ಕನ್ನಡ ವಾರ್ತೆಗಳು

ರಾಷ್ಟ್ರಪತಿ ಸ್ಕೌಟ್ಸ್ ಗೈಡ್ಸ್ ಪೂರ್ವಸಿದ್ದತಾ ಪರೀಕ್ಷಾ ತರಬೇತಿ ಶಿಬಿರ.

Pinterest LinkedIn Tumblr

Sout_gauid_photo_1

ಮಂಗಳೂರು,ಎ.25 : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಸಂಸ್ಥೆ ,ಕರ್ನಾಟಕ ಹಾಗೂ ಜಿಲ್ಲಾ ಸಂಸ್ಥೆ ದ.ಕ. ವತಿಯಿಂದ ನಡೆಯುವ ರಾಷ್ಟ್ರಪತಿ ಪೂರ್ವಸಿದ್ಧತಾ ತರಬೇತಿ ಶಿಬಿರವು 5 ದಿನಗಳ ಕಾಲ ಪಿಲಿಕುಳದ ಸ್ಕೌಟ್‌ಭವನದಲ್ಲಿ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ಕೌಟ್ ಜಿಲ್ಲಾ ಮುಖ್ಯ ಆಯುಕ್ತರಾದ ಎನ್.ಜಿ.ಮೋಹನ್ ಮಾತನಾಡಿ ಗುಣಮಟ್ಟದ ಶಿಕ್ಷಣಕ್ಕೆ ಸ್ಕೌಟ್ ಮತ್ತು ಗೈಡ್ಸ್ ಪೂರಕವಾಗಿದೆ.ಇದರಲ್ಲಿ ಗಾಂಧೀಜಿಯವರ ತತ್ವ ಮಾಡು,ಕಲಿ ಅಡಕವಾಗಿದೆ. ನಿಜಜೀವನದ ಸ್ಪಷ್ಟ ಚಿತ್ರಣವು ಈ ತರಬೇತಿಗಳಿಂದ ಮಕ್ಕಳಿಗೆ ದೊರಕುತ್ತಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಮುಂದಿನ ಜೀವನದಲ್ಲಿ ಸ್ಕೌಟ್ ತತ್ವಗಳನ್ನು ಅಳವಡಿಸುವ ಮೂಲಕ ದೇಶದ ಉನ್ನತ ಪ್ರಜೆಗಳಾಗಿ ರೂಪುಗೊಳ್ಳಬೇಕು.ಇಲ್ಲಿ ಕಲಿತ ಸ್ಕೌಟ್ ತತ್ವಗಳ ಗುಣಮಟ್ಟ ,ಆದರ್ಶ ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡು ಜೀವನದುದ್ದಕ್ಕೂ ಅಳವಡಿಸಿಕೊಂಡು ದೇಶವನ್ನು ಬೆಳಗಿಸುವ ಕಾರ್ಯವನ್ನು ಮಾಡಬೇಕು.ಸಾಮಾಜಿಕವಾಗಿ ಹೊಂದಿಕೊಂಡು ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣಬೇಕು.ಇತ್ತಿಚಿನ ದಿನಗಳಲ್ಲಿ ಬಹಳಷ್ಟು ಸಮಸ್ಯೆಗಳಿಗೆ ಮಾನವಿಯತೆಯ ಕೊರತೆಯೇ ಕಾರಣ. ಜೀವನದಲ್ಲಿ ಸ್ಕೌಟ್ಸ್ ತತ್ವಗಳನ್ನು ಅಳವಡಿಸಿಕೊಂಡು ಉತ್ತಮಗುಣ ಸಂಪನ್ನರಾಗಿ ಸ್ಕೌಟ್ ಸಂಸ್ಥೆ ,ಗುರುಗಳು ,ಮತ್ತು ತಂದೆತಾಯಿ- ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಶುಭ ಹಾರೈಸಿದರು.

Sout_gauid_photo_2 Sout_gauid_photo_3 Sout_gauid_photo_4 Sout_gauid_photo_5 Sout_gauid_photo_6 Sout_gauid_photo_7

ಸಮಾರಂಭದಲ್ಲಿ ಸ್ಕೌಟ್ ಜಿಲ್ಲಾ ಆಯುಕ್ತರಾದ ರಾಮಶೇಷ ಶೆಟ್ಟಿ, ಜಿಲ್ಲಾ ಗೈಡ್ ಆಯುಕ್ತರಾದ ಐರಿನ್ ಡಿಕುನ್ಹ,ಗೈಡ್ಸ್ ಜಿಲ್ಲಾ ಕೋಶಾಧಿಕಾರಿ ವಾಸುದೇವ ಬೋಳೂರು ,ರಾಜ್ಯ ಸಂಘಟನ ಆಯುಕ್ತರಾದ ಪ್ರಭಾಕರ ಭಟ್,ಎ.ಎಸ್.ಒ.ಸಿ.ಭಾರತಿ ಡಯಾಸ್ ಕಾರವಾರ ,ಜಿಲ್ಲಾ ಸಂಘಟನಾ ಆಯುಕ್ತೆ ಶುಭಾ ವಿಶ್ವನಾಥ್ ,ಡಿ.ಟಿ.ಸಿ.ಸುನೀತಾ ,ಶಿಬಿರದ ನಾಯಕರಾದ ಶಾಂತರಾಮ ಪ್ರಭು (ಸ್ಕೌಟ್) ವನಿತಾ ಎಮ್ ರಾವ್ (ಗೈಡ್ಸ್), ಉಪಸ್ಥಿತರಿದ್ದರುತ್ಯಾಗಂ ಹರೇಕಳ ಸ್ವಾಗತಿಸಿದರು.ನಿತಿನ್ ಉಡುಪಿ ಮತ್ತು ಗೋಪಾಲಕೃಷ್ಣ ಸಹಕರಿಸಿದರು .

ಶಿಬಿರದ ಉಸ್ತುವಾರಿ ವಹಿಸಿದ ದ.ಕ.ಜಿಲ್ಲಾ ಸ್ಕೌಟ್ಸ್ ಸಂಘಟಕರಾದ ಭರತ್‌ರಾಜ್ ಕೆ. ವಂದನಾರ್ಪಣೆಗೈದರು. ಪ್ರದೀಪ್ ಕಾರ್ಯಕ್ರಮ ನಿರ್ವಹಿಸಿದರು.ಶಿಬಿರಾರ್ಥಿಗಳಾದ ಸ್ವಸ್ತಿಕ್ ಮತ್ತು ವೈಷ್ಣವಿ‌ಅನುಭವಗಳನ್ನು ಹಂಚಿಕೊಂಡರು.

ಶಿಬಿರದಲ್ಲಿ ರಾಜ್ಯದ 5 ಜಿಲ್ಲೆಗಳಿಂದ ದ.ಕ.ಉಡುಪಿ,ಶಿರಸಿ,ಕಾರವಾರ ,ಕೊಡಗುಗಳಿಂದ ಒಟ್ಟು 99 ಸ್ಕೌಟ್ಸ್ ,131 ಗೈಡ್ಸ್ ಹಾಗು 38 ಸ್ಕೌಟರ್‍ಸ್ ‘ ಗೈಡರ್‍ಸ್ ‘ ಭಾಗವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಎಸ್.ಕೆ.ಪ್ರಭಾ ಎಲ್‌ಟಿ(ಜಿ) ರಾಜ್ಯ ಜೊತೆ ಕಾರ್ಯದರ್ಶಿ ನೆರವೇರಿಸಿ ,ಅಧ್ಯಕ್ಷತೆಯನ್ನು ಜಿಲ್ಲಾ ಖಜಾಂಚಿ ವಾಸುದೇವ ಬೊಳೂರು ನಿರ್ವಹಿಸಿದ್ದರು.ಜಿಲ್ಲಾ ಕಾರ್ಯದರ್ಶಿ ಸಂತೋಷ್‌ಕುಮಾರ್ ಕದ್ರಿ ಉಪಸ್ಥಿತರಿದ್ದರು.

2015-16 ನೇ ಸಾಲಿನಲ್ಲಿ ರಾಜ್ಯಪುರಸ್ಕಾರ ಪಡೆದ ಸ್ಕೌಟ್,ಗೈಡ್‌ಗಳ ಪ್ರಶಸ್ತಿಪತ್ರ ವಿತರಿಸಲಾಯಿತು. ಗುರುಮೂರ್ತಿ ನಾಯ್‌ಕಾಪು ವಿಶೇಷ ತರಬೇತಿಯನ್ನು ನೀಡಿದರು.

Write A Comment