ಗಲ್ಫ್

ದುಬೈ ಸಿಟಿ ಪೊಲೀಸ್ ಬ್ಯಾಂಡ್ ಭಾರತದ ರಾಷ್ಟ್ರಗೀತೆಯನ್ನು ನುಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(ವೀಡಿಯೋ ವರದಿ)

Pinterest LinkedIn Tumblr

 ದುಬೈ: ದೀಪಾವಳಿ ಆಚರಣೆ ಸಂದರ್ಭ ದುಬೈ ಸಿಟಿ ಪೊಲೀಸ್ ಬ್ಯಾಂಡ್ ಭಾರತದ ರಾಷ್ಟ್ರಗೀತೆಯನ್ನು ನುಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದುಬೈಯಲ್ಲಿ ದುಬೈ ಪ್ರವಾಸೋದ್ಯಮ ಮತ್ತು ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ದೀಪಾವಳಿ ಆಚರಣೆ ಆರಂಭಗೊಂಡಿದೆ.

ಲೇಸರ್ ಶೋಗೂ ಮುನ್ನ ದುಬೈ ಪೊಲೀಸರು ‘ಜನ ಗಣ ಮನ’ ರಾಷ್ಟ್ರಗೀತೆಯ ಬ್ಯಾಂಡ್ ಬಾರಿಸುವ ಮೂಲಕ ಗಮನಸೆಳೆದರು. ಬ್ಯಾಂಡ್ ನಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಸೇರಿದ್ದ ಜನರು ರಾಷ್ಟ್ರಗೀತೆ ಹಾಡಲು ಆರಂಭಿಸಿದರು.

Comments are closed.