ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ ಮೂರ್ನಾಲ್ಕು ಗಂಟೆ ಸಂಪೂರ್ಣ ಟ್ರಾಫಿಕ್ ಜಾಮ್: ವಾಹನ ಸವಾರರಿಗೆ ಫುಲ್ ಫ್ರಾಬ್ಲಂ

Pinterest LinkedIn Tumblr

ವರದಿ,ಚಿತ್ರ- ಯೋಗೀಶ್ ಕುಂಭಾಸಿ

ಕುಂದಾಪುರ: ಬುಧವಾರ ಮಧ್ಯಾಹ್ನದ ಸುಮಾರಿಗೆ ನಗರ ಹಾಗೂ ಹೊರವಲಯದಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ಸತತ ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆ ಗಂಟೆಗಟ್ಟಲೇ ರಸ್ತೆಯಲ್ಲಿಯೇ ವಾಹನ ಸವಾರರ ಪರದಾಟ ಅನುಭವಿಸಿದರು.

ಬುಧವಾರ ಸುಮಾರು 10.30ರ ಸುಮಾರಿಗೆ ಕುಂದಾಪುರದ ಬಸ್ರೂರು ಮೂರುಕೈ ಸಮೀಪ ಟ್ಯಾಂಕರ್ ವಾಹನವೊಂದು ಹೆದ್ದಾರಿಗೆ ಅಡ್ಡವಾಗಿ ನಿಂತ ಪರಿಣಾಮ ಟ್ರಾಫಿಕ್ ಜಾಮ್ ಆರಂಭಗೊಂಡಿದೆ ಎಂದು ಸ್ಥಳಿಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು ಆ ಹೊತ್ತಿಗೆ ಆರಂಭವಾದ ಸಂಚಾರ ದಟ್ಟಣೆಯಿಂದಗಿ ಬಸ್ರೂರು ಮೂರುಕೈ ಪ್ರದೇಶವನ್ನು ಕೇಂದ್ರವಾಗಿಸಿಕೊಂಡು ಕಿಲೋಮೀಟರುಗಟ್ಟಲೇ ಟ್ರಾಫಿಕ್ ಜಾಮ್ ನಿರ್ಮಾಣವಾಗಿತ್ತು. ಅಲ್ಲದೇ ಕುಂದಾಪುರ ನಗರದ ಪ್ರಮುಖ ರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದ್ದವು.

Kundapura_Traffic_Jam (13) Kundapura_Traffic_Jam (11) Kundapura_Traffic_Jam (8) Kundapura_Traffic_Jam (2) Kundapura_Traffic_Jam (17) Kundapura_Traffic_Jam (15) Kundapura_Traffic_Jam (16) Kundapura_Traffic_Jam (10) Kundapura_Traffic_Jam (12) Kundapura_Traffic_Jam (14) Kundapura_Traffic_Jam (9) Kundapura_Traffic_Jam (3) Kundapura_Traffic_Jam (4) Kundapura_Traffic_Jam (7) Kundapura_Traffic_Jam (6) Kundapura_Traffic_Jam (5) Kundapura_Traffic_Jam (1)

ಶುಭಸಮಾರಂಭಕ್ಕೆ ತೆರಳುವವರಿಗೆ ಗೋಳು
ಬುಧವಾರ ತಾಲೂಕಿನಾದ್ಯಂತ ಹಲವು ಕಡೆಗಳಲ್ಲಿ ಮದುವೆ ಸೇರಿದಂತೆ ಇತರೇ ಶುಭಸಮಾರಂಭಗಳು ಹೆಚ್ಚಾಗಿದ್ದವು. ಮಧ್ಯಾಹ್ನದ ಸುಮಾರಿಗೆ ಶುಭ ಸಮಾರಂಭಗಳಿಗೆ ತೆರಳಬೇಕಾದ ಬಸ್ಸು, ಟೆಂಫೋ ಟ್ರಾವೆಲ್ಲರ್, ಕಾರು ಸೇರಿದಂತೆ ಸಮಾರಂಭಕ್ಕೆ ತೆರಳುವ ದ್ವಿಚಕ್ರ ವಾಹಗಳು ಗಂಟೆಗಟ್ಟಲೇ ಹೆದ್ದಾರಿ ಮೇಲೆಯೇ ನಿಂತು ಕಾಯಬೇಕಾದ ಅನಿವಾರ್ಯ ಪರಿಸ್ಥಿತಿಯಿತ್ತು.

ಸತತ ಮೂರು ಗಂಟೆ ವಾಹನ ಸಂಚಾರ ಅಸ್ತವ್ಯಸ್ಥ
ಇನ್ನು ಬಸ್ರೂರುಮೂರುಕೈ ಪ್ರದೇಶ ಹೆಚ್ಚಾಗಿ ವಾಹನ ದಟ್ಟಣೆ ಇರುವ ಪ್ರದೇಶವಾಗಿದ್ದು ರಾಜ್ಯಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಕೂಡುವ ಭಾಗವಾದ ಕಾರಣ ಬೆಳಿಗ್ಗೆನಿಂದ ಆರಂಭಗೊಂಡು ರಾತ್ರಿಯವರೆಗೂ ಇಲ್ಲಿ ಟ್ರಾಫಿಕ್ ಸಮಸ್ಯೆ ಇರುತ್ತದೆ. ಈ ಭಾಗದಲ್ಲಿ ಚತುಷ್ಪತ ಕಾಮಗಾರಿಯನ್ನು ಅರೆಬರೆ ನಡೆಸಿದ ಪರಿಣಾಮ ರಸ್ತೆಯೂ ಕಿರಿದಾಗಿದ್ದು ವಾಹನದಟ್ಟಣೆ ಇನ್ನಷ್ಟು ಅಧಿಕವಾಗಿದೆ. ಕೂಡಲೇ ಈ ಭಾಗದ ಕಾಮಗಾರಿ ಪರಿಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದೇ ಮೊದಲ ಬಾರೀ ಸುದೀರ್ಘ ಕಾಲ ಸಂಚಾರ ಅಸ್ಥವ್ಯಸ್ಥ..
ಇನ್ನು ಕುಂದಾಪುರ ತಾಲೂಕಿನಲ್ಲಿ ಮೂರ್ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು ಇದು ಮೊದಲನೇ ಬಾರಿ. ಒಂದೂವರೆ ತಿಂಗಳಿನ ಹಿಂದೆ ಇದೇ ಭಾಗದಲ್ಲಿ ಕಾಮಗಾರಿ ಸಲುವಾಗಿ ಮರವೊಂದನ್ನು ಕಟಾವು ಮಾಡಿದ್ದಾಗ ಸುಮಾರು ಒಂದು ತಾಸುಗಳ ಕಾಲ ಸಂಚಾರ ಅಸ್ಥವ್ಯಸ್ಥವಾಗಿತ್ತು. ಇನ್ನು ಈ ಭಾಗದಲ್ಲಿ ಟ್ರಾಫಿಕ್ ಪೊಲೀಸರನು ನಿಯೋಜಿಸಬೇಕೆಂದು ಸ್ಥಳಿಯರು ಹಲವು ಬಾರೀ ಮನವಿ ನೀಡಿದ್ದರೂ ಕೂಡ ಕೆಲವೊಂದು ದಿನಗಳಲ್ಲಿ ಇಲ್ಲಿ ಪೊಲೀ‌ಅರನ್ನು ನಿಯೋಜಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇಂದು ಕೂಡ ಟ್ರಾಫಿಕ್ ಜಾಮ್ ಉಂತಾಗುವ ಸಮಯದಲ್ಲಿ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೊಲೀಸರ ಹರಸಾಹಸ
ಇನ್ನು ಟ್ರಾಫಿಕ್ ಅಸ್ತವ್ಯಸ್ಥಗೊಂಡ ಹಿನ್ನೆಲೆ ಸ್ಥಳಕ್ಕಾಗಮಿಸಿ ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸಪಟ್ಟರು. ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ., ಕುಂದಾಪುರ ಕ್ರೈಮ್ ವಿಭಾಗದ ಎಸ್.ಐ. ದೇವರಾಜ್ ಹಾಗೂ ಟ್ರಾಫಿಕ್ ಠಾಣೆ ಸಿಬ್ಬಂದಿಗಳು ಸತತ ಶ್ರಮವಹಿಸಿ ಟ್ರಾಫಿಕ್ ಜಾಮ್ ಸರಿಪಡಿಸಿದರು.

Write A Comment