ಕನ್ನಡ ವಾರ್ತೆಗಳು

ಮಣಿಪಾಲ: ಸಹೋದರಿಯರಿಬ್ಬರು ಮನೆಯಿಂದ ನಾಪತ್ತೆ

Pinterest LinkedIn Tumblr

ಉಡುಪಿ: ಮನೆಯಿಂದ ಸಹೋದರಿಯರಿಬ್ಬರು ನಾಪತ್ತೆಯಾದ ಘಟನೆ ಉಡುಪಿ ದೊಡ್ಡಣಗುಡ್ಡೆಯ ಶಿವಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

Manipal_Sisters_Missing

ಪೂಜಾ (20) ಹಾಗೂ ಹೆಚ್.ವೈ ಸೌಜನ್ಯ (16) ಕಾಣೆಯಾದ ಸಹೋದರಿಯರು.

ಶಿವಳ್ಳಿ ನಿವಾಸಿ ಯೋಗೇಶ್ ಆಚಾರ್ಯ ಎನ್ನುವವರ ಪುತ್ರಿಯರಾದ ಇವರು ಸಂಜೆ ವೇಳೆ ಮನೆಯಲ್ಲಿಯೇ ಇದ್ದು ಯೋಗೇಶ್ ಆಚಾರ್ಯ ದಂಪತಿಗಳು ಕೆಲಸ ನಿಮಿತ್ತ ಪೇಟೆಗೆ ತೆರಳಿದ್ದರು. ರಾತ್ರಿ ೭ ಗಂಟೆ ಸುಮಾರಿಗೆ ಯೋಗೇಶ್ ಅವರ ಪುತ್ರ ಮನೆಗೆ ವಾಪಾಸ್ಸಾಗುವಾಗ ಪೂಜ ಹಗೂ ಸೌಜನ್ಯ ಮನೆಯಲ್ಲಿರಲಿಲ್ಲ. ಸತತ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Write A Comment