ಕರ್ನಾಟಕ

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ: ಕಿರುತೆರೆ ನಟಿ ಬಂಧನ

Pinterest LinkedIn Tumblr

hitec

ಬೆಂಗಳೂರು: ಅಮಾಯಕ ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುತ್ತಿದ್ದ ಆರೋಪದ ಮೇಲೆ ಕಿರುತೆರೆ ನಟಿಯೊಬ್ಬರನ್ನು ಬುಧವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಗೋವಿಂದರಾಜನಗರ ಬಡಾವಣೆಯ ಎಂ.ಆರ್.ಸಿ. ಲೇಔಟ್​ನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ತಂಡ, ಕಿರುತೆರೆ ನಟಿಯನ್ನು ಬಂಧಿಸಿ, ತುಮಕೂರು ಮೂಲದ ಓರ್ವ ಯುವತಿಯನ್ನು ರಕ್ಷಿಸಿದೆ.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ಯೂಟಿ ಪಾರ್ಲರ್​ನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಬೇರೆ ಕಡೆಗಳಿಂದ ಮಹಿಳೆಯರನ್ನು ಕರೆತರುತ್ತಿದ್ದ ಕಿರುತೆರೆ ನಟಿ, ಅವರನ್ನು ಬಲವಂತವಾಗಿ ವೇಶ್ಯಾವಾಟಿಕಗೆ ದೂಡುತ್ತಿದ್ದಳೆಂದು ಪೊಲೀಸ್ ಮೂಲಗಳು ತಿಳಿಸಿವೆ.

Write A Comment