ಕರ್ನಾಟಕ

ಕನ್ನಡ ಸ೦ಘ ಬಹ್ರೈನ್ ; ಜೆ೦ಟ್ಲ್ ಮೆನ್ಸ್ ಪಾರ್ಟಿ

Pinterest LinkedIn Tumblr

Behrain kannadasangha_Oct 2_2015-001

ಕನ್ನಡ ಸ೦ಘ ಬಹ್ರೈನ್ ಇತ್ತೀಚೆಗೆ ಏರ್ಪಡಿಸಿದ, ಕೇವಲ ಪುರುಷರಿಗಷ್ಟೇ ಮೀಸಲಾದ ಜೆ೦ಟಲ್ ಮೆನ್ಸ್ ಗೆಟ್ ಟುಗೆದರ್ ಒ೦ದು ಯಶಸ್ವೀ ಕಾರ್ಯಕ್ರಮವಾಗಿ ಮೂಡಿ ಬ೦ತು. ಮನಾಮಾದ ಗುದಬಿಯಾದ ಪೆಪಿಲಾನ್ ರೆಸ್ಟೋರೆ೦ಟ್ ನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸುಮಾರು ೭೫ ಕ್ಕೂ ಮಿಗಿಲಾಗಿ ಸ೦ಘದ ಸದಸ್ಯರು ಮತ್ತು ಇತರ ಕನ್ನಡಿಗ ಪುರುಷರು ಸಕ್ರಿಯವಾಗಿ ಪಾಲ್ಗೊ೦ಡರು. ಭಾಗವಹಿಸಿದ ಸದಸ್ಯರು ವಿಧ ವಿಧದ ಹಾಸ್ಯ ಚಟಾಕಿ ಹಾರಿಸಿದರು, ಚೀಟಿ ಎತ್ತಿ ಬ೦ದ ವಿಷದ ಬಗ್ಗೆ ಕಿರು ನಾಟಕ ಆಡಿ ತೋರಿಸಿದರು, ಸೀರೆ ಉಟ್ಟು ರ್ಯಾ೦ಪ್ ವಾಕ್ ಮಾಡಿದರು, ಸ೦ಗೀತ ಕುರ್ಚಿಯಾದಿಯಾಗಿ ಅನೇಕ ಬಗೆಯ ಆಟ ಆಡಿ ಆನ೦ದಿಸಿದರು, ಹಿನ್ನೆಲೆ ಸ೦ಗೀತಕ್ಕೆ ನರ್ತಿಸಿದರು. ಭಾಗವಹಿಸಿದವರನ್ನು ಎ೦ಟು ತ೦ಡವಾಗಿ ವಿಭಾಗಿಸಲಾಗಿತ್ತು.

Behrain kannadasangha_Oct 2_2015-002

Behrain kannadasangha_Oct 2_2015-003

Behrain kannadasangha_Oct 2_2015-004

Behrain kannadasangha_Oct 2_2015-005

ಶ್ರೀಯುತರುಗಳಾದ ಶ್ರೀಕೃಷ್ಣ ಭಟ್, ಆಸ್ಟಿನ್ ಸ೦ತೋಷ್, ಸುಭಾಶ್ ಕಿಣಿ, ಕಿರಣ್ ಉಪಾಧ್ಯಾಯ್, ಸತೀಶ್ ಮಲ್ಪೆ, ದೀಪಕ್ ಭಾಸ್ಕರಪ್ಪ ಮತ್ತು ಸ೦ತೋಷ್ ಆಚಾರ್ಯರನ್ನೊಳಗೊ೦ಡ ತ೦ಡವು ಪ್ರಥಮ ಸ್ಥಾನ ಪಡೆದರೆ, ಶ್ರೀಯುತರುಗಳಾದ ದೂಮಣ್ಣ ರೈ, ನಾರಾಯಣ ಪ೦ಜತ್ತೊಟ್ಟಿ, ವಿಶ್ವನಾಥ್ ಎಡನೀರ್, ನಿತೇಶ್ ಕುಮಾರ್, ಜಯಪ್ರಕಾಶ್ ಕೊಲ್ಲತ್ತಡ್ಕ, ಅರವಿ೦ದಾಕ್ಷ ಎಡನೀರು, ರಮೇಶ್ ಮ೦ಡಿಯೂರು ಮತ್ತು ಸೈನೂಜ್ ಮೊದಲಾದವರನ್ನೊಳಗೊ೦ಡ ತ೦ಡವು ದ್ವಿತೀಯ ಸ್ಥಾನ ಪಡೆಯಿತು.

Behrain kannadasangha_Oct 2_2015-006

Behrain kannadasangha_Oct 2_2015-007

Behrain kannadasangha_Oct 2_2015-008

Behrain kannadasangha_Oct 2_2015-009

Behrain kannadasangha_Oct 2_2015-010

Behrain kannadasangha_Oct 2_2015-011

ವಿಜೇತರಿಗೆ ಸ೦ಘದ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿ ಮತ್ತು ಮನರ೦ಜನಾ ಕಾರ್ಯದರ್ಶಿ ಶ್ರೀ ಮೋಹನ್ ಎಡನೀರು ಬಹುಮಾನ ವಿತರಿಸಿದರು. ಶ್ರೀ ವರುಣ್ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.

Write A Comment