(ಸಂಗ್ರಹ ಚಿತ್ರ)
ಮೈಸೂರು: ಮೈಸೂರಿನಲ್ಲಿ ವಿಸ್ಮಯವೊಂದು ಕಂಡಿದೆ. ಅನ್ಯಗ್ರಹ ಜೀವಿ ಏಲಿಯನ್ಸ್ ಕಾಣಿಸಿಕೊಂಡ ವದಂತಿ ಹಬ್ಬಿದ ಪರಿಣಾಮ ಪಿರಿಯಾಪಟ್ಟಣದ ಕಣಗಲ್ ಗ್ರಾಮದಲ್ಲಿನ ಗ್ರಾಮಸ್ಥರು ಕಂಗಾಲಾಗಿರುವ ಘಟನೆ ನಡೆದಿದೆ.
ಮೈಸೂರಿನ ಪಿರಿಯಾಪಟ್ಟಣದ ಕಣಗಲ್ ಗ್ರಾಮದಲ್ಲಿ ಮುಂಜಾನೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅನ್ಯಗ್ರಹ ಜೀವಿಯನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆಂದು ಹೇಳಲಾಗುತ್ತಿದ್ದು, ಈ ವದಂತಿಗೆ ಗ್ರಾಮಸ್ಥರು ಸೆರೆ ಹಿಡಿದಿರುವ ಫೋಟೋ ಯಾವುದು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.
ಅಂತೂ ಕಣಗಲ್ ಗ್ರಾಮದ ತುಂಬೆಲ್ಲಾ ಅನ್ಯಗ್ರಹ ಜೀವಿ ಕಂಡಿರುವ ಸುದ್ದಿ ಹಬ್ಬಿ ಜನ ಕಂಗಾಲಾಗಿರುವುದಂತೂ ಸತ್ಯ.
