ಕನ್ನಡ ವಾರ್ತೆಗಳು

ಹಿರಿಯಡ್ಕ: ಚಾಕು ತೋರಿಸಿ ಮಹಿಳೆ ಚೈನ್ ಕಸಿದು ಪರಾರಿ

Pinterest LinkedIn Tumblr

nagpurtoday-chain-snatching1

ಉಡುಪಿ: ಕೆಲಸ ಮುಗಿಸಿ ಮನೆಯತ್ತ ಸಾಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಯುವಕರಿಬ್ಬರು ಮಹಿಳೆಯನ್ನು ಅಡ್ಡಗಟ್ಟಿ ಬೆದರಿಸಿ ಚಿನ್ನದ ಚೈನ್ ಕಸಿದು ಪರಾರಿಯಾದ ಘಟನೆ ಪೆರ್ಡೂರು ಗ್ರಾಮದ ಅಲಂಗಾರು ಎಂಬಲ್ಲಿ ನಡೆದಿದೆ.

ಬುಧವಾರ ಸಂಜೆ ವಿನೋದಾ ಪೂಜಾರ್ತಿ ಎನ್ನುವವರು ಮಣಿಪಾಲದ ಕೆಎಂಸಿಯಲ್ಲಿ ಕೆಲಸ ಪೂರೈಸಿ ಮನೆಗೆ ನಡೆದುಕೊಂಡು ಹೋಗುವಾಗ ಪೆರ್ಡೂರು ಗ್ರಾಮದ ಅಲಂಗಾರು ರಸ್ತೆಯ ಮದಗದ ಬಳಿ ಎದುರು ಕಡೆಯಿಂದ ಕಪ್ಪು ಬಣ್ಣ ಬೈಕಿನಲ್ಲಿ ಬಂದ ಹೆಲ್ಮೆಟ್‌ ಧರಿಸಿದ ಯುವಕರು ವಿನೋದಾ ಪೂಜಾರ್ತಿ ಯವರಲ್ಲಿ ಪೆರ್ಡೂರಿಗೆ ಹೋಗುವ ದಾರಿಯ ಬಗ್ಗೆ ಕೇಳಿದ್ದು ಅವರು ಇದೇ ದಾರಿ ಎಂದು ಹೇಳಿದಾಗ ಆ ತರುಣರು ಬೈಕ್‌ನ್ನು ಪುನ: ಹಿಂದೆ ತಿರುಗಿಸಿ ವಿನೋದಾ ಪೂಜಾರ್ತಿ ಅವರ ತೀರಾ ಸಮೀಪಕ್ಕೆ ತಂದು ಚಾಲೂ ಸ್ಥಿತಿಯಲ್ಲಿ ನಿಲ್ಲಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಚೈನನ್ನು ಕೊಡುವಂತೆ ತುಳು ಭಾಷೆಯಲ್ಲಿ ಕೇಳಿದ್ದು ಅದು ನಕಲಿ ಎಂದು ಹೇಳಿದರೂ ಅದನ್ನು ಕೊಡುವಂತೆ ಒತ್ತಾಯಿಸಿದ್ದು ಈ ವೇಳೆ ವಿನೋದಾ ಪೂಜಾರ್ತಿ ಯವರು ತಪ್ಪಿಸಿಕೊಳ್ಳಲು ಯತ್ನಿಸುವಾಗ ಹಿಂಬದಿ ಸವಾರ ತನ್ನಲ್ಲಿದ್ದ ಚೂರಿಯನ್ನು ವಿನೋದಾ ಪೂಜಾರ್ತಿ ಹೊಟ್ಟೆಯ ಸಮೀಪ ತಂದು ಹಿಡಿದಿದ್ದು ಈ ವೇಳೆ ಬೈಕ್‌ ಸವಾರನು ವಿನೋದಾ ಅವರ ಕುತ್ತಿಗೆಯಲ್ಲಿದ್ದ ಎರಡೂವರೆ ಪವನ್‌ ತೂಕದ ಚಿನ್ನದ ಚೈನನ್ನು ಬಲಾತ್ಕಾರವಾಗಿ ಎಳೆದು ಅಪಹರಿಸಿ ಬೈಕ್‌ ಚಲಾಯಿಸಿ ಪರಾರಿಯಾಗಿದ್ದಾರೆ.

ಕಳವಾದ ಚಿನ್ನದ ಸರದ ಮೌಲ್ಯ 45,000/- ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

(ಸಾಂದರ್ಭಿಕ ಚಿತ್ರ)

Write A Comment