ಗಲ್ಫ್

ಶಾರ್ಜಾ ವಾಲಿಬಾಲ್-ಥ್ರೋಬಾಲ್ ಪಂದ್ಯಾಟ: ‘ಯುನೈಟೆಡ್ ಕಪ್-2015’ನ್ನು ಮುಡಿಗೇರಿಸಿಕೊಂಡ ಇಂಡಿಯನ್ ಸ್ಪೈಕರ್-ಮಂಗಳೂರು ಕೊಂಕಣ್ಸ್ -ನಮ್ಮ ಕುಡ್ಲ-ಕಾರ್ಳ ಕಿಂಗ್ಸ್

Pinterest LinkedIn Tumblr

United Cup volleyball, throwball _Dec 2-2015-148

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್

ಶಾರ್ಜಾ, ಡಿ.3: ‘ಈವೆಂಟ್ಸ್ 306’ ಶಾರ್ಜಾದ ವಂಡರೆರ್ಸ್‌ ಸ್ಪೋರ್ಟ್ ಕ್ಲಬ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಯುನೈಟೆಡ್ ಕಪ್-2015’ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಇಂಡಿಯನ್ ಸ್ಪೈಕರ್ ವಿಜೇತವಾದರೆ, ಥ್ರೋಬಾಲ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಮಂಗಳೂರು ಕೊಂಕಣ್ಸ್ ಮತ್ತು ಮಿಕ್ಸ್ ಥ್ರೋಬಾಲ್ ಪುರುಷರ ವಿಭಾಗದಲ್ಲಿ ನಮ್ಮ ಕುಡ್ಲ, ಮಹಿಳೆಯರ ವಿಭಾಗದಲ್ಲಿ ಕಾರ್ಳ ಕಿಂಗ್ಸ್ ತಂಡಗಳು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿವೆ.

United Cup volleyball, throwball _Dec 2-2015-147

United Cup volleyball, throwball _Dec 2-2015-123

United Cup volleyball, throwball _Dec 2-2015-129

United Cup volleyball, throwball _Dec 2-2015-121

United Cup volleyball, throwball _Dec 2-2015-127

ರೋಚಕವಾಗಿ ಮೂಡಿಬಂದ ಪುರುಷರ ವಾಲಿಬಾಲ್ ಫೈನಲ್‌ನಲ್ಲಿ ಇಂಡಿಯನ್ ಸ್ಪೈಕರ್ ತಂಡವು ಯೇಸ್(ಎಸಿಇ) ಸ್ಪೈಕರ್ ತಂಡವನ್ನು ಸೋಲಿಸುವ ಮೂಲಕ ‘ಯುನೈಟೆಡ್ ಕಪ್-2015’ನ್ನು ತನ್ನದಾಗಿಸಿಕೊಂಡಿತು.

ಥ್ರೋಬಾಲ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಮಂಗಳೂರು ಕೊಂಕಣ್ಸ್ ತಂಡಗಳು ಫೈನಲ್‌ನಲ್ಲಿ ಕೋಸ್ಟಲ್ ಫ್ರೆಂಡ್ಸ್ ಹಾಗೂ ಬಂಟ್ಸ್ ದುಬೈನ್ನು ಸೋಲಿಸುವ ಮೂಲಕ ವಿಜಯದ ನಗೆಬೀರಿದವು.

ಮಿಕ್ಸ್ ಥ್ರೋಬಾಲ್ ಪುರುಷರ ವಿಭಾಗದಲ್ಲಿ ನಮ್ಮ ಕುಡ್ಲ ತಂಡವು ಕಂದಾಪುರ ಟೈಗರ್ಸ್‌ ತಂಡವನ್ನು, ಮಹಿಳೆಯರ ವಿಭಾಗದಲ್ಲಿ ಕುಂದಾಪುರ ಟೈಗರ್ಸ್‌ ತಂಡವನ್ನು ಕಾರ್ಳ ಕಿಂಗ್ಸ್ ತಂಡವು ಸೋಲಿಸುವ ಮೂಲಕ ಗೆಲವಿನ ಪತಾಕೆಯನ್ನು ಹಾರಿಸಿತು.

ಪಂದ್ಯಾಟಕ್ಕೆ ವಿದ್ಯುಕ್ತ ಚಾಲನೆ

United Cup volleyball, throwball _Dec 2-2015-153

United Cup volleyball, throwball _Dec 2-2015-154

United Cup volleyball, throwball _Dec 2-2015-155

United Cup volleyball, throwball _Dec 2-2015-156

United Cup volleyball, throwball _Dec 2-2015-157

United Cup volleyball, throwball _Dec 2-2015-158

United Cup volleyball, throwball _Dec 2-2015-159

United Cup volleyball, throwball _Dec 2-2015-160

United Cup volleyball, throwball _Dec 2-2015-161

United Cup volleyball, throwball _Dec 2-2015-162

ಇದಕ್ಕೂ ಮುನ್ನ ಬೆಳಗ್ಗೆ ನಡೆದ ಪಂದ್ಯಾಕೂಟಕ್ಕೆ ಚಾಲನೆ ನೀಡಲಾಯಿತು. ದುಬೈ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಗಾಯಕರೂ ಆಗಿರುವ ಹರೀಶ್ ಶೇರಿಗಾರ್, ಉದ್ಯಮಿಗಳಾದ ಜೆರ್ರಿಲೋಬೋ, ರಮಾನಂದ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ ಪಾರಿವಾಳ ಹಾಗೂ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಪಂದ್ಯೂಟಕ್ಕೆ ಚಾಲನೆ ನೀಡಿದರು.

ಬಹುಮಾನ ವಿತರಣಾ ಸಮಾರಂಭ

United Cup volleyball, throwball _Dec 2-2015-140

United Cup volleyball, throwball _Dec 2-2015-141

United Cup volleyball, throwball _Dec 2-2015-142

United Cup volleyball, throwball _Dec 2-2015-143

United Cup volleyball, throwball _Dec 2-2015-144

United Cup volleyball, throwball _Dec 2-2015-145

United Cup volleyball, throwball _Dec 2-2015-146

ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಉದ್ಯಮಿಗಳಾದ ಜೆರ್ರಿಲೋಬೋ, ರಮಾನಂದ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ವಾಲ್ಟರ್ ವೇದಿಕೆಯಲ್ಲಿ ಹಾಜರಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ, ಅಭಿನಂದಿಸಿದರು. ಈ ವೇಳೆ ಪಂದ್ಯಾಟದ ಸಂಘಟಕ ವಿನೋದ್ ಎಲ್ಲರನ್ನು ಸ್ವಾಗತಿಸಿದರು.

ಪಂದ್ಯಾಟದ ವಾಲಿಬಾಲ್‌ನಲ್ಲಿ ಬೆಸ್ಟ್ ಸ್ಟ್ರೈಕರ್ ಯೇಸ್(ಎಸಿಇ) ಸ್ಪೈಕರ್ ತಂಡದ ಅವಿನಾಶ್ ಶೆಟ್ಟಿ, ಬೆಸ್ಟ್ ಸೆಟ್ಟರ್ ಇಂಡಿಯನ್ ಸ್ಪೈಕರ್ ತಂಡದ ರಿಯಾಝ್, ಬೆಸ್ಟ್ ಆಲ್‌ರೌಂಡರ್ ಇಂಡಿಯನ್ ಸ್ಪೈಕರ್ ತಂಡದ ಸುನಿಲ್ ಪಾಲಾದವು.

United Cup volleyball, throwball _Dec 2-2015-010

United Cup volleyball, throwball _Dec 2-2015-011

United Cup volleyball, throwball _Dec 2-2015-012

United Cup volleyball, throwball _Dec 2-2015-013

United Cup volleyball, throwball _Dec 2-2015-014

ಥ್ರೋಬಾಲ್ ಮಹಿಳೆಯರ ವಿಭಾಗದಲ್ಲಿ ಬೆಸ್ಟ್ ಸ್ಟ್ರೈಕರ್ ಮಂಗಳೂರು ಕೊಂಕಣ್ಸ್ ತಂಡದ ಐರಿನ್, ಬೆಸ್ಟ್ ಡಿಫೆಂಡರ್ ಬಂಟ್ಸ್ ದುಬೈ ತಂಡದ ಶ್ರುತಿ ಶೆಟ್ಟಿ ಮತ್ತು ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಮಂಗಳೂರು ಕೊಂಕಣ್ಸ್ ತಂಡದ ಝೈನ್ ಅವರಿಗೆ ನೀಡಿ ಅಭಿನಂದಿಸಲಾಯಿತು.

ಥ್ರೋಬಾಲ್ ಪುರುಷರ ವಿಭಾಗದಲ್ಲಿ ಬೆಸ್ಟ್ ಸ್ಟ್ರೈಕರ್ ಕೋಸ್ಟಲ್ ಸ್ಟ್ರೈಕರ್ ತಂಡದ ಅಲನ್, ಬೆಸ್ಟ್ ಡಿಫೆಂಡರ್ ಮಂಗಳೂರು ಕೊಂಕಣ್ಸ್ ತಂಡದ ಖೇತ್ ಹಾಗೂ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಮಂಗಳೂರು ಕೊಂಕಣ್ಸ್ ತಂಡದ ರಿಜಾಯ್ ಪಡೆದುಕೊಂಡರು.

Write A Comment