ಕನ್ನಡ ವಾರ್ತೆಗಳು

ಅಂಧ ಅಂಗವಿಕಲನ ಮೇಲೆ ದೌರ್ಜನ್ಯ: ಸೂಕ್ತಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಹುಟ್ಟು ಅಂಧ ಅಂಗವಿಕಲನ ಮೇಲೆ ದೌರ್ಜನ್ಯ ಮಾಡಿದ ಅಮಾಸೆಬೈಲು ಗ್ರಾ.ಪಂ. ಪಿಡಿ‌ಒ ಹಾಗೂ ಅಧ್ಯಕ್ಷೆ, ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕುಂದಾಪುರ ತಾಲೂಕು ಪಂಚಾಯತ್ ಎದುರು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯವರು ಪ್ರತಿಭಟನೆ ನಡೆಸಿದರು.

Kundapura_Handicaped_Protest (4) Kundapura_Handicaped_Protest (3) Kundapura_Handicaped_Protest (2) Kundapura_Handicaped_Protest (1) Kundapura_Handicaped_Protest (5)

ಅಂಧನ ಮೇಲೆ ಹಲ್ಲೆ…..
ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಅಮಾಸೆಬೈಲು ಗ್ರಾಮ ಸಮಿತಿಯ ಅಧ್ಯಕ್ಷ, ಹುಟ್ಟು ಅಂಧ ಅಂಗವಿಕಲ ಗಣಪತಿ ಪೂಜಾರಿ ಅವರು ಮಾರ್ಚ್ ೩೧ರಂದು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿದಾಗ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಸದಸ್ಯರಾದ ಗಣೇಶ್ ಶೆಟ್ಟಿ, ರಾಮಣ್ಣ ಹೆಗ್ಡೆ, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ ದೇವಾಡಿಗ ಮೊದಲಾದವರು ಒಗ್ಗೂಡಿ ಗಣಪತಿ ಪೂಜಾರಿ ಅವರನ್ನು ಹೀನಾಯವಾಗಿ ಬೈದು, ನಿಂದಿಸಿ ಹಲ್ಲೆ ನಡೆಸಿದ್ದಲ್ಲದೇ ಜೀವಬೆದರಿಕೆಯನ್ನು ಹಾಕಿದ್ದಾರೆಂದು ಆರೋಪಿಸಲಾಗಿದೆ ಅಲ್ಲದೇ , ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕ್ರಮ ಕೈಗೊಂಡಿಲ್ಲ ಯಾಕೆ..?
ಹಲ್ಲೆ ನಡೆದು ಎರಡು ವಾರ ಕಳೆದರೂ ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಈವರೆಗೂ ಆರೋಪಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದು ಅತಿ ಶೀಘ್ರದಲ್ಲಿ ಅವರನ್ನು ಬಂಧಿಸಿ ಅರೋಪ ಪಟ್ಟಿಯನ್ನು ತಯಾರಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.

ಇದೇ ಸಂದರ್ಭ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಹಾಗೂ ಕುಂದಾಪುರ ಡಿವೈಎಸ್ಪಿ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ನ್ಯಾಯ ಒದಗಿಸುವ ್ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಪಾಲಕರ ಒಕ್ಕೂಟದ ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಕಾರ್ಯಾಧ್ಯಕ್ಷ ಮಂಜುನಾಥ ಹೆಬ್ಬಾರ್, ಕಾರ್ಯದರ್ಶಿ ಕೃಷ್ಣ ಪೂಜಾರಿ, ಬಾಬು ಕೆ. ದೇವಾಡಿಗ, ಡಿ. ರಾಧಾಕೃಷ್ಣ, ಮೂಕಾಂಬು ಬೈಂದೂರು, ನಾಗರಾಜ ತಲ್ಲೂರು, ನೊಂದ ಗಣಪತಿ ಪೂಜಾರಿ ಅಮಾಸೆಬೈಲು ಮೊದಲಾದವರಿದ್ದರು.

Write A Comment