ಅಂತರಾಷ್ಟ್ರೀಯ

ಭಾರತದ ಪಾದ್ರಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದೂರು ದಾಖಲಿಸಿದ ಅಮೆರಿಕದ ಮಹಿಳೆ

Pinterest LinkedIn Tumblr

Raped-2

ವಾಷಿಂಗ್ಟನ್: ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಹಿಳೆ ಆಟಾರ್ನಿ ಜೆಫ್ ಆ್ಯಂಡರ್ಸನ್ ಭಾರತ ಮೂಲದ ಪಾದ್ರಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಭಾರತ ಮೂಲದ ಬಿಷಫ್ ಅಮಲ್ ರಾಜ್ ಅವರ ವಿರುದ್ಧ ಆಟಾರ್ನಿ ಜೆಫ್ ಆ್ಯಂಡರ್ಸನ್ ದೂರು ದಾಖಲಿಸಿದ್ದಾರೆ.

ಭಾರತ ಮೂಲದ ಜೋಸೆಫ್ ಜಯಪಾಲ್ ಅವರು ಅಮೆರಿಕದ ಮೈಲಾಪೋರ್ ನ ಚರ್ಚನಲ್ಲಿ 2004ರಿಂದ 2005ರವೆರೆಗೆ ಪಾದ್ರಿಯಾಗಿದ್ದರು. ಈ ವೇಳೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇಂತಹವರನ್ನು ಭಾರತ ಮೂಲದ ಬಿಷಫ್ ಅಮಲ್ ರಾಜ್ ಅವರು ಪಾದ್ರಿಯಾಗಿ ಮರು ನೇಮಕ ಮಾಡಿದ್ದಾರೆ.

ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಅಮಾನತನ್ನು ಹಿಂಪಡೆದು ಮತ್ತೆ ಅವರನ್ನು ಮರುನೇಮಕ ಮಾಡಿದ್ದಾರೆ. ಈ ವಿಷಯ ತಿಳಿದು ನನಗೆ ತುಂಬಾ ಬೇಸರವಾಯಿತು. ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಪಾದ್ರಿ ಸ್ಥಾನಕ್ಕೆ ಅರ್ಹನಲ್ಲ. ಆತನನ್ನು ನೇಮಕ ಮಾಡಿದರೆ, ಭಾರತದಲ್ಲಿರುವ ಅನೇಕ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ. ಹಾಗಾಗಿ, ಮರುನೇಮಕ ಮಾಡಿದ ಬಿಷಪ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಮೆರಿಕದ ಮಹಿಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2012ರಲ್ಲಿ ಭಾರತದಲ್ಲಿ ಜಯಪಾಲ್ ಅವರನ್ನು ಬಂಧಿಸಿ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು. ಆರೋಪ ಸಾಬೀತಾಗಿದ್ದರಿಂದ ಜಯಪಾಲ್ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆಯ ನಂತರ ಜಯಪಾಲ್ ಭಾರತಕ್ಕೆ ಮರಳಿದ್ದರು. ಜಯಪಾಲ್ ವಿರುದ್ಧದ ನಿಷೇಧವನ್ನು 2016ರ ಫೆಬ್ರವರಿಯಲ್ಲಿ ಬಿಷಪ್ ತೆರವು ಮಾಡಿದ್ದರು.

Write A Comment