ಕನ್ನಡ ವಾರ್ತೆಗಳು

ನೇತ್ರಾವತಿ ನದಿಯಲ್ಲಿ ದೆಹಲಿ ಇಬ್ಬರು ಯುವಕರು ನೀರುಪಾಲು.

Pinterest LinkedIn Tumblr

netravathi_drwn_pic

ಬಂಟ್ವಾಳ,ಎ.25: ಬಸ್ತಿಪಡ್ಡು ನೇತ್ರಾವತಿ ನದಿಯಲ್ಲಿ ಎಂಟು ಮಂದಿ ಸ್ನಾನಕ್ಕೆ ತೆರಳಿದ್ದು, ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವಪ್ಪಿದ್ದ ಘಟನೆ ರವಿವಾರ ನಡೆದಿದೆ.

ಮೃತಪಟ್ಟವರನ್ನು ಬಂಟ್ಚಾಳ ಫರ್ನೀಚರ್ ಅಂಗಡಿ ಕಾರ್ಮಿಕರಾದ ದೆಹಲಿ ಮೂಲದ ಅನಸ್(18) ಮತ್ತು ಅಸ್ಮಾನಿ(20) ಎಂದು ಗುರುತಿಸಲಾಗಿದೆ.

ಇತರ ಆರು ಮಂದಿ ಸುರಕ್ಷಿತರಾಗಿದ್ದಾರೆ. ಸ್ಥಳೀಯರು ಯುವಕರ ಬೊಬ್ಬೆ ಕೇಳಿ ರಕ್ಷಣೆಗೆ ಧಾವಿಸಿದರೂ ಇಬ್ಬರು ಯುವಕರ ಜೀವ ಉಳಿಸಲಾಗಿಲ್ಲ.

ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment