ರಾಷ್ಟ್ರೀಯ

ನಿದ್ದೆಯಿಂದ ಎದ್ದು ಬರುತ್ತಾಳೆ ಎಂದು ಸತ್ತ ಮಗಳನ್ನು ಮನೆಯಲ್ಲಿಟ್ಟುಕೊಂಡ ಮಹಿಳೆ !

Pinterest LinkedIn Tumblr

dead-body

ಕೋಲ್ಕತ್ತಾ: ಮನುಷ್ಯ ಅಸ್ಥಿಪಂಜರದ ಜತೆ ವಾಸಿಸುತ್ತಿದ್ದ ವಿಷಯ ಕಳೆದ ವರ್ಷ ಭಾರೀ ಸುದ್ದಿ ಮಾಡಿದಂತೆ ಇಲ್ಲೊಬ್ಬ ಮಹಿಳೆ ತನ್ನ ಮರಣ ಹೊಂದಿದ ಮಗಳು ನಿದ್ದೆಯಿಂದ ಎದ್ದು ಬರುತ್ತಾಳೆ ಎಂದು ಮನೆಯಲ್ಲೇ ಇಟ್ಟುಕೊಂಡು ಆಗಾಗ ಆಕೆಯನ್ನು ಹಿಡಿದುಕೊಂಡಿದ್ದ ವಿಷಯ ಬೆಳಕಿಗೆ ಬಂದಿದೆ.

ಕೋಲ್ಕತ್ತಾದ ಜಾದವ್ ಪುರ ಪ್ರದೇಶದ ರೀಜೆಂಟ್ ಕಾಲೊನಿಯಲ್ಲಿನ ಮನೆಯೊಂದರಿಂದ 22 ವರ್ಷದ ಸಂಗ್ ಬ್ರಿತಾ ಚಕ್ರವರ್ತಿ ಎಂಬ ಯುವತಿಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೆರೆಹೊರೆಯವರು ಮನೆಯಿಂದ ದುರ್ನಾತ ಹೊರಸೂಸುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರಿಗೆ ಈ ವಿಷಯ ಬೆಳಕಿಗೆ ಬಂದಿದೆ.

ಸಂಗಬ್ರಿತಾಳ ತಾಯಿ ಸುಜಾತ ಚಕ್ರವರ್ತಿ ತನ್ನ ಮಗಳ ದೇಹವನ್ನು ಹಿಡಿದುಕೊಂಡು, ಆಕೆ ಮಲಗಿದ್ದು ಸ್ವಲ್ಪ ಹೊತ್ತು ಕಳೆದ ಮೇಲೆ ಎದ್ದೇಳುತ್ತಾಳೆ ಎಂದು ಹೇಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ್ದು, ಸತ್ತು 48ರಿಂದ 72 ಗಂಟೆಗಳಾಗಿರಬಹುದು ಎಂದು ಮರಣೋತ್ತರ ವರದಿ ಹೇಳಿದೆ.” ಯುವತಿಯ ತಾಯಿ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ನಂಬಲು ಸಿದ್ದರಿಲ್ಲ. ಆಕೆ ಮೃತದೇಹವನ್ನು ಕೊಂಡೊಯ್ಯಲು ಬಿಡಲಿಲ್ಲ. ತಾಯಿ ಮಾನಸಿಕವಾಗಿ ಸದೃಢಳಲ್ಲದಿರಬಹುದು. ಮೃತದೇಹ ಕೊಳೆತಿರುವುದರಿಂದ ನಮಗೆ ಆಕೆಯ ವಯಸ್ಸನ್ನು ಪ್ರಾರಂಭದಲ್ಲಿ ಕಂಡುಹಿಡಿಯಲು ಕಷ್ಟವಾಯಿತು. ತಾಯಿಯ ಬಳಿ ಮಾತನಾಡಿದ ನಂತರ ಅವಳ ನಿಜವಾದ ವಯಸ್ಸು ತಿಳಿಯಿತು ಎನ್ನುತ್ತಾರೆ ಪೊಲೀಸರು.

ಸಂಗ್ ಬ್ರಿತಾಳ ತಂದೆ ಕೆಲ ವರ್ಷಗಳ ಹಿಂದೆ ಕುಟುಂಬ ಬಿಟ್ಟು ಹೋಗಿದ್ದು,ತಾಯಿ-ಮಗಳಿಬ್ಬರೇ ವಾಸಿಸುತ್ತಿದ್ದರು. ಸಂಗ್ ಬ್ರಿತಾಳ ಹಿರಿಯ ಸೋದರಿ ಹಲವು ವರ್ಷಗಳ ಹಿಂದೆ ಒಬ್ಬನ ಜೊತೆ ಮದುವೆಯಾಗಿ ತಾಯಿಯ ಜೊತೆ ಸಂಪರ್ಕ ಕಳೆದುಕೊಂಡಿದ್ದಾಳೆ. ಆಕೆಯ ಸಂಪರ್ಕವೂ ಕೂಡ ಈಗ ಸಿಗುತ್ತಿಲ್ಲ. ಸಂಗ್ ಬ್ರಿತಾ ವಿದ್ಯಾರ್ಥಿನಿಯೇ ಅಥವಾ ಕೆಲಸಕ್ಕೆ ಹೋಗುತ್ತಿದ್ದಳೇ ಎಂಬ ಬಗ್ಗೆ ಕೂಡ ತಾಯಿ ಸರಿಯಾದ ಹೇಳಿಕೆ ನೀಡುತ್ತಿಲ್ಲ ಎಂದು ಪೊಲೀಸರು ಹೇಳುತ್ತಾರೆ.

Write A Comment