಧಾನಿ ಸಚಿವಾಲಯದಲ್ಲಿ ಅತ್ಯಂತ ಕಠಿಣ ಕೆಲಸಗಳನ್ನು ಮಾಡುವಂತಾಗಿತ್ತು. ಏಕೆಂದರೆ, ಪ್ರಧಾನಿ ಅವರ ಇಡೀ ಕಾರ್ಯತಂತ್ರವೇ ಪ್ರೇರಿತ ಪ್ರಚಾರವನ್ನು ಅವಲಂಬಿಸಿತ್ತು.

ಆದರೆ ದೈಹಿಕ ದಣಿವಿಗಿಂತ ಹೆಚ್ಚಾಗಿ ಮಾನಸಿಕ ದಣಿವು ಅವರನ್ನು ಹಣ್ಣು ಮಾಡಿತ್ತು. ಈ ಸ್ಥಿತಿಯಲ್ಲಿ ಅವರನ್ನು ನಾನು ಯಾವತ್ತೂ ನೋಡಿದ್ದಿಲ್ಲ. “ಇಂಥದೊಂದು ಪರಿಸ್ಥಿತಿಗಾಗಿಯೇ ನಾನು 1942ರಲ್ಲಿ ಜೈಲಿಗೆ ಹೋಗಿದ್ದು?” ಎಂದು ಅವರು ಸ್ವಯಂ ಪ್ರಶ್ನಿಸಿಕೊಳ್ಳುತ್ತಿದ್ದರು. ಅವರು ಪತ್ರಕರ್ತ. ಸ್ವಾತಂತ್ರ್ಯಾನಂತರ, ಇದೇ ಮೊದಲ ಬಾರಿ ಪ್ರಕಟಣಾ ಸೆನ್ಸಾರ್‍ಶಿಪ್ ಜಾರಿಯಾಗಿತ್ತು…

ಇವತ್ತು ಶೇಷನ್ ಕಚೇರಿಗೆ ತುಂಬಾ ತಡವಾಗಿ ಬಂದವರು ನೇರವಾಗಿ ನನ್ನ ಕೊಠಡಿಗೆ ಬಂದರು. “ನೋಡು, ನಾನು ನಿನಗೆ ಹೇಳಿದ್ದೆನಲ್ಲ? ಆದರೆ ಮುಂದೇನಾಗುತ್ತದೋ ನನಗೆ ಗೊತ್ತಿಲ್ಲ. ಸಂಜಯ್ ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟಿದ್ದಾನೆ,” ಎಂದರು. ಇಡೀ ದಿನ ನಾನು ಖಿನ್ನನಾಗಿದ್ದೆ. ಅಷ್ಟೇ ಅಲ್ಲ, ಮನಸ್ಸು ತುಂಬಾ ಕಹಿಯಾಗಿತ್ತು. ಪ್ರಜಾಪ್ರಭುತ್ವ ಕೊನೆಯಾಗಿಬಿಟ್ಟಿತೇ? ನಾನು ನನ್ನ ಕೊಠಡಿ ಬಿಟ್ಟು ಕದಲಲಿಲ್ಲ. ಫ್ರೋ.ಧಾರ್ ಅವರನ್ನು ನೋಡಲು ಕೂಡ ಹೋಗಲಿಲ್ಲ. ಏನು ಉಪಯೋಗ? ಅವರ

ನೋವು ನನಗೆ ಅರ್ಥವಾಗುತ್ತಿತ್ತು. ತುರ್ತು ಪರಿಸ್ಥಿತಿ ಸಂಬಂಧಿ ಕೆಲಸಗಳೆಲ್ಲ ನನಗೆ ಹೊಸದಾಗಿದ್ದವು ಮತ್ತು ಅವನ್ನು ಹೇಗೆ ನಿಭಾಯಿಸುವುದೆಂಬುದು ನನಗೆ ನಿಜಕ್ಕೂ ಅರ್ಥವಾಗಿದ್ದಿಲ್ಲ.

ಇದನ್ನೆಲ್ಲ ನೋಡಿಕೋ ಎಂದು ನಾನು ಬೆಹ್ಲ್‍ಗೆ ಹೇಳಿದೆ. ಅಷ್ಟಕ್ಕೂ ಅವರನ್ನು ಕರೆಸಿದ್ದು ಕೇವಲ ಹೆಚ್ಚುವರಿ ಕೆಲಸಗಳನ್ನು ನೋಡಿಕೊಳ್ಳೋಕೆ ಮಾತ್ರವಲ್ಲ, ಕ್ರಮೇಣ ನನ್ನೆಲ್ಲ ಜವಾಬ್ದಾರಿಗಳನ್ನು ನಿಭಾಯಿಸಲಿಕ್ಕೆಂದೇ. ಇವತ್ತು ನೆಹರು ಆತ್ಮ ಅದೆಷ್ಟು ತಳಮಳಗೊಂಡಿರಬಹುದು ಎಂದು ನಾನು ಪದೇಪದೆ ಅಂದುಕೊಳ್ಳುತ್ತಿದ್ದೆ. (ಪ್ರಧಾನಮಂತ್ರಿ ಕಚೇರಿ ದಿನಚರಿ-1ರ ಆಯ್ದ ಭಾಗ. ತುರ್ತುಪರಿಸ್ಥಿತಿಗೆ ಮುನ್ನುಡಿ. ಲೇಖಕ ಬಿ ಎನ್ ಟಂಡನ್. ಕೋನಾರ್ಕ್ ಪ್ರಕಾಶನ. ಬಿ ಎನ್ ಟಂಡನ್ ಪುಸ್ತಕದ ಆಯ್ದಭಾಗದ ಕೊನೆ)

-kannadaprabha

Write A Comment