ಕನ್ನಡ ವಾರ್ತೆಗಳು

ಉಳ್ಳಾಲ : ಕಡಲ ಕಿನಾರೆಯಲ್ಲಿ ತಿಮಿಂಗಿಲದ ಕಳೇಬರ ಪತ್ತೆ.

Pinterest LinkedIn Tumblr

thimingila_ullala_found

ಉಳ್ಳಾಲ :  ಸೋಮೇಶ್ವರ ಕಡಲಿನಲ್ಲಿ ತಿಮಿಂಗಿಲದ ಕಳೇಬರ ಇಂದು ಮುಂಜಾನೆ ಪತ್ತೆಯಾಗಿದ್ದು, ಮೀನುಗಾರರು ಅದನ್ನು ದಡಕ್ಕೆ ಎಳೆದು ತರಲು ಪ್ರಯತ್ನಪಡುತ್ತಿದ್ದಾರೆ. ಭಾರೀ ಗಾತ್ರದ ತಿಮಿಂಗಿಲ ಕೆಲದಿನಗಳ ಹಿಂದೆ ಸತ್ತಿರಬೇಕೆಂದು ಶಂಕಿಸಲಾಗಿದೆ.

ಹಡಗಿನ ತಳಭಾಗದಲ್ಲಿರುವ ಬ್ಲೇಡ್ ತಾಗಿ ತಿಮಿಂಗಿಲಗಳು ಸಾಯುತ್ತವೆ. ಹಾಗೆ ಸತ್ತ ತಿಮಿಂಗಿಲ ದಡಕ್ಕೆ ಬಂದು ಬೀಳುವುದು ಸಾಮಾನ್ಯ. ಆದರೆ ಈ ತಿಮಿಂಗಿಲ ಭಾರೀ ಗಾತ್ರದ್ದಾಗಿದ್ದು, ದಡದಿಂದ ಸುಮಾರು ದೂರದಲ್ಲಿ ಕಾಣಿಸುತ್ತಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

Write A Comment