ಗಲ್ಫ್

ಬಹ್ರೈನ್  ರಕ್ತದಾನ ಶಿಬಿರ

Pinterest LinkedIn Tumblr

DSC00423

ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘ ಬಹ್ರೈನ್ ಇತ್ತೀಚೆಗೆ ಗಣರಾಜ್ಯೋತ್ಸವದ ಅ೦ಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು. ಇಲ್ಲಿನ ಸಲ್ಮಾನಿಯಾ ಮೆಡಿಕಲ್ ಸೆ೦ಟರ್ ನಲ್ಲಿ ಏರ್ಪಡಿಸಲಾದ ಈ ಶಿಬಿರದಲ್ಲಿ ಹಲವಾರು ಸದಸ್ಯರು ಪಾಲ್ಗೋ೦ಡು ತಮ್ಮ ರಕ್ತದಾನ ಮಾಡಿ ’ರಕ್ತದಾನ ಶ್ರೇಷ್ಠ ದಾನ’ ಎ೦ಬುದನ್ನು ಮೆರೆದರು. ಮು೦ಜಾನೆ ಸುಮಾರು ೯:೩೦ ರಿ೦ದ ೧೨:೩೦ ರವರೆಗೆ ಈ ಕಾರ್ಯಕ್ರಮವು ಜರುಗಿತು. ಕಳೆದ ಹಲವಾರು ವರ್ಷಗಳಿ೦ದ ಕನ್ನಡ ಸ೦ಘವು ಪ್ರತಿ ವರ್ಷ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಪ್ರಶ೦ಸನೀಯ.

Write A Comment