ಕರ್ನಾಟಕ

ಬಹುಭಾಷಾ ನಟ ರಘು ಮುಖರ್ಜಿಯನ್ನು ಕೈ ಹಿಡಿದ ಅನುಪ್ರಭಾಕರ್

Pinterest LinkedIn Tumblr

raghu-mukherjee-anu-prabhakar

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಬಹುಭಾಷಾ ನಟ ರಘು ಮುಖರ್ಜಿ ಅವರನ್ನು ಇಂದು ವರಿಸಿದ್ದಾರೆ. ಯಲಹಂಕದಲ್ಲಿರುವ ರಘು ಮುಖರ್ಜಿಯವರ ಸ್ನೇಹಿತರ ಫಾರ್ಮ್ ಹೌಸ್‍ನಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಾಹಿತಿ ಖಚಿತಪಡಿಸಿದ ಅನುಪ್ರಭಾಕರ್, ಕೇವಲ ಆಪ್ತರು ಹಾಗೂ ಸಂಬಂಧಿಕರಿಷ್ಟೇ ಆಹ್ವಾನ ನೀಡಿದ್ದೇನೆ ಅಂತಾ ಪ್ರತಿಕ್ರಿಯಿಸಿದ್ದಾರೆ

ಕೆಲವು ವರ್ಷಗಳ ಹಿಂದೆ ಹಿರಿಯ ನಟಿ ಜಯಂತಿ ಪುತ್ರ ಕೃಷ್ಣಕುಮಾರ್ ಜೊತೆಗಿನ ಸಂಬಂಧ ಮುರಿದು ಬಿದ್ದು, ಅವರಿಂದ ಅನು ಪ್ರಭಾಕರ್ ದೂರವಾಗಿದ್ದರೆ, ನಟ ರಘು ಮುಖರ್ಜಿ ಕೂಡ ತಮ್ಮ ಹಿಂದಿನ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ರು.

ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಅವರ ಪುತ್ರಿಯಾದ 35 ವರ್ಷದ ಅನು ಪ್ರಭಾಕರ್ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಾಯಕಿಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಹೃದಯ ಹೃದಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನು ಈವರೆಗೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ANU

2002ರಲ್ಲಿ ಮಿಸ್ಟರ್ ಇಂಡಿಯಾ ಪಟ್ಟವನ್ನು ಅಲಂಕರಿಸಿದ್ದ ನಟ ರಘು ಮುಖರ್ಜಿ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ರು. ಇದಲ್ಲದೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿದ್ದ ರಘು ಮುಖರ್ಜಿ ಇತ್ತೀಚೆಗೆ ಬಿಡುಗಡೆಯಾದ ಜೆಸ್ಸಿ ಚಿತ್ರದಲ್ಲೂ ಅಭಿನಯಿಸಿದ್ದಾರೆ.

Write A Comment