ಕನ್ನಡ ವಾರ್ತೆಗಳು

ಉಡುಪಿ: ಆಲ್ ರೌಂಡರ್ ಆಗಿರುವ ಖತರ್ನಾಕ್ ಕಳ್ಳನ ಬಂಧನ

Pinterest LinkedIn Tumblr

ಉಡುಪಿ: ಅಂತಾರಾಜ್ಯ ಕುಖ್ಯಾತ ಕಳ್ಳ ರಾಜಸ್ಥಾನ ಮೂಲಕ ನಾಥೋರಾಮ್ (28) ನನ್ನು ಉಡುಪಿ ಇನ್ಸ್‌ಪೆಕ್ಟರ್ ಶ್ರೀಕಾಂತ್ ಕೆ. ನೇತೃತ್ವದ ತಂಡ ಬಂಧಿಸಿದೆ.

Udupi_Robberer_Arest

ದರೋಡೆಗೆ ಸಂಚು ರೂಪಿಸುವುದು, ವಾಹನಗಳ ಕಳವು, ಅಂಗಡಿಗಳಿಗೆ ನುಗ್ಗಿ ಮೊಬೈಲ್, ಎಲೆಕ್ಟ್ರಾನಿಕ್ಸ್ ಸೊತ್ತುಗಳ ಕಳವು ನಡೆಸುತ್ತಿದ್ದ ನಾಥೋರಾಮ್ ಮೇಲೆ ಈವರೆಗೆ ಆಂಧ್ರಪ್ರದೇಶ, ಹೈದರಾಬಾದ್, ಹುಬ್ಬಳ್ಳಿ ಸಹಿತ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 3, ಕಾರ್ಕಳ 1, ಉಡುಪಿ ನಗರ 2 ಪ್ರಕರಣ ಪತ್ತೆಯಾಗಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಸಾಧ್ಯತೆಗಳಿವೆ.

ಆತ ಕಳವುಗೈಯಲು ಬಳಸುತ್ತಿದ್ದ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Write A Comment