ರಾಷ್ಟ್ರೀಯ

ಸೋನಿಯಾ ಗಾಂಧಿಯನ್ನು ರಾಕ್ಷಸಿ ಪೂತನಿಗೆ ಹೋಲಿಸಿದ ಬಿಜೆಪಿ ಸಂಸದ: ರಾಹುಲ್ ಗಾಂಧಿಯನ್ನು ಗಿಣಿಗೆ ಹೋಲಿಕೆ

Pinterest LinkedIn Tumblr

sonia

ಪಾಟ್ನಾ: ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅಶ್ವಿನಿ ಕುಮಾರ್ ಚೌಬೇ ವಿವಾದ ಸೃಷ್ಟಿಸಿದ್ದಾರೆ.

ಬಿಜೆಪಿ ಸಂಸದ ಅಶ್ವಿನಿ ಕುಮಾರ್, ಸೋನಿಯಾ ಗಾಂಧಿ ಅವರನ್ನು ಪೌರಾಣಿಕ ಕಥೆಗಳಲ್ಲಿ ಬರುವ ರಾಕ್ಷಸಿ ಪೂತನಿಗೆ ಹೋಲಿಸಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗಿಣಿಗೆ ಹೋಲಿಸಿದ್ದಾರೆ. ಇದೇ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್.ಜೆ.ಡಿ ನಾಯಕ ಲಾಲೂ ಪ್ರಸಾದ್ ಯಾದವ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಅಶ್ವಿನಿ ಕುಮಾರ್ ಚೌಬೇ, ಪೂತನಿಯಿಂದ ತಮಗೆ ವಿಷ ಪ್ರಾಶನವಾಗುತ್ತದೆ ಎಂಬ  ಸತ್ಯ ತಿಳಿಯದೇ ಅವರಿಬ್ಬರೂ ಸೋನಿಯಾ ಗಾಂಧಿಯೊಂದಿಗೆ ಕೈ ಜೋಡಿಸಿದ್ದಾರೆ ಎಂದು ಬಿಜೆಪಿ ಸಂಸದ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ವಿರುದ್ಧ ಮಾತನಾಡುತ್ತಿರುವ ರಾಹುಲ್ ಗಾಂಧಿ ಅವರನ್ನು ಗಿಣಿಗೆ ಹೋಲಿಸಿರುವ ಅಶ್ವಿನಿ ಕುಮಾರ್, ಯುಪಿಎ ಆಡಳಿತದ ಅವಧಿಯಲ್ಲಿ ಮೌನವಾಗಿದ್ದ ರಾಹುಲ್ ಗಾಂಧಿ, ಈಗ ಬೇರೆಯವರು ಬಿಜೆಪಿ ವಿರುದ್ಧ  ಬರೆದುಕೊಟ್ಟಿದ್ದನ್ನು ಗಿಣಿಯಂತೆ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಈ ಹಿಂದೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೋನಿಯಾ ಗಾಂಧಿ ವಿರುದ್ಧ ಜನಾಂಗೀಯ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

Write A Comment