ರಾಷ್ಟ್ರೀಯ

ಸಿದ್ಧಗೊಂಡ ಮೋದಿ ಮೇಣದ ಪ್ರತಿಮೆ

Pinterest LinkedIn Tumblr

modi-wax-figure

ನವದೆಹಲಿ: ಪ್ರತಿಷ್ಠಿತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಮೇಡಮ್‌ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದ ಸಿಂಗಪುರ, ಹಾಂಕಾಂಗ್‌ ಮತ್ತು ಬ್ಯಾಂಕಾಕ್‌ ಶಾಖೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯೂ ಸೇರ್ಪಡೆಗೊಳ್ಳಲಿದೆ.

ಇಲ್ಲಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಪ್ರಧಾನಿ ನಿವಾಸದಲ್ಲಿ ತಮ್ಮ ಮೇಣದ ಪ್ರತಿಮೆಯ ಜತೆ ಮೋದಿ ನಿಂತು ಫೋಟೊ ತೆಗೆಸಿಕೊಂಡರು. ಬಿಳಿ ಕುರ್ತಾ–ಪೈಜಾಮಾದ ಮೇಲೆ ಕೆನೆಬಣ್ಣದ ಮೇಲಂಗಿ ಧರಿಸಿರುವ ಮೋದಿ ಅವರ ಪ್ರತಿಮೆ ಎರಡೂ ಕೈ ಮುಗಿದು ‘ನಮಸ್ಕಾರ’ ಹೇಳುವ ಭಂಗಿಯಲ್ಲಿದೆ.

ಲಂಡನ್‌ನಲ್ಲಿರುವ ಮೇಡಮ್‌ ಟುಸ್ಸಾಡ್‌್ಸ ವಸ್ತು ಸಂಗ್ರಹಾಲಯದ ಕೇಂದ್ರ ಸ್ಥಾನದಲ್ಲಿ ಈ ಪ್ರತಿಮೆ ಏಪ್ರಿಲ್‌ 28ರಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ₹1.43 ಕೋಟಿ ವೆಚ್ಚದ ಈ ಪ್ರತಿಮೆ ನಿರ್ಮಾಣಕ್ಕೆ ನಾಲ್ಕು ತಿಂಗಳ ಕಾಲ ಕಲಾವಿದರ ತಂಡ ಶ್ರಮಿಸಿದೆ.

Write A Comment