ರಾಷ್ಟ್ರೀಯ

ಪತಿ ವಿರುದ್ಧ ಸುಳ್ಳು ಆರೋಪ: ಪತ್ನಿಗೆ 1 ಲಕ್ಷ ರು. ದಂಡ ವಿಧಿಸಿದ ಕೋರ್ಟ್

Pinterest LinkedIn Tumblr

court

ನವದೆಹಲಿ: ಪತಿ ಹಾಗೂ ಅವರ ಪೋಷಕರ ವಿರುದ್ಧ ಸುಳ್ಳು ಆರೋಪ ಮಾಡಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮಹಿಳೆಯೊಬ್ಬರಿಗೆ ಕೋರ್ಟ್ 1 ಲಕ್ಷ ರು. ದಂಡ ವಿಧಿಸಿದೆ.

ಪತಿ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದು, ಅಗತ್ಯ ಮಾಹಿತಿಗಳನ್ನು ಮುಚ್ಚಿ ಹಾಕಿದ್ದಾರೆಂದು ಎಂದು ಹೇಳಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಶಿವಾನಿ ಚೌಹಾಣ್ ಅವರು ದಕ್ಷಿಣ ದೆಹಲಿಯ ಮಹಿಳೆಯ ದೂರನ್ನು ವಜಾಗೊಳಿಸಿದ್ದು ಅಲ್ಲದೆ ಒಂದು ಲಕ್ಷ ರು. ದಂಡ ವಿಧಿಸಿದ್ದಾರೆ.

‘ಮಹಿಳೆಯರು ಅತೀವವಾಗಿ ಕೌಟುಂಬಿಕ ದೌರ್ಜನ್ಯಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಮಹಿಳೆಯರನ್ನು ರಕ್ಷಿಸಲು ಮಹಿಳಾ ರಕ್ಷಣೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಇದನ್ನು ಸಂತ್ರಸ್ತರ ರಕ್ಷಣೆಗಾಗಿ ಬಳಸಬೇಕೇ ಹೊರತು, ಸ್ವಹಿತಾಸಕ್ತಿಗಾಗಿ ಅಲ್ಲ,’ ಎಂದು ಕೋರ್ಟ್‌ ಹೇಳಿದೆ.

‘ಪತಿ ಮತ್ತವರ ಪೋಷಕರನ್ನು ಸಿಕ್ಕಿಸಲು ಸುಳ್ಳು ಸಾಕ್ಷ್ಯಗಳನ್ನು ನೀಡಲಾಗಿದೆ. ಅಗತ್ಯ ಅಂಶಗಳನ್ನು ಮುಚ್ಚಿಡಲಾಗಿದೆ. ಆ ಮೂಲಕ ಅನ್ಯಾಯವಾಗಿ ಹಣ ಪಡೆಯಲು ಯತ್ನಿಸಿದ್ದು, ಕಾಯಿದೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ,’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

1989ರಲ್ಲಿ ಪ್ರೀತಿಸಿ, ಮದುವೆಯಾಗಿದ್ದ ದೂರುದಾರಳು ಹಾಗೂ ಪತಿ ನಡುವೆ ವೈಮನಸ್ಯ ಆರಂಭವಾಗಿತ್ತು. ಅದಕ್ಕೆ ಪತಿ ದೈಹಿಕವಾಗಿ, ಮಾನಸಿಕವಾಗಿ ದೌರ್ಜನ್ಯವೆಸಗುತ್ತಿದ್ದಾನೆ ಎಂದು ಆರೋಪಿಸಿದ್ದಲ್ಲದೆ, ಇದನ್ನು ನೋಡಿಕೊಂಡು ಪತಿಯ ಪೋಷಕರು ಸುಮ್ಮನಿದ್ದಾರೆ ಎಂದೂ ಮಹಿಳೆ ದೂರು ದಾಖಲಿಸಿದ್ದಳು.

Write A Comment