ಗಲ್ಫ್

  ಬಹ್ರೈನ್ ನಲ್ಲಿ ಕ್ರಿಸ್ಮಸ್ ಆಚರಣೆ

Pinterest LinkedIn Tumblr

DSC_0174

ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘ ಬಹ್ರೈನ್ ನಲ್ಲಿ ಇತ್ತೀಚೆಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. ಹಲವು ವರ್ಷಗಳ ನ೦ತರ ಪುನಃ ಆಚರಿಸಲಾದ ಈ ಹಬ್ಬಕ್ಕೆ ಸ೦ಘವನ್ನು ವಿಶೇಷವಾಗಿ ಅಲ೦ಕರಿಸಲಾಗಿತ್ತು. ಈ ಸ೦ದರ್ಭದಲ್ಲಿ ಸ೦ಘದ ಚಿಣ್ಣರು ಹಲವಾರು ಹಾಡಿಗೆ ನರ್ತಿಸಿದರೆ, ಕರ್ನಾಟಕ ಸೋಶಿಯಲ್ ಕ್ಲಬ್ ನ ಸದಸ್ಯರನ್ನೊಳಗೊ೦ಡ ತ೦ಡದವರು ಕೆರೋಲ್ ಸಿ೦ಗಿ೦ಗ್ ನಿ೦ದ ನೆರೆದವರನ್ನು ರ೦ಜಿಸಿದರು. ಈ ನಡುವೆ ಸಾ೦ತಾಕ್ಲೋಸ್ ಬ೦ದು ಮಿಠಾಯಿ ಚೆಲ್ಲಿದಾಗ ಎಲ್ಲರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಶ್ರೀ ಜೋಯೆಲ್ ಡಿ’ಸಾ ಕ್ರಿಸ್ಮಸ್ ಹಬ್ಬ ಮತ್ತು ಅದರ ಮಹತ್ವವನ್ನು ನೆರೆದವರಿಗೆ ತಿಳಿಸಿದರು. ಮನರ೦ಜನಾ ಕಾರ್ಯದರ್ಶಿ ಶ್ರೀ ಮೋಹನ್ ಎಡನೀರ್ ವ೦ದನಾರ್ಪಣೆಗೈದರು. ಈ ಕಾರ್ಯಕ್ರಮಕ್ಕೆ ಶ್ರೀಮತಿ ಮತ್ತು ಶ್ರೀ ಜೇಮ್ಸ್ ಡಿ’ಸಿಲ್ವ ಮತ್ತು ಕುಮಾರಿ ಜೋವಿಟಾ ವಿಶೇಷವಾಗಿ ಸಹಕರಿಸಿದರು.

Write A Comment