ರಾಷ್ಟ್ರೀಯ

ಬಿಜೆಪಿ ಏಜೆಂಟಾಗಿ ಕೆಲಸ ಮಾಡುತ್ತಿದ್ದೀಯಾ: ಪತ್ನಿಗೆ ಸೋಮನಾಥ್ ಭಾರ್ತಿ ಪ್ರಶ್ನೆ

Pinterest LinkedIn Tumblr

AAP

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಸೋಮನಾಥ್ ಭಾರ್ತಿ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಮಾಡಿರುವ ಆಪ್ ನಾಯಕನ ಪತ್ನಿ ಲಿಪಿಕಾ ಮಿತ್ರ, ನೀನು ಬಿಜೆಪಿ ಪರ ಕೆಲಸ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸುತ್ತಿದಾರೆ ಎಂದು ಪತಿ ವಿರುದ್ಧ ಹೊಸ ಆರೋಪ ಮಾಡಿದ್ದಾರೆ.

ಹಲ್ಲೆ ಪ್ರಕರಣ ದಾಖಲಿಸಿದ ದಿನದಿಂದಲೂ ತನಗೆ ಸಂದೇಶ ಕಲಿಸುತ್ತಿರುವ ಸೋಮನಾಥ್ ಭಾರ್ತಿ, ತಮ್ಮ ಹಾಗೂ ಮಕ್ಕಳ ಬಗ್ಗೆ ಹಿಂದೆಂದೂ ತೋರದ ಕಾಳಜಿ ತೋರುತ್ತಿದ್ದಾರೆ. ಅಲ್ಲದೇ ಬಿಜೆಪಿ ಪರ ಕೆಲಸ ಮಾಡುತ್ತಿರುವುದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೋಮನಾಥ್ ಭಾರ್ತಿ ವಿರುದ್ಧ ದೆಹಲಿ ಪೊಲೀಸರು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಲಿಪಿಕಾ ಮಿತ್ರ ಮನವಿ ಮಾಡಿದ್ದಾರೆ. ಹಲ್ಲೆಗೊಳಗಾಗುತ್ತಿದ್ದ ಮಕ್ಕಳ ರಕ್ಷಣೆಗಾಗಿ ತಾವು ಸೋಮನಾಥ್ ಭಾರ್ತಿ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ತನ್ನ ಪತಿ ತನ್ನ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿರುವುದಕ್ಕೆ ತಮ್ಮ ಬಳಿ ಸೂಕ್ತ ದಾಖಲೆಗಳಿವೆ ಎಂದು ಲಿಪಿಕಾ ಮಿತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೂ.10 ರಂದು ದೆಹಲಿ ಮಹಿಳಾ ಆಯೋಗ ನೊಟೀಸ್ ಜಾರಿ ಮಾಡಿತ್ತು.

Write A Comment