ಗಲ್ಫ್

ದ್ವೀಪದ ಕನ್ನಡಿಗ ತುಳುವ ಕಲಾ ಪ್ರೇಮಿಗಳಿಗೆ ಮೂರು ದಿನಗಳ ಸಾಂಸ್ಕ್ರತಿಕ ಹಬ್ಬ ;”ಸಂಭ್ರಮ -2015″ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಕ್ಷಣ ಗಣನೆ ಆರಂಭ 

Pinterest LinkedIn Tumblr

IC Sambhrama Appeal_2

ಬಹರೈನ್ ; ಇಲ್ಲಿನ ಇಂಡಿಯನ್ ಕ್ಲಬ್ಬಿನ ಆಶ್ರಯದಲ್ಲಿ ಪೆಪಿಲೋನ್ ರೆಸ್ಟೋರೆಂಟ್ ಸಾದರಪಡಿಸುವ “ಸಂಭ್ರಮ -2015” ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮದ ಪೂರ್ವ ಸಿದ್ಧತೆ ಭರದಿಂದ ಸಾಗಿದ್ದು ಇದೆ ಬರುವ ಅಕ್ಟೋಬರ್ ತಿಂಗಳ ದಿನಾಂಕ 8,9 ಹಾಗು 10ರಂದು ಜರುಗಲಿರುವ ಮೂರು ವಿಭಿನ್ನ ಸಾಂಸ್ಕ್ರತಿಕ ಕಾರ್ಯಕ್ರಮಗಳು ದ್ವೀಪದ ಕಲಾಭಿಮಾನಿಗಳಿಗೆ ಒಂದು ಸಾಂಸ್ಕ್ರತಿಕ ಹಬ್ಬವಾಗಿ ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ .

Ajane Avondhundu Prog

Jr yesudas programme

ಅಕ್ಟೋಬರ್ 8 ರಂದು ನಾಡಿನ ಜನಪ್ರಿಯ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿ ವಿಜೇತ ,ಕರ್ನಾಟಕ ಕಲಾಶ್ರೀ ರಮೇಶ್ಚಂದ್ರ ಹಾಗು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಲಿದ್ದು ,ದೇಶದ ಮಹಾನ್ ಹಿನ್ನೆಲೆ ಗಾಯಕ ,ಕಳೆದ 5 ದಶಕಗಗಳಿಗಿಂತಲೂ ಹೆಚ್ಚಾಗಿ ಭಾರತೀಯ ಸಂಗೀತಕ್ಕೆ ಅನನ್ಯ ಕೊಡುಗೆ ನೀಡಿರುವ ಪದ್ಮಭೂಷಣ ,ಪದ್ಮಶ್ರೀ ಕೆ . ಜೆ . ಯೇಸುದಾಸ್ ರವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಹಾಡಿರುವ ಜನಪ್ರಿಯ ಕನ್ನಡ,ಹಿಂದಿ,ತಮಿಳು,ಮಲಯಾಳಂ ಗೀತೆಗಳನ್ನು ಶ್ರೀ ರಮೆಶ್ಚಂದ್ರನ್ ರವರು ಹಾಡಲಿದ್ದಾರೆ.

KARUNAKAR PADMASHAALI

RAMESHCHANDRAN 2

SAHANA BHAT 1

SAHANA BHAT 2

SAHANA BHAT 3

Sahana Programme

ಸ್ಥಳೀಯ ನ್ರತ್ಯ ಪಟುಗಳು ಈ ಕಾರ್ಯಕ್ರಮದಲ್ಲಿ ವೈವಿಧ್ಯಮಯ ನ್ರತ್ಯಗಳನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ . ಈ ಕಾರ್ಯಕ್ರಮವು ಸಂಜೆ 7;30 ಗೆ ಸರಿಯಾಗಿ ಆರಂಭಗೊಳ್ಳಲಿರುವುದು . ಮೂರು ದಿನಗಳ ಕಾರ್ಯಕ್ರಮಕ್ಕೆ ತಾಯ್ನಾಡಿನಿಂದ ಗಣ್ಯರುಗಳು ವಿಶೇಷವಾಗಿ ಆಗಮಿಸುತಿದ್ದು ಪೂರ್ಣಕುಂಭ ಸ್ವಾಗತದೊಂದಿಗೆ ನಾಡಿನ ಸಂಸ್ಕ್ರತಿಯನ್ನು ಬಿಂಬಿಸುವ ವರ್ಣರಂಜಿತ ಮೆರವಣಿಗೆಯಲ್ಲಿ ಇವರುಗಳನ್ನು ಕರೆತರಲಾಗುವುದು . ನಂತರ ಗಣ್ಯರುಗಳು ಜ್ಯೋತಿ ಬೆಳಗಿಸಿ ಮೂರು ದಿನಗಳ ಸಾಂಸ್ಕ್ರತಿಕ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಲಿರುವರು .

ಅಕ್ಟೋಬರ್ 9 ದ್ವೀಪದ ತುಳು ನಾಟಕ ಪ್ರೇಮಿಗಳಿಗೆ ವಿಶೇಷವಾದ ದಿನ . ದ್ವೀಪದ ಪ್ರತಿಭಾವಂತ ನಾಟಕಕರ್ತ, ನಿರ್ದೇಶಕ ,ನಟ ಶ್ರೀ ಕರುಣಾಕರ ಪದ್ಮಶಾಲಿ ಇವರು ರಚಿಸಿ ,ನಿರ್ದೇಶಿಸಿರುವ ಭಯಾನಕ ,ಹಾಸ್ಯಮಯ ನಾಟಕ “ಅಜನೆ ಆವೊಂದುಂಡು ” ಪ್ರದರ್ಶನಗೊಳ್ಳಲಿದೆ.

ಈ ಹಿಂದೆ ” ಯೇತ್ಲಾ ತೆಲಿಪೊಲಿ ” ,”ವಂತೆ ಕಾಪುವನಾ ” , “ಉಪ್ಪಡ್ “, ಸೆಕೆಂಡ್ ಹ್ಯಾಂಡ್ ಶೇಖರೆ ” ಮುಂತಾದ ನಾಟಕಗಳನ್ನು ರಚಿಸಿ,ನಿರ್ದೇಶಿಸಿ ದ್ವೀಪದ ನಾಟಕ ಪ್ರೇಮಿಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಕರುಣಾಕರ ಪದ್ಮಶಾಲಿ ಈ ಬಾರಿ ಒಂದು ವಿಭಿನ್ನ ಕಥಾ ವಸ್ತುವಿನೊಂದಿಗೆ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನದಲ್ಲಿದ್ದಾರೆ . ಕನ್ನಡ ಸಂಘ ಬಹರೈನ್ ನ ಪ್ರತಿಭಾವಂತ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದು,ತುಳು ರಂಗಭೂಮಿಯ ಖ್ಯಾತ ಸಂಗೀತ ನಿರ್ದೇಶಕ ಶಶಿ ಹೆಜಮಾಡಿಯವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಿ ಈ ನಾಟಕಕ್ಕೆ ಸಂಗೀತ ನೀಡಲಿದ್ದಾರೆ . ಮೂರುವರೆ ಘಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಈ ಕುತೂಹಲಕಾರಿ ನಾಟಕವು ಸಂಜೆ 6 ಘಂಟೆಗೆ ಸರಿಯಾಗಿ ಪ್ರದರ್ಶನ ಕಾಣಲಿದೆ .

ಮೂರನೆಯ ದಿನ ಅಂದರೆ ಅಕ್ಟೋಬರ್ 10 ಸಾಂಸ್ಕ್ರತಿಕ ಹಬ್ಬದ ಸಮಾರೋಪ ಸಮಾರಂಭದ ದಿನ. ನಾಡಿನ ಖ್ಯಾತ ಪ್ರಶಸ್ತಿ ವಿಜೇತ ನ್ರತ್ಯ ನಿರ್ದೇಶಕಿ ವಿದುಷಿ ಶ್ರೀಮತಿ ಸಹನಾ ಭಟ್ ರವರು ದ್ವೀಪದ ಪ್ರತಿಭಾವಂತ ನ್ರತ್ಯ ಪಟುಗಳೊಂದಿಗೆ ಶಾಸ್ತ್ರೀಯ ನ್ರತ್ಯಗಳನ್ನು ,ನ್ರತ್ಯ ರೂಪಕಗಳನ್ನೂ ಪ್ರದರ್ಶಿಸಲಿದ್ದಾರೆ . ಈ ಕಾರ್ಯಕ್ರಮವು ಸಂಜೆ 6ಕ್ಕೆ ಸರಿಯಾಗಿ ಪ್ರಾರಂಭವಾಗಲಿದ್ದು ,ಇದೇ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ವಿಶೇಷವಾದ ಸಾಧನೆ ಮಾಡಿದ ಸಾಧಕರುಗಳನ್ನು ಸಮ್ಮಾನಿಸಲಾಗುವುದು . ದ್ವೀಪದ ಖ್ಯಾತ ಸಂಘಟಕ ಶ್ರೀ ಆನಂದ್ ಲೋಬೋರವರು ಸಂಭ್ರಮ -2015 ರ ಚುಕ್ಕಾಣಿಯನ್ನು ಹಿಡಿದಿದ್ದು , ಇಲ್ಲಿನ ಕರ್ನಾಟಕ ಮೂಲದ ವಿವಿಧ ಸಂಘ ,ಸಂಸ್ಥೆಗಳು ಈ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸುತ್ತಿದೆ .

ಈ ಮೂರು ದಿನಗಳ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ದ್ವೀಪದ ಕಲಾ ಪ್ರೇಮಿಗಳಿಗೆ ನಾಡಿನ ಸಂಸ್ಕ್ರತಿಯ ಸವಿಯನ್ನು ಉಣ್ಣಲು ಒಂದು ಸುವರ್ಣಾವಕಾಶ ಇದಾಗಿದೆ . ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಸಂಘಟಕರಾದ ಶ್ರೀ ಆನಂದ್ ಲೋಬೋರವರನ್ನು ದೂರವಾಣಿ ಸಂಖ್ಯೆ 39401279 ಮುಖೇನ ಸಂಪರ್ಕಿಸಬಹುದು .
ವರದಿ-ಕಮಲಾಕ್ಷ ಅಮಿನ್.

Write A Comment