ರಾಷ್ಟ್ರೀಯ

ಫೇಸ್ ಬುಕ್ ಚಾಟ್ ನಿಂದ 11 ಲಕ್ಷ ರೂ. ಕಳೆದುಕೊಂಡ ಐಎಎಸ್ ಅಧಿಕಾರಿ ಪತ್ನಿ

Pinterest LinkedIn Tumblr

13974422facebook-ad-credit

ಸಾಮಾಜಿಕ ಜಾಲತಾಣಗಳು ಇಂದು ಎಷ್ಟು ಜನಪ್ರಿಯವಾಗಿದೆಯೆಂದರೆ ಒಮ್ಮೊಮ್ಮೆ ತಾವು ಯಾರೊಂದಿಗೆ ಚಾಟ್ ಮಾಡುತ್ತಿದ್ದೇವೆ ಅದರ ಪರಿಣಾಮ ಏನೆಂಬುದನ್ನು ಯೋಚಿಸುವುದೂ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಿವೃತ್ತ ಐಎಎಸ್ ಅಧಿಕಾರಿಯ ಪತ್ನಿಯೊಬ್ಬರು ವ್ಯಕ್ತಿಯೊಬ್ಬನೊಂದಿಗೆ ಚಾಟ್ ಮಾಡಿ ಬರೋಬ್ಬರಿ 11ಲಕ್ಷ ರೂಪಾಯಿಗಳನ್ನು ಪಂಗನಾಮ ಹಾಕಿಸಿಕೊಂಡಿದ್ದಾರೆ.

ಹೌದು. ದೆಹಲಿಯಲ್ಲಿ ಈ ಘಟನೆ ನಡೆದಿದ್ದು ಮನೆಯಲ್ಲಿ ಒಂಟಿಯಾಗಿರುತ್ತಿದ್ದ  ನಿವೃತ್ತ ಐಎಎಸ್ ಅಧಿಕಾರಿಯ ಪತ್ನಿ ತನ್ನ ಸ್ನೇಹಿತರೊಂದಿಗೆ ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ  ಜಾಲತಾಣಗಳಲ್ಲಿ ಚಾಟ್ ಮಾಡುತ್ತಿದ್ದರು. ಈ ಸಮಯದಲ್ಲಿ ಲಂಡನ್ ಮೂಲದ ಜಾನ್ ಕೆನಡಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ  ಚಾಟ್ ಮಾಡಲು ಪ್ರಾರಂಭಿಸಿದ್ದು  ಒಂದು ವಾರದ ಗೆಳೆತನದ ಬಳಿಕ  ವಂಚಕ ಆಕೆಗಾಗಿ ಭಾರತದಲ್ಲಿ ಒಂದು ಮನೆಯನ್ನು ಖರೀದಿಸುವುದಾಗಿ ತಿಳಿಸಿದ್ದಾನೆ. ಪ್ರಾರಂಭದಲ್ಲಿ ವಿದೇಶಿ ಸ್ನೇಹಿತನ ಮನವಿಯನ್ನು ತಿರಸ್ಕರಿಸಿದರಾದರೂ, ಒತ್ತಾಯಿಸಿದ್ದರಿಂದ ಒಪ್ಪಿಕೊಂಡಿದ್ದಾರೆ.

ಅಲ್ಲದೇ ಒಮ್ಮೆ ತಾನು ಭಾರತಕ್ಕೆ ಬಂದಿದ್ದು ಬೃಹತ್ ಮೊತ್ತದ ಹಣ ತಂದಿರುವುದಕ್ಕಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ತನ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಡುಗಡೆಯಾಗಲು 75 ,000 ರೂಪಾಯಿ ಕಳಿಸುವಂತೆ ನಿವೃತ್ತ ಐಎಎಸ್ ಅಧಿಕಾರಿ ಪತ್ನಿಯನ್ನು ಕೇಳಿದ್ದಾನೆ. ಈ ಸಮಯದಲ್ಲಿಯೂ ಆಕೆ ಹಣ ನೀಡಿದ್ದು ಇದಾದ ಬಳಿಕ ಹಲವು ಬಾರಿ ಹಣ ಪಡೆಯುತ್ತಿದ್ದರಿಂದ, ಅನುಮಾನಗೊಂಡು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನ್ನೊಂದಿಗೆ ಚಾಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನಿಂದ 11 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾನೆ ಎಂದು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಶೇಷವೆಂದರೆ ಈ  ವಂಚಕ ಮಹಿಳೆಗೆ ಮೂರು ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿದ್ದು, ನವದೆಹಲಿಯ ಉತ್ತಂ ನಗರದಿಂದ ನೆಟ್ವರ್ಕ್ ಪತ್ತೆಯಾಗಿದ್ದು ಪೊಲೀಸರು ವಂಚಕನ ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment