ರಾಷ್ಟ್ರೀಯ

ನೀಲಿ ಚಿತ್ರಗಳಿಗೆ ದಾಸರಾಗುತ್ತಿದ್ದಾರಂತೆ ಭಾರತದ ಯುವಕರು !

Pinterest LinkedIn Tumblr

5261laptop-creeper

ಭಾರತದಲ್ಲಿ ನೀಲಿ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚುತ್ತಿದ್ದು ದಿನದಿಂದ ದಿನಕ್ಕೆ ಯುವಕರು ಇದರ ದಾಸರಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಷಯವೊಂದು ಹೊರಬಿದ್ದಿದೆ.

ತಜ್ಞರ ಪ್ರಕಾರ, ಲೈಂಗಿಕ ಕ್ರಿಯೆ ಎಂಬುದು ನಿಗೂಢವಾಗಿ ಉಳಿದಿರುವುದರಿಂದ ಯುವಕರು ಅದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಿದ್ದು ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲದ ಮೂಲಕ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಾಗಿರುವುದರಿಂದ ಈ ಬಗೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗಿದೆ.

ಅದರಲ್ಲಿಯೂ ನೀಲಿ ಹಾಗೂ ವಯಸ್ಕರ ಚಲನಚಿತ್ರಗಳ ಮೂಲಕ ಯುವಕರ ಹಲವು ಲೈಂಗಿಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದ್ದು ಇದೇ ಕಾರಣಕ್ಕೆ ಇಂತಹ ವಿಡಿಯೋ ವೀಕ್ಷಣೆಗೆ ಮುಂದಾಗುತ್ತಿದ್ದಾರೆ ಎಂಬ ಅಂಶವನ್ನು ತಜ್ಞರು ಬಿಚ್ಚಿಟ್ಟಿದ್ದಾರೆ.

ಅಲ್ಲದೇ ಸುಮಾರು 356 ಮಿಲಿಯನ್ ಯುವಕರಿರುವ ಹೆಚ್ಚು ಜನಸಂಖ್ಯೆಯ ನಮ್ಮ ದೇಶದಲ್ಲಿ ಪೋರ್ನ್ ಸಿನೆಮಾಗಳು ಯುವಕರನ್ನು ಅಪಾಯಕಾರಿ ಲೈಂಗಿಕ ಕ್ರಿಯೆಗಳತ್ತ ಆಕರ್ಷಿಸುವ ಅಪಾಯವೂ ಇದ್ದು ಇದರಿಂದ ಮದುವೆಯಾದ ನಂತರ ವೈವಾಹಿಕ ಜೀವನದಲ್ಲೂ ಏರುಪೇರುಗಳಾಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕವನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ.

Write A Comment